Tuesday February 13 2018

Follow on us:

Contact Us

ಚುನಾವಣೆ ಬಂದಾಗ ಬಿಜೆಪಿಗೆ ಮೀನುಗಾರರ ಹಾಗೂ ಹಿಂದೂಗಳ ನೆನಪಾಗುತ್ತದೆ: ಪ್ರಮೋದ್ ಮಧ್ವರಾಜ್

ನ್ಯೂಸ್ ಕನ್ನಡ ವರದಿ: ಉಡುಪಿಯ ಪ್ರಸಿದ್ಧ ಕಡಿಯಾಳಿ ಶ್ರೀಮಹಿಷರ್ಮನಿ ದೇವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ‘ಚುನಾವಣೆ ಬಂದಾಗಷ್ಟೇ ಬಿಜೆಪಿಯವರಿಗೆ ಮೀನುಗಾರರು ಹಾಗೂ ಹಿಂದುಗಳ ನೆನಪಾಗುತ್ತದೆ’ ಕಿಡಿಕಾರಿದ್ದಾರೆ.

ಅಮಿತ್ ಷಾ ಮೀನುಗಾರರ ಸಮಾವೇಶ ಮಾಡಿದ ಮಾತ್ರಕ್ಕೆ ಮರುಳಾಗಲು ಮೀನುಗಾರರೇನು ಮೂರ್ಖರಲ್ಲ, ಕಚ್ಚಾ ತೈಲ ದರ ಇಳಿಕೆಯಾದರೂ ಕೇಂದ್ರ ಸರಕಾರ ಡೀಸೆಲ್ ದರ ಇಳಿಸದೆ ಇರುವುದರಿಂದ ಮೀನುಗಾರರು ದೋಣಿಗಳಿಗೆ ಡೀಸೆಲ್ ಹಾಕಲು ಪರದಾಡುತ್ತಿದ್ದಾರೆ. ಕೇಂದ್ರ ಸರಕಾರ ಡೀಸೆಲ್ ಸಹಾಯಧನ ನೀಡುತ್ತಿಲ್ಲ. ಆದರೆ, ರಾಜ್ಯ ಸರಕಾರ ಪ್ರತಿ ಲೀಟರ್ ಡಿಸೇಲ್‌ಗೆ 8ರೂ. ಸಹಾಯಧನವನ್ನು ನೇರ ಖಾತೆಗೆ ಜಮೆ ಮಾಡುತ್ತಿದೆ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಇತ್ತೀಚೆಗೆ ಮತ್ಸ್ಯ ಉದ್ಯಮಿಗಳ ಮೇಲೆ ನಡೆದ ಐಟಿ ದಾಳಿ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ, ಪ್ರಾಮಾಣಿಕವಾಗಿ ತೆರೆಗೆ ಕಟ್ಟುತ್ತಿದ್ದೇನೆ. ದೇಶದ ಕಾನೂನಿನಂತೆ ನಡೆದುಕೊಳ್ಳುತ್ತಿರುವ ನನ್ನನ್ನು ಟಾರ್ಗೆಟ್ ಮಾಡುವುದಾದರೆ, ಅದು ದೇವರಿಂದ ಮಾತ್ರ ಸಾಧ್ಯ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕಣ್ಣೂರು: ಯುವ ಕಾಂಗ್ರೆಸ್ ಮುಖಂಡ ಶುಹೈಬ್ ಬರ್ಬರ ಹತ್ಯೆ!

ಮುಂದಿನ ಸುದ್ದಿ »

ಸಿದ್ದರಾಮಯ್ಯ ಅಪರಾಧ ರಹಿತ, ಕಳಂಕ ರಹಿತ ಮುಖ್ಯಮಂತ್ರಿ!: ಎಡಿಆರ್‌ ವರದಿ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×