Saturday June 3 2017

Follow on us:

Contact Us

ಕೇಂದ್ರ ಸರಕಾರದ ವಿರುದ್ಧ ಆಕ್ರೋಶ: ಸಿನಿಮಾ ರಂಗವನ್ನೇ ಬಿಡುತ್ತೇನೆಂದ ಕಮಲ್ ಹಾಸನ್!

ನ್ಯೂಸ್ ಕನ್ನಡ ವರದಿ-(03.06.17) ಕೇಂದ್ರ ಸರಕಾರವು ಪ್ರಾದೇಶಿಕ ಭಾಷೆ ಸಿನಿಮಾಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯಲ್ಲಿ 28% ಹೇರಿದ್ದನ್ನ ವಿರೋಧಿಸಿ ಆಕ್ರೋಶಗೊಂಡಿರುವ ಖ್ಯಾತ ಬಹುಭಾಷಾ ನಟ ಕಮಲ್ ಹಾಸನ್ ಚಿತ್ರರಂಗವನ್ನೇ ತೊರೆಯುತ್ತೇನೆಂದು ಎಚ್ಚರಿಕೆ ನೀಡಿದ್ದಾರೆ.

ಶೇ. 28ರಷ್ಟು ಜಿಎಸ್ಟಿ ತೆರಿಗೆ ಪ್ರಾದೇಶಿಕ ಸಿನಿಮಾಗಳ ಮೇಲೆ ಪರಿಣಾಮ ಬೀರಲಿದ್ದು, ಕೇಂದ್ರ ಸರ್ಕಾರ ತೆರಿಗೆಯನ್ನು ಶೇ. 12 ಅಥವಾ 15ಕ್ಕೆ ಇಳಿಸದಿದ್ದರೆ ಸಿನಿಮಾ ರಂಗವನ್ನು ತ್ಯಜಿಸುವುದಾಗಿ 62 ವರ್ಷದ ಕಮಲ್ ಹಾಸನ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಳಿ ಮನವಿ ಮಾಡಿಕೊಂಡಿರುವ ಅವರು, ತೆರಿಗೆಯನ್ನು ಶೇ. 12 ಅಥವಾ 15ಕ್ಕೆ ಇಳಿಸಿ ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಅವರು ಕಳೆದ ವರ್ಷ ನೋಟು ರದ್ದುಗೊಳಿಸಿದ್ದರಿಂದ ಕಪ್ಪು ಹಣ ನಿಯತ್ರಣಗೊಂಡಿತ್ತು. ಆದರೆ ಜಿಎಸ್’ಟಿಯಿಂದ ನಮ್ಮ ಉದ್ಯಮಕ್ಕೆ ಪೆಟ್ಟು ಬೀಳಲಿದೆ ಎಂದಿದ್ದಾರೆ. ಜಿಎಸ್ಟಿ ಮಸೂದೆ ದೇಶಾದ್ಯಂತ ಜುಲೈ 1ರಿಂದ ಜಾರಿಗೊಳ್ಳಲಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬಿಜೆಪಿ ವಕ್ತಾರನನ್ನು ಲೈವ್ ಚರ್ಚೆಯ ಮಧ್ಯೆಯೇ ಹೊರಗೆ ಕಳಿಸಿದ ಎನ್.ಡಿ.ಟಿವಿ ಪತ್ರಕರ್ತೆ!

ಮುಂದಿನ ಸುದ್ದಿ »

ಉತ್ತರಪ್ರದೇಶ: 10ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×