Wednesday October 11 2017

Follow on us:

Contact Us

ಹಿಂದೂ ಶ್ಲೋಕ ತಪ್ಪಾಗಿ ಹಾಡಿದ್ದಕ್ಕೆ ಮುಸ್ಲಿಮ್ ಗಾಯಕನ ಬರ್ಬರ ಕೊಲೆ!

ನ್ಯೂಸ್ ಕನ್ನಡ ವರದಿ-(11.10.17): ದೇಶದಲ್ಲಿನ ನ್ಯಾಯ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಡುತ್ತಿದ್ದು, ಅಲ್ಪಸಂಖ್ಯಾತರ ಮತ್ತು ದಲಿತರ ಮೇಲೆ ವ್ಯಾಪಕವಾಗಿ ಹಿಂಸಾಚಾರಗಳು ನಡೆಯುತ್ತಿವೆ. ಇದೀಗ ರಾಜಸ್ಥಾನದಲ್ಲೊಂದು ಕ್ರೂರ ಘಟನೆ ನಡೆದಿದ್ದು, ಹಿಂದೂ ದೇವತೆಯ ಶ್ಲೋಕಗಳನ್ನು ತಪ್ಪಾಗಿ ಹಾಡಿದ ಕಾರಣಕ್ಕಾಗಿ ಮುಸ್ಲಿಮ್ ಗಾಯಕರೋರ್ವರನ್ನು ಬರ್ಬರವಾಗಿ ಥಳಿಸಿ ಹತ್ಯೆಗೈಯಲಾಗಿದೆ. ಈ ಹತ್ಯೆಯ ಕಾರಣದಿಂದ ಗ್ರಾಮದಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಸುಮಾರು 200ಕ್ಕೂ ಹೆಚ್ಚು ಮುಸ್ಲಿಮರು ಗ್ರಾಮವನ್ನು ತೊರೆದಿದ್ದಾರೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ಗಡಿಪ್ರದೇಶಕ್ಕೆ ಒಳಪಟ್ಟ ರಾಜಸ್ಥಾನದ ಜೈಪುರದ ದಾಂತಲ್ ಎಂಬ ಗ್ರಾಮದಲ್ಲಿ ಈ ಘಟನೆಯು ನಡೆದಿದ್ದು, ಘಟನೆಯ ಬಳಿಕ ಇಡೀ ಗ್ರಾಮವೇ ಉದ್ವಿಗ್ನಗೊಂಡಿತ್ತು. ಈ ಹಿನ್ನೆಲೆಯಲ್ಲಿ ಹಿಂಸಾಚಾರಕ್ಕೆ ಭಯಪಟ್ಟು ಸುಮಾರು 200ಕ್ಕೂ ಹೆಚ್ಚು ಮುಸ್ಲಿಮರು ಸಮೀಪದ ಸರಕಾರಿ ಶಾಲೆ ಮತ್ತು ಕಚೇರಿಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್ 27ರಂದು ಮುಸ್ಲಿಂ ಜನಪದ ಗಾಯಕ 45ರ ಹರೆಯದ ಅಹಮದ್ ಖಾನ್ ಎನ್ನುವವರು ಸಮಾರಂಭವೊಂದರಲ್ಲಿ ಹಾಡುತ್ತಿರುವ ವೇಳೆ ಹಿಂದೂ ದೇವತೆಯ ಶ್ಲೋಕಗಳನ್ನು ತಪ್ಪಾಗಿ ಪಠಿಸಿದ್ದಾರೆ. ಈ ವೇಳೆ ತಕರಾರು ತೆಗೆದ ಅರ್ಚಕ ರಮೇಶ್ ಸುತಾರ್ ಎಂಬಾತ ತನ್ನ ಬೆಂಬಲಿಗರೊಂದಿಗೆ ಬಂದು ಸಂಗೀತ ಪರಿಕರಗಳನ್ನು ಧ್ವಂಸಗೈದು ಮಾರಣಾಂತಿಕವಾಗಿ ಥಳಿಸಿ ಖಾನ್ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಲಾಂಗ ಮಂಗನಿಯಾರ್ ಜನಾಂಗಕ್ಕೆ ಸೇರಿದ ಗಾಯಕ ಅಮಹದ್ ಖಾನ್ ಅವರು ಹಿಂದೂ ದೇವರ ಗೀತೆಗಳನ್ನು ದೇವಾಲಯಗಳಲ್ಲಿ ಆಡುತ್ತಿದ್ದರು. ತಲೆಮಾರುಗಳಿಂದ ಅವರ ಕುಟುಂಬ ಈ ಸಂಪ್ರಾದಯ ಆಚರಿಸಿಕೊಂಡು ಬಂದಿತ್ತು. ಇದೀಗ ಗಾಯಕನ ಕೊಲೆಯಿಂದಾಗಿ ಹೆದರಿಸುವ ಗ್ರಾಮಸ್ಥರು ತಮ್ಮ ಮನೆಗಳಿಗೆ ಮರಳಲು ಹೆದರುತ್ತಿದ್ದಾರೆ. ಗ್ರಾಮಕ್ಕೆ ಸರ್ಕಾರ ಪ್ಯಾರ ಮಿಲಿಟರಿ ಪಡೆಗಳನ್ನು ಕಳುಹಿಸಿ ಭದ್ರತೆ ಕೈಗೊಂಡಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗೋಧ್ರಾ ಹತ್ಯಾಕಾಂಡವು ಭಯೋತ್ಪಾದಕ ಕೃತ್ಯವಲ್ಲ: ಗುಜರಾತ್ ಹೈಕೋರ್ಟ್

ಮುಂದಿನ ಸುದ್ದಿ »

ಅ.13ರ ಪೆಟ್ರೋಲ್ ಬಂಕ್ ಮುಷ್ಕರ ರದ್ದು ಮಾಡಿದ ಮಾಲಕರು!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×