Wednesday September 28 2016

Follow on us:

Contact Us

ಸುದ್ದಿಯಾಗದ ಕಲಾವಿದ ಅಹ್ಮದ್ ಮಿಕ್ದಾದ್ ರ ಅಸಾಧಾರಣ ಕಲಾಕೃತಿಗಳು

ನ್ಯೂಸ್ ಕನ್ನಡ ವಿಶೇಷ: ವೃತ್ತಿ ಮತ್ತು ಪ್ರವೃತ್ತಿಯ ಭಾಗವಾಗಿರುವ ಕಲೆ, ಸಾಹಿತ್ಯ, ಸಂಗೀತ ಎಲ್ಲವೂ ಡಿಜಿಟಲೀಕರಣಗೊಂಡಿರುವ ಇಂದಿನ ಯುಗದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಡಿಜಿಟಲೀಕರಣಗೊಳಿಸದೇ, ಸುಲಭ ವಿಧಾನಗಳ ಮೊರೆ ಹೋಗದೇ ವಿಭಿನ್ನ ಶೈಲಿಯ ಕಲಾಕೃತಿಗಳನ್ನು ತನ್ನ ಕುಂಚದಿಂದ ಮೂಡಿಸಬಲ್ಲ ಅತ್ಯುತ್ತಮ ಕಲಾವಿದರಾಗಿದ್ದೂ ಇನ್ನೂ ಕೂಡಾ ಎಲೆಮರೆಯ ಕಾಯಿಯಂತಿರುವ ಅಪ್ರತಿಮ ಕಲಾವಿದ ಕಲ್ಲಡ್ಕ ಸಮೀಪದ ದಿವಂಗತ ಇಸ್ಮಾಯೀಲ್ ಮುಸ್ಲಿಯಾರ್ ಮತ್ತು ಜಿ.ಎಂ ಮೈಮುನಾ ದಂಪತಿಯ ಪುತ್ರ  ಕಲ್ಲಡ್ಕ-ಗೋಳ್ತಮಜಲಿನ ಅಹ್ಮದ್ ಮಿಕ್ದಾದ್.

02

ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ಗ್ರಾಮದಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಪೂರೈಸಿ, ತನ್ನ ವಿದ್ಯಾಭ್ಯಾಸಕ್ಕಾಗಿ ಯಾರೊಂದಿಗೂ ಕೈಚಾಚದೇ ಸ್ವತಃ ಗದ್ದೆ ತೋಟ, ಅಡುಗೆ, ಕೂಲಿ ಕೆಲಸಗಳನ್ನು ಮಾಡಿಕೊಂಡು ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಪೂರೈಸಿದರು. ಈ ಸಂದರ್ಭದಲ್ಲೇ ಚಿತ್ರಕಲೆಯಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದರಿಂದ ಕಲೆಯಲ್ಲೇ ತನ್ನ ಭವಿಷ್ಯ ಅಡಗಿದೆ ಎಂದು ದೃಢ ನಿರ್ಧಾರಗೈದು ಕುಟುಂಬದ ಕೆಲವರ ವಿರೋಧವಿದ್ದರೂ ತಂದೆ ತಾಯಿಯ ಅನುಮತಿ ಪಡೆದು ಮಂಗಳೂರಿನ ಮಹಾಲಸ ವಿದ್ಯಾಸಂಸ್ಥೆಯಲ್ಲಿ ಬಿ.ವಿ.ಎ ಪದವಿ ಪಡೆದರು. ಈ ಸಂದರ್ಭದಲ್ಲಿ ದ.ಕ ಮತ್ತು ಉಡುಪಿಯಲ್ಲಿ ಬಿ.ವಿ.ಎ ಕಲಿಯುತ್ತಿದ್ದ ಏಕೈಕ ಮುಸ್ಲಿಂ ವಿದ್ಯಾರ್ಥಿ ಇವರಾಗಿದ್ದರು.

03

ಬಳಿಕ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಮ್.ವಿ.ಎ (ಮಾಸ್ಟರ್ ಆಫ್ ವಿಶುವಲ್ ಆರ್ಟ್) ಪದವಿಯನ್ನು ಪಡೆದರು. ಮಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ಉಜ್ಜಯಿನಿಯಲ್ಲಿ ನಡೆದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಫರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದರು. ಬೆಂಗಳೂರಿನ ಸೃಷ್ಟಿ ಆರ್ಟ್ ಗ್ಯಾಲರಿ ನಡೆಸಿದ ಸ್ಫರ್ಧೆಯಲ್ಲೂ ರಾಜ್ಯಮಟ್ಟದಲ್ಲಿ ಬಹುಮಾನ ಗಳಿಸಿದ್ದಾರೆ. ಇದಲ್ಲದೇ ಇವರ ದಿ ಮೈಂಡ್ ಟ್ರೀ ಎಂಬ ಕಲಾಕೃತಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿತ್ತು. ಚಿತ್ರಕಲೆಯಲ್ಲಿ ಇಸ್ಲಾಮಿಕ್ ಕ್ಯಾಲಿಗ್ರಫಿಯನ್ನು ಅಳವಡಿಸಿ, ಇಸ್ಲಾಮಿಕ್ ಕ್ಯಾಲಿಗ್ರಫಿಯ ಕುರಿತು ಕಲಾತ್ಮಕ ಇಸ್ಲಾಮಿಕ್ ಕ್ಯಾಲಿಗ್ರಫಿ, ಸಮಕಾಲೀನ ಇಸ್ಲಾಮಿಕ್ ಕ್ಯಾಲಿಗ್ರಫಿ, ಎರಡು ಸಂಶೋಧನಾ ಕೃತಿಗಳನ್ನೂ ರಚಿಸಿದ್ದಾರೆ. ಹಂಪಿ ಮತ್ತು ಬೆಂಗಳೂರು ಯುನಿವರ್ಸಿಟಿಗೆ ಸಲ್ಲಿಸಿದ ಈ ಕೃತಿಗಳು ಕ್ಯಾಲಿಗ್ರಫಿ ಕುರಿತಾದ ಕನ್ನಡದ ಮೊದಲ ಸಂಶೋಧನಾ ಕೃತಿ ಎಂಬ ಹೆಗ್ಗಳಿಕೆ ಪಡೆದಿದೆ.

p2

 

ಶಿಲ್ಪ ಕೆತ್ತನೆಯಲ್ಲಿ ನಿರತರಾಗಿರುವುದು

ಚಿತ್ರಕಲೆ ಮಾತ್ರವಲ್ಲದೇ, ಶಿಲ್ಪಕಲೆ, ಸಾಹಿತ್ಯ, ಕಾವ್ಯಕ್ಷೇತ್ರ, ಫೋಟೊಗ್ರಫಿ ಮೊದಲಾದ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿ ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾರೆ. ಇವರ ಹಲವು ಕಲಾಕೃತಿಗಳು ಭಾರತದ ವಿವಿಧ ಮೂಲೆಯಲ್ಲಿ ಹಾಗೂ ಕತಾರ್, ಕುವೈಟ್ ಮತ್ತು ಹಲವು ರಾಷ್ಟ್ರಗಳಲ್ಲಿ ಪ್ರದರ್ಶನಗೊಂಡಿದೆ. ಇವರ ಪ್ರಮುಖ ಕಲಾಕೃತಿ‌‌‌‌‌ 6*12 ಉದ್ದಗಲದ ಕುರ್ ಆನ್ ನ ಪ್ರಥಮ ಪುಟವು ಈಗಾಗಲೇ ಲಿಮ್ಕಾ ದಾಖಲೆಯನ್ನು ಸೃಷ್ಟಿಸುವತ್ತ ದಾಪುಗಾಲಿಡುತ್ತಿದೆ. ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದ ಮೈಂಡ್ ಟ್ರೀ ಎಂಬ ಕಲಾಕೃತಿಯು 16000 ರೂ.ಗಳಿಗೆ ಮಾರಾಟಗೊಂಡು, ಬಂದ ಅರ್ಧದಷ್ಟು ಹಣವನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆಂದು ನೀಡಿ ಮಾನವೀಯತೆ ಮೆರೆದಿದ್ದಾರೆ.

01

ತಮ್ಮ ಆಸಕ್ತಿಯನ್ನು ಮನಗಂಡು ತನ್ನನ್ನು ಸರಿಯಾದ ಹಾದಿಯಲ್ಲಿ ನಡೆಸಿದ ತನ್ನ ತಂದೆ ಮರ್ಹೂಂ ಜಿ.ಎಂ ಇಸ್ಮಾಯಿಲ್ ಮುಸ್ಲಿಯಾರ್ ರಿಗೆ ತಾನೆಂದೂ ಅಭಾರಿ ಎನ್ನುತ್ತಾರೆ ಮಿಕ್ದಾದ್. ಇದೀಗ ಬೆಂಗಳೂರಿನ ಎಸ್.ಎಫ್.ಎಸ್ ಅಕಾಡಮಿಯಲ್ಲಿ ಕಲಾ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲಾ ಪ್ರತಿಭಾವಂತನಾದ ಓರ್ವ ವ್ಯಕ್ತಿಯನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸೇರಿದಂತೆ ಕೆಲವೇ ಕೆಲವು ಸಂಘಟನೆಗಳು ಗುರುತಿಸಿದ್ದು, ಇದುವರೆಗೂ ಸಮುದಾಯಕ್ಕೆ ಸಂಬಂಧಪಟ್ಟ ಯಾವುದೇ ಅಕಾಡೆಮಿಗಳು ಗುರುತಿಸದಿರುವುದು ನಿಜಕ್ಕೂ ವಿಷಾದನೀಯ. ಪ್ರೋತ್ಸಾಹದ ಅಗತ್ಯವಿರುವ ಈ ಪ್ರತಿಭೆಯನ್ನು “ನ್ಯೂಸ್ ಕನ್ನಡ” ಜಗತ್ತಿಗೆ ಪರಿಚಯಿಸುತ್ತದೆ. ಮಿಕ್ದಾದ್ ರಿಗೆ ಶುಭವಾಗಲಿ.

ಮಿಕ್ದಾದ್ ರವರ ಕುಂಚದಲ್ಲರಳಿದ ಇತರ ಚಿತ್ರಗಳು:

pn18

ಮೈಸೂರಿನಲ್ಲಿರುವ ಟಿಪ್ಪುಸುಲ್ತಾನರ ಮಸೀದಿಯ ಮುಂಭಾಗದಲ್ಲೇ ರಚಿಸಿದ ಚಿತ್ರ

pn22

ಬಂಧ-ಮುಕ್ತ

pn17

pn21

pn20

pn16ಕುರ್ ಆನ್ ನ ಪ್ರಥಮ ಪುಟ

pn14

ನಗರೀಕರಣದ ಪರಿಣಾಮ ಮತ್ತು ಪರಿಸರ ಕಾಳಜಿಯನ್ನು ಬಿಂಬಿಸುವ ಚಿತ್ರ

pn13

pn11

pn10

pn9

ಆಂತರ್ಯ

ನಾಲ್ಕು ಬೃಹತ್ ಕಲಾಕೃತಿಗಳ ಸಮಾಗಮ

pn7ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ದಿ ಮೈಂಡ್ ಟ್ರೀ ಕಲಾಕೃತಿ

 

pn4

pn3

ಇಸ್ಲಾಮಿಕ್ ಕ್ಯಾಲಿಗ್ರಫಿಯನ್ನೊಳಗೊಂಡ ಎರಡು ವಿಭಿನ್ನ ಕಲಾಕೃತಿಗಳು

pn2

pn1

ಸೃಷ್ಟಿಯ ಮೂಲವಾದ ಬೇರಿನ ಕುರಿತಾದಂತಹ ಎರಡು ವಿಭಿನ್ನ ಕಲಾಕೃತಿಗಳು

ಅಹ್ಮದ್ ಮಿಕ್ದಾದ್ ಓರ್ವ ಬಹುಮುಖ ಪ್ರತಿಭೆ. ಇವರು ಚಿತ್ರಕಲೆ, ಶಿಲ್ಪಕಲೆ ಮಾತ್ರವಲ್ಲದೇ ಫೋಟೊಗ್ರಫಿಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅಂದಿನ ಕಾಲದಲ್ಲಿ ಯಾವುದೇ ಸೌಕರ್ಯಗಳಿಲ್ಲದ ಸಂದರ್ಭದಲ್ಲೂ ತಮ್ಮ ಸಣ್ಣದಾದ ಕ್ಯಾಮರಾದಲ್ಲಿ ಸೆರೆಹಿಡಿದ ಕೆಲವೊಂದು ಚಿತ್ರಗಳು ಇಲ್ಲಿವೆ.

p1

p3

p4

p5

p6

p7

nkmgmibk

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸೇತುವೆಯಿಂದ ನದಿಗೆ ಹಾರಿದ ಯುವತಿ: ಅಗ್ನಿಶಾಮಕದಳದಿಂದ ಕಾರ್ಯಾಚರಣೆ

ಮುಂದಿನ ಸುದ್ದಿ »

ನ್ಯೂಸ್ ಕನ್ನಡದಲ್ಲಿ ಈದಿನ ಪ್ರಕಟವಾದ ಎಲ್ಲಾ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×