Monday June 19 2017

Follow on us:

Contact Us

ಮುಸ್ಲಿಮರು ಮುಗ್ದರು, ಕಾಂಗ್ರೇಸ್ಸ್ ಅವರಿಗೆ ಮೋಸ ಮಾಡುತ್ತಿದೆ: ಕಲ್ಲಡ್ಕ ಪ್ರಭಾಕರ ಭಟ್ಟ್

ನ್ಯೂಸ್ ಕನ್ನಡ ವರದಿ (19.06.2017): ಮುಸ್ಲಿಮರು ಮುಗ್ದರಾಗಿದ್ದಾರೆ, ಅವರನ್ನು ಕಾಂಗ್ರೇಸ್ಸ್ ಮೋಸ ಮಾಡುತ್ತಿದೆ. ಕಲ್ಲಡ್ಕ ಗಲಭೆ ಆಗುವಾಗ ನಾನು ಊರಲ್ಲೇ ಇರಲಿಲ್ಲ.ಕಲ್ಲಡ್ಕ ಪ್ರಭಾಕರ ಭಟ್ಟ್ ವಿರುದ್ದ ಮಾತನಾಡಿದಾಗ ಮುಸ್ಲಿಮರು ಖುಷಿಯಾಗುತ್ತಾರೆ ಹಾಗಾಗಿ ರಮನಾಥ ರೈ ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಕಲ್ಲಡ್ಕ ಪ್ರಭಾಕರ ಬಟ್ಟ್ ರವರು ಬಿಟೀವಿಗೆ ನೀಡಿದ ಪೋನ್ ಸಂಭಾಷಣೆಯಲ್ಲಿ ಹೇಳಿದರು.

ಕರೋಪಾಡಿ ಜಲೀಲ್ ಹತ್ಯೆಯ ನೈಜ ಆರೋಪಿಗಳನ್ನು ಬಂಧಿಸಿಲ್ಲಾ ಎಂದು ಮುಸ್ಲಿಮರು ಆಕ್ರೋಶಿತರಾಗಿದ್ದಾರೆ ಅಲ್ಲದೇ ಅಮಾಯಕ ಮುಸ್ಲಿಮರು ಕಾಂಗ್ರೇಸ್ಸ್ ನ ಕೆಟ್ಟ ರಾಜಕೀಯದಲ್ಲಿ ಬಲಿಪಶು ಆಗಿದ್ದಾರೆ ಎಂದು ಪ್ರಭಾಕರ್ ಭಟ್ಟ್ ಬಿಟೀವಿಯ ಸಂದರ್ಶಕನಿಗೆ ಉತ್ತರಿಸುತ್ತಾ ಹೇಳಿದರು.ಈ ಮಧ್ಯೆ ಬಿಟೀಯ ಸಂದರ್ಶಕ ಒಂದು ಹೆಜ್ಜೆ ಮುಂದೆ ಹೋಗಿ ತಾವು ಗಲಭೆ ಮಾಡಿಸುವ ವ್ಯಕ್ತಿಯಲ್ಲ ಎಂದೂ ಭಟ್ಟ್ ರವರ ಮಾತನ್ನು ಉತ್ತೇಜಿಸಿದ. ಬೆಂಗಳೂರಿನಲ್ಲಿ ಕುಳಿತು ಕಲ್ಲಡ್ಕವನ್ನು ವಿಶ್ಲೇಷಿಸುವ ಸಂದರ್ಶನಕಾರ ರಮಾನಾಥ ರೈ ಯು ಮಂಡ್ಯವನ್ನು ಅವಮಾನ ಮಾಡಿದ್ದಾರೆ ಎಂದೂ ಎಕ್ಸ್ಲೂಸಿವ್ ವರದಿ ಮಂಡಿಸಿದ.ಒಟ್ಟಿನಲ್ಲಿ ರಮಾನಾಥ ರೈ ಹಾಗೂ ಕಲ್ಲಡ್ಕ ಪ್ರಭಾಕರ ಭಟ್ ರವರ ಮಧ್ಯೆ ವಾಕ್ ಸಮರ ಜೋರಾಗಿಯೇ ನಡೆಯುತ್ತಿದ್ದು ಮಾಧ್ಯಮಗಳಿಗೆ ಇದು ಆಹಾರವಾಗಿದೆ.

ಕಲ್ಲಡ್ಕದಲ್ಲಿ ಇಬ್ಬರು ವ್ಯಕ್ತಿಗಳ ಮಧ್ಯೆ ಜಗಳವಾಗಿದೆ ಅದರಲ್ಲಿ ಒಬ್ಬಾತ ಹಿಂದೂ ಇನ್ನೊಬ್ಬ ಮುಸ್ಲಿಮ್ ಅದನ್ನೇ ಕೋಮುಗಲಭೆ ಮಾಡಿದ್ದು ಯಾರು ಎಂದು ಪ್ರಶ್ನಿಸಿದ ಕಲ್ಲಡ್ಕ ಪ್ರಭಾಕರ ಭಟ್ಟ್ ರವರು ಇಬ್ಬರ ವಿರುದ್ದ ಖೇಸು ದಾಖಲಿಸಿ ಜೈಲಿಗಟ್ಟುವುದನ್ನು ಬಿಟ್ಟು ಅಮಾಯಕರನ್ನು ಬಂಧಿಸಿದ್ದು ತಪ್ಪು ಎಂದರು.ಪೋಲೀಸ್ ಇಲಾಖೆಯು ಬಹಳ ನ್ಯಾಯಯುತವಾಗಿ ನಡೆದುಕೊಳ್ಳುತ್ತಿದೆ ಆದರೆ ಕಾಂಗ್ರೇಸ್ಸ್ ಪಕ್ಷದ ಆಡಳಿತ ಇದ್ದು ಒಬ್ಬ ಉನ್ನತ ಅಧಿಕಾರಿಯನ್ನು ಅವಮಾನ ಮಾಡುವಂತೆ ಮಾತನಾಡಿ ಸರಕಾರದ ವೈಫಲ್ಯತೆ ಮತ್ತು ಜನರನ್ನು ಹಾದಿ ತಪ್ಪಿಸಿ ಮೂರ್ಖರನ್ನಾಗಿ ಮಾಡುವ ಕಾಂಗ್ರೇಸ್ಸ್ ನ ಕೆಟ್ಟ ರಾಜಕೀಯವನ್ನು ಇಂದು ಮುಸ್ಲಿಮರು ಅರಿತಿದ್ದಾರೆ ಎಂದು ಕಲ್ಲಡ್ಕ ಪ್ರಭಕಾರ ಭಟ್ಟ್ ಹೇಳಿದರು.

ಈ ಮೊದಲ ಚುಣಾವಣೆಯಲ್ಲಿ ನನಗೂ ಕಲ್ಲಡ್ಕ ಭಟ್ಟ್ ಗೂ ನೇರ ಸ್ಪರ್ಧೆ ಎಂದು ಹೇಳಿದ್ದೇ ರಮನಾಥ ರೈ ಅವರಿಗೆ ಈಗ ಮುಳುವಾಗುವಂತಿದೆ.ಮುಸ್ಲಿಮ್ ನಿಯೋಗದ ಮುಂದೆ ತನ್ನನ್ನು ಸಮರ್ಥಿಸಿಕೊಳ್ಳಲು ರೈಯವರು ಪೋಲೀಸ್ ವರಿಷ್ಠಾಧಿಕಾರಿ ಮುಂದೆ ಕಲ್ಲಡ್ಕ ಪ್ರಭಾಕರ ಭಟ್ಟ್ ವಿರುದ್ದ ಮಾತನಾಡಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಪರ ಮತ್ತು ವಿರೋಧ ಚರ್ಚೆಗಳು ಆರಂಭವಾಗಿದೆ.

ಈ ಮಧ್ಯೆ ವ್ಯಕ್ತಿಯೊಬ್ಬರು ರಮನಾಥ ರೈ ಅವರಿಗೆ ಪೋನ್ ಕರೆ ಮಾಡಿ ಕಲ್ಲಡ್ಕ ಪ್ರಭಾಕರ ಭಟ್ಟ್ ಹಿಂದುಗಳ ಶಕ್ತಿ ಹಾಗಾಗಿ ಮುಸ್ಲಿಮರನ್ನು ಓಲೈಸಲು ಮಾತನಾಡುವಾಗ ಜಾಗ್ರತೆ ವಹಿಸಬೇಕು ಎಂದು ಎಚ್ಚರಿಸಿದ್ದ ರೆಕೋರ್ಡಿಂಗ್ ಕೂಡ ವೈರಲ್ ಆಗಿದೆ.ಎಲ್ಲಾ ವೈರಲ್ ಗಳ ಮಧ್ಯೆ ಕಲ್ಲಡ್ಕಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಅಂಟಿದ ಮತಾಂದ ವೈರಸ್ಸ್ ಹಾಗೇ ಉಳಿಯುಲಿದೆ ಎಂಬ ಭಯ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಕಲ್ಲಡ್ಕ ಪ್ರಭಾಕರ ಭಟ್ಟ್ ರವರು ಕಲ್ಲಡ್ಕ ರಾಮ ಮಂದಿರ ನಿರ್ಮಾಣಕ್ಕೆ ಕೋಟ್ಯಾಂತರ ಹಣ ಸಂಗ್ರಹಿಸಿದ್ದು ಅದರ ಮೂಲಕ ಅವರು ಕಮರ್ಶಿಯಲ್ ಕಾಂಪ್ಲೆಕ್ಸ್ ಕಟ್ಟಿದ್ದಾರೆ ಎಂದು ಅಪಾದನೆ ಮಾಡಿರುವ ರಮನಾಥ ರೈ ಅವರ ಹೇಳಿಕೆ ಹಿಂದೂಗಳಲ್ಲಿ ಬಾರೀ ಚರ್ಚೆಗೆ ಒಳಗಾಗಿದ್ದು ಈ ಬಗ್ಗೆ ವಿವರಣೆಯನ್ನು ಬಿಟೀವಿ ವರದಿಗಾರ ಕೇಳದೇ ಇರದ್ದು ಹಿಂದೂಗಳಲ್ಲೂ ಸಂಶಯಕ್ಕೆ ನಿವಾರಣೆಗೆ ಅವಕಾಶ ಇಲ್ಲದಂತಾಗಿದೆ.

ಮೊದಲ ಬಾರಿಗೆ ಮುಸ್ಲಿಮರನ್ನು ಅಮಾಯಕರು ಮತ್ತು ಮುಗ್ದರು ಎಂದು ಹೇಳಿ ಕಲ್ಲಡ್ಕ ಪ್ರಭಾಕರ ಭಟ್ಟ್ ರವರ ಹೇಳಿಕೆಯನ್ನು ಮುಸ್ಲಿಮರು ಸೋಶಿಯಲ್ ಮೀಡಿಯದಲ್ಲಿ ಹರಡುತ್ತಿದ್ದು ಇದು ಅಭಿಮಾನದಿಂದ ಅಲ್ಲ ಹೊರತಾಗಿ ರಮಾನಾಥ ರೈ ಮೇಲಿನ ದ್ವೇಷದಿಂದ ಎಂದು ಮುಸ್ಲಿಮ್ ಮುಖಂಡರೊಬ್ಬರು ನ್ಯೂಸ್ ಕನ್ನಡಕ್ಕೆ ಹೇಳಿದರು.ಒಟ್ಟಿನಲ್ಲಿ ಈಗ ನಿಜವಾಗಿಯೂ ನೇರ ಸ್ಪರ್ಧೆಗೆ ವೇಧಿಕೆ ಸಿದ್ದವಾಗಿದ್ದು ಪೋಲೀಸ್ ಇಲಾಖೆಯ ಈ ಸ್ಪರ್ಧೆಯ ರೆಪ್ರಿಯಾಗಿ ಕಾರ್ಯ ನಿರ್ವಹಿಸಲಿದೆಯೋ ಅಥವಾ ಮೂಖ ಪ್ರೇಕ್ಷಕನಾಗಿ ಅಮಾಯಕರ ಮೇಲೆ ಖೇಸು ಹಾಕಲು ಹೆಚ್ಚು ಕ್ರಿಯಾಶೀಲವಾಗಲಿದೆಯೋ ಎಂದು ಕಾದು ನೋಡಬೇಕು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬೇರೆ ಯಾವುದೇ ಸಮುದಾಯದಿಂದ ಇಂತಹ ಉಪವಾಸ ವ್ರತಾಚರಣೆ ಸಾದ್ಯವಿಲ್ಲ: ಯೋಗಿಶ್ ಶೆಟ್ಟಿ

ಮುಂದಿನ ಸುದ್ದಿ »

ರಾಷ್ಟ್ರಪತಿ ಚುನಾವಣೆ: ಮುಲಾಯಂ ಬಿಜೆಪಿಗೆ ಬೆಂಬಲ- ಅಖಿಲೇಶ್ ಕಾಂಗ್ರೆಸ್ ಗೆ ಬೆಂಬಲ !!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×