Saturday June 10 2017

Follow on us:

Contact Us

ಮಂಗಳೂರಿನ ಹಿಂದೂ ಸಂಘಟನೆಗಳ ರಹಸ್ಯ ಕಾರ್ಯಸೂಚಿಯನ್ನು ಬಿಚ್ಚಿಟ್ಟ ರಿಪಬ್ಲಿಕ್ ಟಿವಿ!

ನ್ಯೂಸ್ ಕನ್ನಡ ವರದಿ (10.06.17): 2009ರ ಜನವರಿ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ಬಳಿಕ ನೈತಿಕ ಪೊಲೀಸ್ ಗಿರಿ ಎಂಬ ಪದವು ಎಲ್ಲರ ನಾಲಗೆಯಲ್ಲೂ ಹರಿದಾಡಲು ಪ್ರಾರಂಭಿಸಿತು. ಶ್ರೀರಾಮ ಸೇನೆಯ ಕಾರ್ಯಕರ್ತರು ಸಂಸ್ಕøತಿ ರಕ್ಷಣೆ ಎಂಬ ಹೆಸರಿನಲ್ಲಿ ದಾಳಿಗೈಯಲು ಪ್ರಾರಂಬಿಸಿದ್ದರು. ಬಳಿಕ ಇಂತಹ ದಾಳಿಗಳೆಲ್ಲವೂ ಮಂಗಳೂರಿನಲ್ಲಿ ಸರ್ವೇಸಾಮಾನ್ಯವಾಯಿತು. ಅನ್ಯಧರ್ಮಿಯ ಯುವಕನೊಂದಿಗೆ ಮಾತನಾಡಿದ್ದು ಕಂಡರೆ ಸಾಕು, ಹಿಗ್ಗಾಮುಗ್ಗ ಥಳಿಸಲು ಯುವಕರ ದಂಡೇ ಬಂದು ಸೇರುವುದು ಎಲ್ಲೆಡೆಯೂ ಕಾಣಸಿಗುವಂತಾಯಿತು.

ಇದರ ಕುರಿತಾದಂತೆ ರಿಪಬ್ಲಿಕ್ ಟಿವಿಯ ದಕ್ಷಿಣ ಭಾರತ ಬ್ಯೂರೋಚೀಫ್ ಆದ ಪೂಜಾ ಪ್ರಸನ್ನ ಎಂಬ ಪತ್ರಕರ್ತೆ ರಹಸ್ಯ ಕಾರ್ಯಾಚರಣೆಯ ವೀಡಿಯೊ ಮಾಲಿಕೆಗಳನ್ನು ಹೊರತಂದಿದ್ದಾರೆ. ನಾನೋರ್ವ ಹಿಂದೂ ಮಹಿಳೆಯಾಗಿ ನಿಮ್ಮ ಸಂಘಟನೆಗೆ ಬೆಂಬಲ ನೀಡುತ್ತಿದ್ದೇನೆ ಎನ್ನುತ್ತಲೇ ಬಜರಂಗದಳ, ಶ್ರೀರಾಮಸೇನೆ ಮತ್ತು ವಿಶ್ವ ಹಿಂದೂ ಪರಿಷತ್ ನ ರಹಸ್ಯ ಕಾರ್ಯಸೂಚಿಯನ್ನು ಬಯಲಿಗೆಳೆದಿದ್ದಾರೆ.

ಮೊದಲನೆಯ ಸರಣಿಯಲ್ಲಿ ಮಂಗಳೂರಿನ ಬಜರಂಗದಳದ ಪ್ರಮುಖನಾದ ಶರಣ್ ಪಂಪ್ ವೆಲ್ ಸಂದರ್ಶನ ನಡೆಸಿದರು. ಶರಣ್ 2005ರಿಂದ ಬಜರಂಗದಳದಲ್ಲಿ ಸಕ್ರಿಯನಾಗಿದ್ದು, ಹಲವು ಪ್ರಮುಖ ದಾಳಿಗಳ ಪ್ರಕರಣಗಳು ಈತನ ಮೇಲಿವೆ. ಅಲ್ಲದೇ, ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಸೆಕ್ಯೂರಿಟಿ ಗಾರ್ಡ್‍ಗಳನ್ನು ಪೂರೈಸುವ ಧಂಧೆಯನ್ನೂ ಇಟ್ಟುಕೊಂಡಿದ್ದ. ಶರಣ್ ಪಂಪ್ ವೆಲ್ ಮಾತನಾಡುತ್ತಾ, ಬುದ್ಧಿ ಹೇಳುವ ನೆಪದಲ್ಲಿ ಯುವತಿಯರಿಗೆ ಎರಡೇಟು ಹೊಡೆದರೂ ಪರವಾಗಿಲ್ಲ ಎನ್ನುತ್ತಾನೆ.

ಬಳಿಕ ಎಪ್ರಿಲ್ 2016ರಲ್ಲಿ ಹಿಂದೂ ಯುವತಿಗೆ ಮೆಸೇಜ್ ಮಾಡುತ್ತಾನೆಂಬ ಆರೋಪದಲ್ಲಿ ಮೊಬೈಲ್ ಶಾಪ್ ಇಟ್ಟುಕೊಂಡಿದ್ದ ಮುಸ್ಲಿಮ್ ಯುವಕನೋರ್ವನಿಗೆ ಆತನ ಅಂಗಡಿಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ್ದರು. ನನ್ನಲ್ಲಿ ವಾಟ್ಸಾಪ್ ಇಲ್ಲ ಎಂದು ಆತ ಬೊಬ್ಬಿರಿಯುತ್ತಿದ್ದರೂ ಹಿಂದೆಮುಂದೆ ನೋಡದೆ ಬಾರಿಸಿದ್ದರು. ಬಳಿಕ ಯುವತಿಯು, ನನಗೆ ಮೆಸೇಜ್ ಕಳಿಸಿದ ವ್ಯಕ್ತಿ ಈತನಲ್ಲ ಎಂದಿದ್ದಳು.

ಫೆಬ್ರವರಿ 2016ರಲ್ಲಿ ಹಿಂದೂ ಯುವತಿ ಮತ್ತು ಮುಸ್ಲಿಮ್ ಯುವಕ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಯುವಕನನ್ನು ಒಳುಡುಪಿನಲ್ಲಿ ಕಂಬಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಥಳಿಸಿದ್ದರು. ಇದಕ್ಕೆಲ್ಲಾ ಲವ್ ಜಿಹಾದ್ ಎಂಬ ಹೆಸರನ್ನು ನೀಡಿ ಮುಸ್ಲಿಮ್ ಯುವಕರನ್ನು ಸಂಶಯದ ದೃಷ್ಟಿಯಲ್ಲಿ ನೋಡುವಂತೆ ಮಾಡುತ್ತಿದ್ದರು.

ಇವೆಲ್ಲದರ ಪ್ರಮುಖ ರೂವಾರಿಯಾಗಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ 2010ರಲ್ಲಿ ತೆಹಲ್ಕಾ ಸುದ್ದಿವಾಹಿನಿ ನಡೆಸಿದ್ದ ರಹಸ್ಯ ಕಾರ್ಯಾಚರಣೆಯಲ್ಲಿ ಕೋಮುಗಲಭೆ ನಡೆಸಲು ಹಣ ಪಡೆದು ಕುಖ್ಯಾತಿ ಪಡೆದಿದ್ದ. ಈತ ಹೇಳುವ ಪ್ರಕಾರ, “ಮಂಗಳೂರಿನ ಮತ್ತು ಕರ್ನಾಟಕ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಪ್ರತಿಯೊಂದು ತರಗತಿ ಕೊಠಡಿಯಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರಿದ್ದಾರೆ. ಯಾವ ಯುವತಿ ಯಾವ ಯುವಕನೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಮಾಹಿತಿ ತಕ್ಷಣ ನಮ್ಮ ಮುಖಂಡರಿಗೆ ಬಂದು ತಲುಪುತ್ತದೆ. ಈ ಕುರಿತು ಮೊದಲು ಮನೆಯವರಿಗೆ ಮಾಹಿತಿ ನೀಡುತ್ತೇವೆ. ಬಳಿಕವೂ ಮುಂದುವರಿದರೆ ಅವರ ಕೈಕಾಲು ಮುರಿಯಲೂ ನಮಗೆ ಗೊತ್ತು ಎನ್ನುತ್ತಾನೆ ಮುತಾಲಿಕ್. ಪೂಜಾ ಪ್ರಸನ್ನರವರು ಮಾಡಿದ ಈ ರಹಸ್ಯ ಕಾರ್ಯಾಚರಣೆಯ ವೀಡಿಯೊ ನಿಮಗೆ ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ನೀಡಬಹುದು… ವೀಕ್ಷಿಸಿ

Who handed these misogynistic activists the power to interfere…

Who handed these misogynistic activists the power to interfere with how women lead their life? #RepublicStingsFringe

Posted by Republic on Monday, June 5, 2017

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

“ಮಹಾತ್ಮ ಗಾಂಧಿ ಒಬ್ಬ ಚತುರ ವ್ಯಾಪಾರಿ” ಎಂದ ಅಮಿತ್ ಶಾ ಕ್ಷಮೆ ಯಾಚನೆಗೆ ಕಾಂಗ್ರೆಸ್ ಆಗ್ರಹ

ಮುಂದಿನ ಸುದ್ದಿ »

ಜಮೀನು ವರ್ಗಾವಣೆಗೆ ನಿರಾಕರಿಸಿದ್ದಕ್ಕೆ ಸ್ವಂತ ತಂದೆಯನ್ನೇ ಕಟ್ಟಿಹಾಕಿದ ಮಗ!

ಸಿನೆಮಾ

 • ಸರಳವಾಗಿ ರಿಜಿಸ್ಟರ್ ಮದುವೆಯಾದ ಮುಸ್ತಫಾ-ಪ್ರಿಯಾಮಣಿ

  August 23, 2017

  ಬೆಂಗಳೂರು: ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದ ಬಹುಭಾಷಾ ತಾರೆ ಪ್ರಿಯಾಮಣಿ ಇಂದು ತಮ್ಮ ಹಲವು ಕಾಲದ ಗೆಳೆಯ ಮುಸ್ತಫಾರಾಜಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜಯನಗರ ರಿಜಿಸ್ಟರ್ ಆಫೀಸಿಗೆ ನಟಿ ...

  Read More
 • ಈ ಬಾರಿ ಗಣೇಶೋತ್ಸವ ಆಚರಿಸದ ಸಲ್ಮಾನ್ ಖಾನ್: ಕಾರಣವೇನು ಗೊತ್ತೇ?

  August 22, 2017

  ನ್ಯೂಸ್ ಕನ್ನಡ-(22.08.17): ಬಾಲಿವುಡ್ ನಟ ಸಲ್ಮಾನ್ ಖಾನ್ ಗಣಪತಿ ಭಕ್ತನಾಗಿದ್ದು, ಪ್ರತೀವರ್ಷವೂ ತಮ್ಮ ಮನೆಯಲ್ಲಿ ಗಣೇಶೋತ್ಸವವನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಸತತ 15ವರ್ಷಗಳಿಂದ ತಮ್ಮ ಮನೆಯಲ್ಲಿ ನಡೆಸುತ್ತಾ ಬಂದಿದ್ದ ವೈಭವದ ಗಣೇಶೋತ್ಸವವನ್ನು ಕೈಬಿಟ್ಟು ಸಲ್ಮಾನ್ ಖಾನ್ ...

  Read More
 • ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದ ತಮಿಳು ನಟ ಆರ್ಯ

  August 21, 2017

  ನ್ಯೂಸ್ ಕನ್ನಡ ವರದಿ-(21.08.17): ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ಯುವನಟ ಆರ್ಯ ಮಮ್ಮೂಟಿ ಅಭಿನಯದ ಗಾಡ್ ಫಾದರ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಕೇರಳದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಇದೀಗ ಸೂಪರ್ ಹಿಟ್ ಚಿತ್ರವಾದ ...

  Read More
 • ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿರುವ ಕ್ರಿಕೆಟಿಗ ಶ್ರೀಶಾಂತ್!

  August 16, 2017

  ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್‌ ಆರೋಪಗಳಿಂದ ಕಂಗಾಲಾಗಿದ್ದ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್‌ನ ಮಾಜಿ ಆಟಗಾರ ಶ್ರೀಶಾಂತ್ ಇತ್ತೀಚೆಗಷ್ಟೆ ನಿರಾಳರಾಗಿದ್ದಾರೆ. ಅವರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಜೀವ ನಿಷೇಧ ಹೇರಿತ್ತು. ಇತ್ತೀಚೆಗಷ್ಟೇ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×