Monday March 12 2018

Follow on us:

Contact Us

ಟಿ.ಆರ್.ಪಿಗೆ ಬೇಕಾಗಿ ಟಿವಿಯವರು ತಮ್ಮ ತಾಯಿಯನ್ನೂ ಮಾರುತ್ತಾರೆ: ಅಶೋಕ್ ಖೇಣಿ

ನ್ಯೂಸ್ ಕನ್ನಡ ವರದಿ-(12.3.18): ಸದ್ಯ ಕಾಂಗ್ರೆಸ್ ಪಕ್ಷವನ್ನು ಸೇರಿರುವ ಶಾಸಕ ಅಶೋಕ ಖೇಣಿ, ನಾನು ನನ್ನ ಕ್ಷೇತ್ರದಲ್ಲಿ 813ಕಿ.ಮೀ ರಸ್ತೆ ನಿರ್ಮಿಸಿದ್ದೇನೆ. ಆದರೂ ನಿರ್ಣಾ ಗ್ರಾಮದಲ್ಲಿರುವ ಒಂದು ಕಿ.ಮೀ ರಸ್ತೆಯನ್ನು ಕಳಪೆಯೆಂದು ಬಿಂಬಿಸಿ ದಿನವಿಡೀ ಪ್ರಸಾರ ಮಾಡುವ ಟಿವಿ ಚಾನೆಲ್ ನವರು ತಮ್ಮ ಟಿಆರ್ಪಿಗೋಸ್ಕರ ಹೆತ್ತ ತಾಯಿಯನ್ನು ಕೂಡಾ ಮಾರಲು ಸಿದ್ಧವಿರುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೇಳಿಕ ನೀಡಿದ ಬೆನ್ನಲ್ಲೇ ಸಾರಿ ಎಂದು ಹೇಳಿ ತಮ್ಮ ಮಾತನ್ನು ಅಲ್ಲಿಗೇ ಮುಚ್ಚಿ ಹಾಕಲು ಪ್ರಯತ್ನಿಸಿದರು. ಬೀದರ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಅವರಲ್ಲಿರುವ ಜಾತ್ಯತೀತ ಮನೋಭಾವವನ್ನು ಮೆಚ್ಚಿ ನಾನು ಕಾಂಗ್ರೆಸ್ ಸೇರಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಯಾವತ್ತೂ ಘರ್ ವಾಪಸಿಯ ಕುರಿತು ಹೇಳುತ್ತಾರೆ. ಅದರಂತೆಯೇ ನನ್ನ ತಂದೆ ಮತ್ತು ಕುಟುಂಬಸ್ಥರೆಲ್ಲರೂ ಕಾಂಗ್ರೆಸ್ ನಲ್ಲೇ ಇದ್ದರು. ಇದೀಗ ನಾನು ಕೂಡಾ ಕಾಂಗ್ರೆಸ್ ಗೆ ಘರ್ ವಾಪಸಿಯಾಗಿದ್ದೇನೆ ಎಂದು ಅವರು ಹೇಳಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅಕ್ಷರಶಃ ಕೆಂಪು ಸಾಗರವಾದ ಮುಂಬೈ! ಬಿಜೆಪಿ ಸರ್ಕಾರದ ವಿರುದ್ಧ 50,000ಕ್ಕೂ ಹೆಚ್ಚು ರೈತರ ಧರಣಿ!

ಮುಂದಿನ ಸುದ್ದಿ »

ಮುಸ್ಲಿಮ್ ಮಹಿಳೆಯ ಕೈಬೆರಳುಗಳು ಮತ್ತು ಮಗನ ಕೈಯನ್ನೇ ಕತ್ತರಿಸಿದ ಬಜರಂಗದಳ ಕಾರ್ಯಕರ್ತರು!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×