Monday February 12 2018

Follow on us:

Contact Us

ನ್ಯಾ. ಲೋಯಾ ಮರಣೋತ್ತರ ವರದಿಯು ನಿಜಕ್ಕೂ ಸ್ಫೋಟಕ ಸುದ್ದಿ: ಪ್ರಶಾಂತ್ ಭೂಷಣ್

ನ್ಯೂಸ್ ಕನ್ನಡ ವರದಿ-(12.2.18): ನವದೆಹಲಿ: ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣ ಕುರಿತಾದ ವಿಚಾರಣೆ ನಡೆಸುತ್ತಿದ್ದ ನ್ಯಾ. ಹರ್ ಕಿಶನ್ ಬ್ರಿಜ್ ಗೋಪಾಲ್ ಲೋಯಾ ಅವರ ಅಸಹಜ ಸಾವಿಗೆ ಸಂಬಂಧಿಸಿ ಮರಣೋತ್ತರ ಪರೀಕ್ಷೆಯ ವರದಿಯ ದಾಖಲೆಗಳನ್ನು ಪರಿಶೀಲಿಸಿರುವ ಖ್ಯಾತ ಪೋರೆನ್ಸಿಕ್ ತಜ್ಞ ಡಾ.ಆರ್ ಕೆ ಶರ್ಮಾ ಅವರು , ಲೋಯಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಅಧಿಕಾರಿಗಳ ಹೇಳಿಕೆಯನ್ನು ನಿರಾಕರಿಸಿರುವ ಬೆನ್ನಲ್ಲೇ ಇದೀಗ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ತನ್ನ ಟ್ವಿಟರ್ ನಲ್ಲಿ ‘ನಿಜಕ್ಕೂ ಇದೊಂದು ಸ್ಫೋಟಕ ಸುದ್ದಿ ‘ ಎಂದು ಟ್ವೀಟ್ ಮಾಡಿದ್ದಾರೆ.

ನ್ಯಾ.ಲೋಯಾ ಅವರ ಸಾವಿಗೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಿರುವ ಖ್ಯಾತ ಪೋರೆನ್ಸಿಕ್ ತಜ್ಞ ಡಾ.ಆರ್.ಕೆ ಶರ್ಮಾ, ‘ವರದಿಯ ದಾಖಲೆಗಳಲ್ಲಿ ಲೋಯಾ ಅವರು ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ, ಅವರು ಮಿದುಳಿನ ಅಘಾತದಿಂದ ಹಾಗೂ ವಿಷ ಸೇವನೆಯಿಂದಾಗಿ ಮೃತಪಟ್ಟಿದ್ದಾರೆ’ ಎಂದು ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು.

ಇದೀಗ ಈ ಕುರಿತು ಟ್ವೀಟ್ ಮಾಡಿರುವ ಖ್ಯಾತ ವಕೀಲ ಪ್ರಶಾಂತ್ ಭೂಷಣ್, ” ದೇಶದ ಖ್ಯಾತ ವೈದ್ಯಕೀಯ ತಜ್ಞ ಹಾಗೂ ಎಐಐಎಂಎಸ್ ನ ಮಾಜಿ ಮುಖ್ಯಸ್ಥರು ನ್ಯಾಯಾಧೀಶ ಲೋಯಾ ಅವರ ಮರಣೋತ್ತರ ವರದಿ ಹಾಗೂ ಒಳಾಂಗಗಳ ವರದಿಯನ್ನು ಪರಿಶೀಲಿಸಿದ ಬಳಿಕ , ನ್ಯಾ. ಲೋಯಾ ಅವರು ತಲೆಗೆ ಬಿದ್ದ ಏಟಿನಿಂದಾಗಿ ಹಾಗೂ ವಿಷ ಸೇವನೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಸರಕಾರದ ಹೇಳಿಕೆಯನ್ನು ಅವರು ನಿರಾಕರಿಸಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗಡಿಯಲ್ಲಿ ಹೋರಾಡುವ ಹೊಸ ಸೈನ್ಯ ಸೃಷ್ಟಿಸಲು ಆರೆಸ್ಸೆಸ್ ಗೆ ಮೂರೇ ದಿನ ಸಾಕು: ಮೋಹನ್ ಭಾಗ್ವತ್

ಮುಂದಿನ ಸುದ್ದಿ »

ಮದುವೆ ಮನೆಯಲ್ಲಿಯೂ ಮತಯಾಚನೆ ಮಾಡಿದ ಯಡಿಯೂರಪ್ಪ!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×