Wednesday December 6 2017

Follow on us:

Contact Us

ಬಾಬರಿ ಮಸೀದಿ ಆವರಣವನ್ನು ಸ್ವಚ್ಛಗೊಳಿಸಲು ತೆರಳಿದ್ದೆವೇ ಹೊರತು ಧ್ವಂಸಗೊಳಿಸಲಲ್ಲ: ಪೇಜಾವರ ಶ್ರೀ

ನ್ಯೂಸ್ ಕನ್ನಡ ವರದಿ-(05.12.17): ಇಂದು ಬಾಬರೀ ಮಸ್ಜಿದ್ ಉರುಳಿಸಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ದಿನವಾಗಿದ್ದು, ಈ ಕುರಿತಂತೆ ಕನ್ನಡದ ಪ್ರಸಿದ್ಧ ಪತ್ರಿಕೆ ವಿಜಯಕರ್ನಾಟಕಕ್ಕೆ ಪೇಜಾವರ ಶ್ರೀ ಸಂದರ್ಶನ ನೀಡಿದ್ದಾರೆ. ಬಾಬರೀ ಮಸೀದಿಯ ಆವರಣವನ್ನು ಶುಚಿಗೊಳಿಸುವ ಸಲುವಾಗಿ ನಾವು ಅಲ್ಲಿಗೆ ತೆರಳಿದ್ದು, ಆದರೆ ಕಾರ್ಯಕರ್ತರು ಮಸೀದಿಯನ್ನು ಧ್ವಂಸಗೊಳಿಸಲು ಪ್ರಾರಂಭಿಸಿದ್ದರು. ಈ ವೇಳೆ ನಾಣು ಹಲವು ಬಾರಿ ಮೈಕ್ ನಲ್ಲಿ ಧ್ವಂಸಗೊಳಿಸಬೇಡಿ ಎಂದರೂ ಅವರು ಕೇಳಲಿಲ್ಲ. ನಾನು ಮಸೀದಿ ಧ್ವಂಸ ಮಾಡುವುದನ್ನು ತಡೆದಿದ್ದೇನೆಯೇ ಹೊರತು ಯಾವತ್ತೂ ಯಾರನ್ನೂ ಪ್ರಚೋದಿಸಿಲ್ಲ ಎಂದು ಅವರು ಹೇಳಿದ್ದಾರೆ.

ನನ್ನ ವಿರುದ್ಧ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಮಸೀದಿಯನ್ನು ಧ್ವಂಸಗೊಳಿಸಲು ಪ್ರಚೋದನೆ ನೀಡಿದ್ದೇನೆಂದು. ಆದರೆ ನಾನು ಯಾವತ್ತೂ ಪ್ರಚೋದನೆ ನೀಡಿಲ್ಲ. ಕರಸೇವಕರು ಮಸೀದಿಯ ಗುಮ್ಮಟವನ್ನು ಉರುಳಿಸಿದ ಸಂದರ್ಭದಲ್ಲಿ ನನ್ನ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೋರ್ವ ಕುಣಿದು ಸಂಭ್ರಮಿಸಲು ಪ್ರಾರಂಭಿಸಿದ್ದ. ಆದರೆ ನಾನು ಕೂಡಲೇ ಆತನ ಕಪಾಳಕ್ಕೆ ಬಾರಿಸಿದೆ. ಒಬ್ಬ ಸ್ವಾಮೀಜಿಯಾಗಿ ನಾನು ಹೊಡೆಯಬಾರದಿತ್ತು ಆದರೂ ನಾನು ಹೊಡೆದೆ. ನನಗಂತೂ ಆಕೃತ್ಯವನ್ನು ನೋಡಲು ಸಆಧ್ಯವಾಗಿಲ್ಲ. ನಾನು ಮಸೀದಿ ಧ್ವಂಸವನ್ನು ಆಗಲೇ ವಿರೋಧಿಸಿದ್ದೆ ಎಂದು ಅವರು ಹೇಳಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬಿಜೆಪಿಯವರ ಗಾಳಕ್ಕೆ ಬಾಯಿ ಹಾಕಿ ಸುಲಭಕ್ಕೆ ಸಿಕ್ಕಿಬೀಳುವ ವ್ಯಕ್ತಿ ನಾನಲ್ಲ: ಪ್ರಮೋದ್ ಮಧ್ವರಾಜ್

ಮುಂದಿನ ಸುದ್ದಿ »

“ಏಸು ಮತ್ತು ಪೈಗಂಬರ್ ಆಸ್ತಿತ್ವಕ್ಕೆ ದಾಖಲೆಗಳಿವೆ, ಶ್ರೀರಾಮ ಇದ್ದ ಅನ್ನುವುದಕ್ಕೆ ಸಾಕ್ಷ್ಯಗಳೇ ಇಲ್ಲ”

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×