Saturday October 21 2017

Follow on us:

Contact Us

ಇನ್ನುಮುಂದೆ ಸರಕಾರವನ್ನು ಹೊಗಳುವ ಸಿನಿಮಾ ಮಾತ್ರ ಮಾಡಬೇಕಾದೀತು: ಪಿ. ಚಿದಂಬರಂ

ನ್ಯೂಸ್ ಕನ್ನಡ ವರದಿ-(21.10.17): ತಮಿಳುನಾಡಿನ ಖ್ಯಾತ ಸಿನಿಮಾ ತಾರೆ ಇಳಯದಳಪತಿ ವಿಜಯ್ ಅಭಿನಯದ ಹೊಸ ಮೆರ್ಸಲ್ ಚಿತ್ರವು ದೀಪಾವಳಿ ದಇನದಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ, ಸಿಂಗಾಪುರ್ ನಲ್ಲಿ 7% ಜಿಎಸ್ಟಿಯಿದ್ದು ನಮ್ಮ ದೇಶದಲ್ಲಿ 28% ಇದೆ. ರೋಗಿಗಳ ಔಷಧಿಗಳಿಗೆ ಜಿಎಸ್ಟಿ ಹಾಕಿ ಮದ್ಯಕ್ಕೆ ಜಿಎಸ್ಟಿ ವಿಧಿಸುವುದಿಲ್ಲ. ಅಲ್ಲದೇ ನೋಟ್ ಬ್ಯಾನ್ ಕುರಿತಾದ ದೃಶ್ಯಗಳು ಇದ್ದು, ಈ ದೃಶ್ಯಗಳನ್ನು ತೆಗೆಯಬೇಕೆಂದು ಬಿಜೆಪಿಗರು ಪಟ್ಟು ಹಿಡಿಯಲಾರಂಭಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಇನ್ನು ಮುಂದೆ ಆಡಳಿತದಲ್ಲಿರುವ ಸರಕಾರವನ್ನು ಹೊಗಳುವಂತಹ ಚಿತ್ರಗಳನ್ನು ಮಾತ್ರ ಮಾಡಬೇಕೆಂಬ ನಿಯಮ ಬಂದರೂ ಅಚ್ಚರಿಯಿಲ್ಲ. ಚಿತ್ರ ನಿರ್ಮಾಪಕರೇ, ಹೊಸದೊಂದು ನಿಯಮ ಬಂದಿದೆ. ನೀವು ಇನ್ನು ಮುಂದೆ ಸರಕಾರವನ್ನು ಹೊಗಳುವಂತಹ ಚಿತ್ರಗಳನ್ನು ಮಾತ್ರ ಮಾಡಬೇಕಾಗಿದೆ ಎಂದು ಟ್ವಿಟ್ಟರ್ ನಲ್ಲಿ ಟೀಕಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಹಿಂದೂ ಧರ್ಮೀಯರಿಗೆ ದೀಪಾವಳಿ ಶುಭಾಷಯ ಕೋರಿದ ಪಾಕ್ ಪ್ರಧಾನಿ

ಮುಂದಿನ ಸುದ್ದಿ »

ಡೆನ್ಮಾರ್ಕ್ ಓಪನ್; ಶ್ರೀಕಾಂತ್ ಸೆಮಿ ಫೈನಲ್ ಗೆ: ಪ್ರಣಯ್ ಹಾಗೂ ಸೈನಾ ಸವಾಲು ಅಂತ್ಯ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×