Tuesday February 13 2018

Follow on us:

Contact Us

ಭಯೋತ್ಪಾದಕರ ದಾಳಿಗೆ ಬಲಿಯಾಗಿ ಹುತಾತ್ಮರಾದ ಯೋಧ ಮುಹಮ್ಮದ್ ಅಶ್ರಫ್ ಮತ್ತು ಮುಹಮ್ಮದ್ ಇಕ್ಬಾಲ್

ನ್ಯೂಸ್ ಕನ್ನಡ ವರದಿ-(13.2.18): ಸುಂಜುವಾನ್ ನಲ್ಲಿ ಭಯೋತ್ಪಾದಕರ ದಾಳಿಯಿಂದ ಹಲವು ಭಾರತೀಯ ವೀರಯೋಧರು ಹುತಾತ್ಮರಾಗುತ್ತಿದ್ದಾರೆ. ಭಯೋತ್ಪಾದಕ ದಾಳಿಯನ್ನು ಇದುವರೆಗೂ ನಿಯಂತ್ರಿಸಲು ಸಾಧ್ಯವಾಗಿಲ್ಲ. ನಿನ್ನೆ ತಾನೇ ಸುಬೇದಾರ್ ಮದನ್ ಲಾಲ್ ರವರ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಈ ಸಂದರ್ಭಲ್ಲಿ ಅವರ ಮಗ ಆಡಿದ ಮಾತುಗಳು ಭಾರತೀಯರ ದೇಶಪ್ರೇಮವನ್ನು ಬಡಿದೆಬ್ಬಿಸುವಂತಿತ್ತು. ಇದೀಗ ಭಯೋತ್ಪಾದಕ ದಾಳಿಯಲ್ಲಿ ಮತ್ತೋರ್ವ ವೀರಯೋಧ  ಸುಬೇದಾರ್ ಮುಹಮ್ಮದ್ ಅಶ್ರಫ್ ಮೀರ್ ವೀರ ಮರಣವನ್ನಪ್ಪಿದ್ದು, ಇಂದು ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಇಂದು ಮುಹಮ್ಮದ್ ಅಶ್ರಫ್ ರವರ ಮೃತೇಹವನ್ನು ಕಾಶ್ಮೀರದ ಬಳಿಯ ಕುಪ್ವಾರದಲ್ಲಿರುವ ಮದನ್ ಪುರಕ್ಕೆ ತರಲಾಗಿತ್ತು. ಬಳಿಕ ಭಾರತೀಯ ಸರಕಾರದ ಸಕಲ ಗೌರವಗಳೊಂದಿಗೆ, ಇಸ್ಲಾಮ್ ಧರ್ಮದ ಆಚಾರದಂತೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಅಶ್ರಫ್ ರವರ ನಿಧನದಿಂದ ಸಂಪೂರ್ಣ ಊರೇ ಸ್ತಬ್ಧವಾಗಿತ್ತು. ಅಂತಿಮ ಮೆರವಣಿಗೆಯ ಸಂದರ್ಭ ಸಾವಿರಾರು ಜನರು ಭಾಗವಹಿಸಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಆರ್’ಟಿಐ ನಿರ್ಲಕ್ಷ್ಯ: ನಿರ್ಗಮಿತ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಜಗದೀಶ್ ಗೆ ದಂಡ

ಮುಂದಿನ ಸುದ್ದಿ »

ರೋಹಿತ್ ಶರ್ಮಾ ಆಕರ್ಷಕ ಶತಕ: ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ ಭಾರತ ತಂಡ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×