Sunday February 11 2018

Follow on us:

Contact Us

ರಜನೀಕಾಂತ್ ರದ್ದು ಕೇಸರಿ ಬಣ್ಣದ ಪಕ್ಷವಲ್ಲವೆಂಬ ನಂಬಿಕೆಯಿದೆ: ಕಮಲ್ ಹಾಸನ್

ನ್ಯೂಸ್ ಕನ್ನಡ ವರದಿ-(11.2.18): ತಮಿಳುನಾಡಿನ ರಾಜಕೀಯಲ್ಲಿ ಖ್ಯಾತ ನಟರು ಕಾಲಿಡುತ್ತಿರುವುದು ಹಿಂದಿನಿಂದಲೇ ನಡೆದುಕೊಂಡು ಬಂದ ಪ್ರಕ್ರಿಯೆಯಾಗಿದೆ. ಇದೀಗ ತಮಿಳುನಾಡಿನ ಖ್ಯಾತ ನಟರಾದ ಕಮಲ್ ಹಾಸನ್ ಮತ್ತು ರಜನೀಕಾಂತ್ ತಮ್ಮ ಸ್ವಂತ ಪಕ್ಷಗಳನ್ನು ಕಟ್ಟುವುದಾಗಿ ಘೋಷಣೆ ಮಾಡಿದ್ದಾರೆ. ಈ ಎರಡೂ ಪಕ್ಷಗಳ ನಡುವಿನ ಸಂಬಂಧದ ಕುರಿತಾದಂತೆ ಸ್ಪಷ್ಟ ಮಾಹಿತಿಯನ್ನು ಯಾರೂ ನೀಡುತ್ತಿಲ್ಲ. ಇದೀಗ ವಿಶ್ವವಿದ್ಯಾಲಯವೊಂದರಲ್ಲಿ ಮಾತನಾಡಿದ ಕಮಲ್ ಹಾಸನ್, ರಜನೀಕಾಂತ್ ಪಕ್ಷದಲ್ಲಿ ಕೇಸರಿ ಬಣ್ಣವಿದೆ. ಇದು ಬದಲಾವಣೆಯಾಗದಿದ್ದಲ್ಲಿ ನಮ್ಮ ಎರಡು ಪಕ್ಷಗಳ ಸಂಭಂಧ ಸಾಧ್ಯವಿಲ್ಲ. ಇದು ಸಂಪೂರ್ಣ ಕೇಸರಿ ಬಣ್ಣದ ಪಕ್ಷವಾಗಲಾರದು ಎಂಬ ನಂಬಿಕೆಯಿದೆ ಎಂದು ಅವರು ಹೇಳಿದ್ದಾರೆ.

ನವದೆಹಲಿಯ ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಮಾತನಾಡಿದ ಕಮಲ್ ಹಾಸನ್, ನನ್ನ ಪಕ್ಷವು ಕೇಸರಿಮಯವಾಗಲು ಸಾಧ್ಯವೇ ಇಲ್ಲ. ರಜನೀಕಾಂತ್ ಪಕ್ಷದಲ್ಲಿರುವ ಕೇಸರಿಯು ಬದಲಾಗಬೇಕು. ರಾಜಕೀಯವನ್ನು ಬದಿಗಿಟ್ಟು ನಾವಿಬ್ಬರೂ ಉತ್ತಮವಾದ ಸ್ನೇಹಿತರು ಎಂದು ಅವರು ತಮ್ಮ ಮಾತಿನ ನಡುವೆ ಉಲ್ಲೇಖಿಸಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕಾಂಗ್ರೆಸ್ಸನ್ನು ಸೋಲಿಸುವುದು ಸುಲಭವಲ್ಲ, ಮೈಮರೆಯದೇ ಕೆಲಸ ಮಾಡಿ: ಪ್ರಕಾಶ್ ಜಾವಡೇಕರ್

ಮುಂದಿನ ಸುದ್ದಿ »

ಹೋಟೆಲ್‍ನಲ್ಲಿ ನಡೆಯುವಾಗ ಕಾಲು ತಾಗಿತೆಂದು ದಲಿತ ಯುವಕನ ಭೀಕರ ಹತ್ಯೆ! ವೀಡಿಯೋ ವೀಕ್ಷಿಸಿ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×