Tuesday November 14 2017

Follow on us:

Contact Us

ಗೋರಕ್ಷಣೆಯ ನೆಪದಲ್ಲಿ ಹತ್ಯೆಗೈಯುವ ಕ್ರಿಮಿನಲ್ ಗಳಿಗೆ ಕೋಮುಬಣ್ಣವನ್ನು ಹಚ್ಚಬೇಡಿ: ನಕ್ವಿ

ನ್ಯೂಸ್ ಕನ್ನಡ ವರದಿ(14.11.2017): ದೇಶದೆಲ್ಲೆಡೆ ಗೋರಕ್ಷಣೆಯ ಹೆಸರಿನಲ್ಲಿ ದಾಳಿಗಳು ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಈ ಕುರಿತಾದಂತೆ ಎಚ್ಚರಿಕೆ ನೀಡಿದರೂ ಗೋವಿನ ಹೆಸರಿನಲ್ಲಿ ಕೊಲೆಗೈಯುದು, ಹಲ್ಲೆಗೈಯುವುದು ವ್ಯಾಪಕವಾಗಿ ನಡೆಯುತ್ತಿದೆ. ಮೊನ್ನೆ ತಾನೇ ಜಾನುವಾರು ಸಾಗಾಟ ಮಾಡುತ್ತಿದ್ದ ಉಮರ್ ಎಂಬ ವ್ಯಕ್ತಿಯನ್ನು ಗೋರಕ್ಷಕರು ಗುಂಡಿಕ್ಕಿ ಕೊಂದು ರೈಲ್ವೇ ಹಳಿಯ ಮೇಲೆ ಎಸೆದು ಹೋಗಿದ್ದರು. ಇದೀಗ ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ, ಗೋರಕ್ಷಣೆಯ ಹೆಸರಿನಲ್ಲಿ ಜನರನ್ನು ಥಳಿಸಿ ಕೊಲ್ಲುವ ಪ್ರಕ್ರಿಯೆಯು ಒಂದು ಕ್ರಿಮಿನಲ್ ಕೃತ್ಯವಾಗಿದ್ದು, ಇದಕ್ಕೆ ಕೋಮುಬಣ್ಣವನ್ನು ಹಚ್ಚಬೇಡಿ ಎಂದು ಹೇಳಿದ್ದಾರೆ.

ಗೋರಕ್ಷಕರ ಗುಂಪೊಂದು ಉಮರ್ ಎಂಬ ವ್ಯಕ್ತಿಯನ್ನು ಥಳಿಸಿದ ಕುರಿತಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ನಕ್ವಿ, ಗೋರಕ್ಷಣೆಯ ಹೆಸರಿನಲ್ಲಿ ನಡೆಸುವ ಕೃತ್ಯವು ದೇಶದ ಅಭಿವೃದ್ಧಿಗೆ ಅಡ್ಡಿ ಮಾಡುವಂತಹ ಕಾರ್ಯವಾಗಿದೆ. ಅಂತಹಾ ಕೃತ್ಯಗಳನ್ನು ಎಸಗುವವರು ಕಾನೂನು ವಿರೋಧಿಗಳು ಮತ್ತು ದೇಶದ ಅಭಿವೃದ್ಧಿಯ ವಿರೋಧಿಗಳಾಗಿರುತ್ತಾರೆ. ಈ ವಿಷಯಕ್ಕೆ ಕೋಮುಬಣ್ಣವನ್ನು ಹಚ್ಚಿ ದೇಶದ ಅಭಿವೃದ್ಧಿಗೆ ಹಾನಿ ಮಾಡುವಂತಹ ಕಾರ್ಯಕ್ಕೆ ಬೆಂಬಲ ಸೂಚಿಸದಿರಿ ಎಂದು ನಕ್ವಿ ಹೇಳಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ರಾಮಜನ್ಮಭೂಮಿಯನ್ನು ಬಿಟ್ಟು ಬೇರೆ ಎಲ್ಲಿ ಬೇಕಾದರೂ ಮಸೀದಿ ಕಟ್ಟಿ: ಸುಬ್ರಮಣಿಯನ್ ಸ್ವಾಮಿ

ಮುಂದಿನ ಸುದ್ದಿ »

ಟೈಮ್ಸ್ ನೌ ಚಾನೆಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಪಾಪ್ಯುಲರ್ ಫ್ರಂಟ್

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×