Tuesday March 13 2018

Follow on us:

Contact Us

ಛತ್ತೀಸ್ ಗಢ: ನಕ್ಸಲರ ದಾಳಿಗೆ 9 ಮಂದಿ ಭಾರತೀಯ ಯೋಧರು ಹುತಾತ್ಮ!

ನ್ಯೂಸ್ ಕನ್ನಡ ವರದಿ-(13.3.18): ನಕ್ಸಲ್ ಪೀಡಿತ ಪ್ರದೇಶವಾಗಿರುವ ಛತ್ತೀಸ್ ಗಢದ ಸುಕ್ಮಾ ಎಂಬ ಪ್ರದೇಶದಲ್ಲಿ ನಕ್ಸಲರು ದಾಳಿ ಮಾಡಿರುವ ಪರಿಣಾಮ 9 ಮಂದಿ ಭಾರತೀಯ ಯೋಧರು ಹುತಾತ್ಮರಾದ ಘಟನೆಯು ನಡೆದಿದೆ. ಭದ್ರತಾ ಪಡೆಗಳು ರಾಜ್ಯದಲ್ಲಿ 10 ನಕ್ಸಲರನ್ನು ಹೊಡೆದುರುಳಿಸಿದ 11 ದಿನಗಳ ಬಳಿಕ ಮಾವೋ ಉಗ್ರರು ಈ ಪ್ರತಿದಾಳಿ ನಡೆಸಿದ್ದಾರೆ. 6 ತಿಂಗಳ ಹಿಂದೆ 25 ಸಿಆರ್‌ಪಿಎಫ್‌ ಯೋಧರನ್ನು ಮಾವೋ ಉಗ್ರರು ಕೊಂದಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ 300-400 ಮಂದಿ ಎಡಪಂಥೀಯ ಉಗ್ರರು ರಸ್ತೆ ನಿರ್ಮಾಣದಲ್ಲಿ ಸಹಕರಿಸುತ್ತಿದ್ದ 99 ಯೋಧರ ಮೇಲೆ ಹಠಾತ್‌ ದಾಳಿ ನಡೆಸಿದ್ದರು.

ಕಳೆದ ವರ್ಷದ ಮಾರ್ಚ್‌ನಲ್ಲೂ ಸುಕ್ಮಾ ಜಿಲ್ಲೆಯಲ್ಲಿ ರಸ್ತೆ ತೆರವುಗೊಳಿಸುತ್ತಿದ್ದ 12 ಸಿಆರ್‌ಪಿಎಫ್‌ ಸಿಬ್ಬಂದಿಯ ಮೇಲೆ ನಕ್ಸಲರು ದಾಳಿ ನಡೆಸಿದ್ದರು.ನಕ್ಸಲ್ ಹಾಗೂ ಯೋಧರ ನಡುವಿನ ಸಂಘರ್ಷಗಳಲ್ಲಿ ಯೋಧರು ಸಾಕಷ್ಟು ಯಶ ಕಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಛತ್ತೀಸ್‏ಗಢದಲ್ಲಿ ನಡೆದ ಪ್ರತ್ಯೇಕ ಎನ್ ಕೌಂಟರ್ ಪ್ರಕರಣಗಳಲ್ಲಿ 300 ಕ್ಕೂ ಅಧಿಕ ನಕ್ಸಲರನ್ನು ಕೊಲ್ಲಲಾಗಿದೆ ಎಂದು ಮಧ್ಯ ಪ್ರದೇಶ ಗೃಹ ಸಚಿವ ರಾಮ್ ಸೇವಕ್ ಪೈಕ್ರಾ ಇತ್ತೀಚೆಗಷ್ಟೆ ವಿಧಾನಸಭೆಯಲ್ಲಿ ತಿಳಿಸಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನಮ್ಮ ಸಿದ್ದರಾಮಯ್ಯ ದೇಶದಲ್ಲೇ ನಂ.1 ಮುಖ್ಯಮಂತ್ರಿ!: ಎಚ್.ಸಿ.ಮಹದೇವಪ್ಪ

ಮುಂದಿನ ಸುದ್ದಿ »

ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ರಕ್ತದಲ್ಲೇ ಪ್ರಜಾಪ್ರಭುತ್ವವಿಲ್ಲ!: ಅನಂತ್ ಕುಮಾರ್

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×