Sunday January 8 2017

Follow on us:

Contact Us

ಉಳಿತಾಯ ಖಾತೆಗೆ ಪಾನ್ ಕಾರ್ಡ್ ಕಡ್ಡಾಯ-ಕೇಂದ್ರ ಸರ್ಕಾರ

 

ನ್ಯೂಸ್ ಕನ್ನಡ ನೆಟ್ ವರ್ಕ್(08.01.2017): ಕಪ್ಪುಹಣ ವನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ಉಳಿತಾಯ ಖಾತೆ(Savings bank account) ಹೊಂದಿರುವವರು ಪ್ಯಾನ್ ನಂಬರ್(PAN NUMBER) ಸಲ್ಲಿಸಲು ಕೇಂದ್ರ ಸರಕಾರವು ಆದೇಶಿಸಿದೆ.

ಕೇಂದ್ರ ಸರಕಾರವು ಕಪ್ಪು ಹಣವನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಆದೇಶದ ಬಳಿಕ ಬ್ಯಾಂಕ್ ಹಾಗೂ ಅಂಚೆ ಕಛೇರಿಯಲ್ಲಿ ಹಲವು ವರ್ಷದಿಂದ ನಡೆಯುತ್ತಿರುವ ಜಮೆಯ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಬಿಜೆಪಿ ನಾಯಕರಿಗೆ ನೋಟ್ ಬ್ಯಾನ್ ಬಗ್ಗೆ ಮೊದಲೇ ಎಚ್ಚರಿಸಲಾಗಿತ್ತು ಎನ್ನುವ ವಿಪಕ್ಷಗಳ ಆರೋಪದಿಂದಾಗಿ, ಈ ನೂತನ ಆದೇಶದಿಂದ ಸರಕಾರವು ವಿಪಕ್ಷಗಳ ವಿರೋಧದಿಂದ ಬಚಾವಾಗಲಿದೆ ಎಂದು ತಿಳಿದುಬಂದಿದೆ. ಸರಕಾರದ ಹೊಸ ಆದೇಶದ ಪ್ರಕಾರ ಉಳಿತಾಯ ಖಾತೆದಾರನು ಪಾನ್ ನಂಬರನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ. ಯಾರಿಗೆಲ್ಲ ಈ ಬಗ್ಗೆ ಮಾಹಿತಿ ಲಭಿಸಿಲ್ಲವೋ ಅವರಿಗೆ ಸರಕಾರವು 55 ದಿವಸದ ಗಡುವನ್ನು ನೀಡಿದೆ. ಫೆ.28 ಪಾನ್ ಕಾರ್ಡ್ ಸಲ್ಲಿಸಲು ಕೊನೆ ದಿನಾಂಕವಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.

ನ.9 ರಿಂದ ಡಿ.30 ರ ಮಧ್ಯೆ ಯಾರ ಖಾತೆಗೆ 2.5 ಲಕ್ಷಕ್ಕಿಂತ ಅಧಿಕ ಮೊತ್ತ ಜಮೆಯಾಗಿದ್ದಲ್ಲಿ, ಅದರ ಬಗ್ಗೆ ಬ್ಯಾಂಕ್ ಹಾಗೂ ಅಂಚೆ ಕಛೇರಿ ಜ.15 ರ ಒಳಗೆ ಪಟ್ಟಿ ಸಲ್ಲಿಸಲಿದೆ. ಈ ಆದೇಶದ ಬಳಿಕ ಕಪ್ಪು ಹಣದ ಖಾತೆದಾರರ KYC ಪತ್ತೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಕರೆಂಟ್ ಖಾತೆಗೆ ಸಂಪೂರ್ಣ ಮಾಹಿತಿ ಸಲ್ಲಿಸಲಾಗಿದೆ, ಆದರೆ ಉಳಿತಾಯ ಖಾತೆಗೆ ಫಾರ್ಮ್ 60 ಸಲ್ಲಿಸಿಲ್ಲ ಈ ದಿನಾಂಕದ ಒಳಗೆ ಪಾನ್ ಕಾರ್ಡ್ ಸಲ್ಲಿಸದಿದ್ದಲ್ಲಿ ಸರಕಾರವು ಕಟ್ಟುನಿಟ್ಟಿನ ಕ್ರಮ ಜರುಗಿಸಲಿದೆ.

ಬ್ಯಾಂಕ್ ಹಾಗೂ ಅಂಚೆ ಕಛೇರಿಗಳಲ್ಲಿರುವ ಕರೆಂಟ್ ಅಕೌಂಟ್ ಖಾತೆಯ ವರದಿಯನ್ನು ಸಲ್ಲಿಸಲು ಸರಕಾರ ಆದೇಶಿಸಿದೆ ಎಂದು ತಿಳಿದುಬಂದಿದೆ. ಎ.1, 2016 ರಿಂದ ನ.9 ರ ಮಧ್ಯೆ ನಡೆದ ವಹಿವಾಟಿನ ಸಂಪೂರ್ಣ ಮಾಹಿತಿ ನೀಡ ಬೇಕಾಗಿದ್ದು, ನೋಟ್ ಬ್ಯಾನ್ ಬಳಿಕ 12.5 ಲಕ್ಷ ಮತ್ತು ಒಂದು ಮತ್ತು ಅದಕ್ಕಿಂತ ಹೆಚ್ಚು ಖಾತೆಗಳಲ್ಲಿ ಒಟ್ಟು 2.5 ಲಕ್ಷಕ್ಕಿಂತ ಅಧಿಕ ಹಣ ಜಮೆ ಮಾಡಿದ್ದರೆ ಅದನ್ನು ಸರಕಾರಕ್ಕೆ ನೀಡಬೇಕಾಗಿದೆ.

ನೂತನ ಆದೇಶದ ಪ್ರಕಾರ ಸುಮಾರು 50,000 ರೂ. ಕ್ಕಿಂತ ಅಧಿಕ ನಗದಿನ ವಹಿವಾಟಿನ ಬಗ್ಗೆ ಬ್ಯಾಂಕ್, ಅಂಚೆ ಕಛೇರಿ, ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಿಗೆ ರೆಕಾರ್ಡ್ ಜೊತೆಗೆ ಪಾನ್ ಕಾರ್ಡ್ ಅಥವಾ ಫಾರ್ಮ್ 60 ತೆಗೆಯುವುದು ಕಡ್ಡಾಯವಾಗಿದೆ. ಇದರಿಂದಾಗಿ ನೋಟ್ ಬ್ಯಾನ್ ಬಳಿಕ ನಕಲಿ ಬ್ಯಾಂಕ್ ಖಾತೆಗಳಲ್ಲಿ ಜಮೆಯಾಗಿರುವ ಅಕ್ರಮ ಹಣದ ಬಗ್ಗೆ ತಿಳಿಯಲು ಈ ಆದೇಶವನ್ನು ಹೊರತಂದಿದೆ ಎಂದು ಸರಕಾರ ತಿಳಿಸಿದೆ. ಈ ಆದೇಶದಲ್ಲಿ ಕೋ-ಆಪರೇಟಿವ್ ಬ್ಯಾಂಕ್ ಗಳೂ ಒಳಪಡಲಿದೆ. ಒಂದು ವೇಳೆ ಒರ್ವ ವ್ಯಕ್ತಿ ವಿಬಿನ್ನ ಖಾತೆಗಳಲ್ಲಿ ಹಣವನ್ನು ಜಮೆ ಮಾಡಿದ್ದರೆ ಆತನ ವಿರುದ್ದವೂ ಕಟ್ಟುನಿಟ್ಟಿನ ಕ್ರಮ ಜರುಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ವರದಿಗಳ ಪ್ರಕಾರ ಸರಕಾರವು ಈ ರೀತಿಯ ಖಾತೆಗಳ ವಿತ್ತೀಯ ವರ್ಷದ ನೋಟ್ ಬ್ಯಾನ್ ಗಿಂತ ಮುಂಚಿನ ದಾಖಲೆಗಳನ್ನು ಸಲ್ಲಿಸಲು ಆದೇಶಿಸಿದೆ. ಜಮೆ ಮಾಡಿದ ಒಟ್ಟು ಮೊತ್ತ, ನಗದೀಕರಣ ಮಾಡಿದ ಒಟ್ಟು ಮೊತ್ತ ಹಾಗೂ ನೋಟ್ ಬ್ಯಾನ್ ಬಳಿಕ ಜಮೆ ಮಾಡಿದ ಒಟ್ಟು ಮೊತ್ತದ ಸಂಪೂರ್ಣ ಮಾಹಿತಿಯ ಬಗ್ಗೆ ಸರಕಾರವು ಬ್ಯಾಂಕ್ ನಿಂತ ಮಾಹಿತಿ ಕೇಳಿದೆ. ಸರಕಾರವು ಇದರ ಬಗ್ಗೆ ಆದಾಯ ತೆರಿಗೆ ಕಾನೂನು 1962 ಕ್ಕೆ ಸಂಬಂಧಿಸಿದ ಶಾಸನಗಳಿಗೆ ಶುಕ್ರವಾರ ಅಂಕಿತ ಹಾಕಿದೆ ಎಂದು ತಿಳಿದುಬಂದಿದೆ.

nkrkmhap

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕಾಲು ಜಾರಿ ನೀರಿಗೆ ಬಿದ್ದು ಯಾತ್ರಾರ್ಥಿ ಸಾವು

ಮುಂದಿನ ಸುದ್ದಿ »

ವಿನಾಯಕ ಬಾಳಿಗರ ತಾಯಿ ಲಕ್ಷ್ಮೀ ಬಾಳಿಗಾ ನಿಧನ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×