Monday February 12 2018

Follow on us:

Contact Us

ನ್ಯಾ. ಹರಿಕಿಶನ್ ಲೋಯಾ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ!

ನ್ಯೂಸ್ ಕನ್ನಡ ವರದಿ-(12.2.18): ನವದೆಹಲಿ: ದೇಶಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ನ್ಯಾ. ಹರ್ ಕಿಶನ್ ಬ್ರಿಜ್ ಗೋಪಾಲ್ ಲೋಯಾ ಅವರ ಅಸಹಜ ಸಾವಿನ ಕುರಿತು ಇದೀಗ ಸಂಶಯ ವ್ಯಕ್ತಪಡಿಸಿದ ದೇಶದ ಪ್ರಖ್ಯಾತ ಪೋರೆನ್ಸಿಕ್ ತಜ್ಞರೊಬ್ಬರು ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆ ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಅಹ್ಮದಬಾದ್ ನ ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾ. ಲೋಯಾ ಅವರ ಸಾವಿಗೆ ಸಂಬಂಧಿಸಿ ಮರಣೋತ್ತರ ಪರೀಕ್ಷೆಗಳ ವರದಿಯನ್ನು ಪರಿಶೀಲಿಸಿರುವ ದೇಶದ ಪ್ರಖ್ಯಾತ ಪೋರೆನ್ಸಿಕ್ ತಜ್ಞರಾಗಿರುವ ಡಾ.ಆರ್.ಕೆ ಶರ್ಮಾ , ಲೋಯಾ ಅವರು ಮಿದುಳಿನ ಆಘಾತದಿಂದ ಹಾಗೂ ವಿಷ ಸೇವನೆಯಿಂದಾಗಿ ಮೃತಪಟ್ಟಿರುವ ಬಗ್ಗೆ ವರದಿಗಳು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಪೋರೆನ್ಸಿಕ್ ಮೆಡಿಸಿನ್ ಆಂಡ್ ಟೋಕ್ಸಿಕಾಲಜಿ ಡಿಪಾರ್ಟ್ ಮೆಂಟ್ ಹಾಗು ದಿಲ್ಲಿಯ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಮಾಜಿ ಅಧ್ಯಕ್ಷರೂ ಆಗಿರುವ ಡಾ. ಆರ್.ಕೆ ಶರ್ಮಾ ಅವರು ದೇಶದಲ್ಲೇ ಪ್ರಖ್ಯಾತ ಪೋರೆನ್ಸಿಕ್ ತಜ್ಞರಾಗಿದ್ದಾರೆ. ನ್ಯಾ. ಲೊಯಾ ಅವರ ಸಾವಿನ ಹಿಂದೆ ಪ್ರಭಾವಿ ರಾಜಕೀಯ ನಾಯಕರ ಕೈವಾಡ ಇದೆ ಎಂಬ ಸಂಶಯಗಳಿರುವ ನಡುವೆಯೇ ಇದೀಗ ಶರ್ಮಾ ಅವರ ಹೇಳಿಕೆ ಮಹತ್ವ ಪಡೆದುಕೊಳ್ಳುವ ಸಾಧ್ಯತೆಗಳಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮಧ್ಯಪ್ರದೇಶ: ಗಡಿ ಕಾಯುವ ಜವಾನನಿಗೆ ಗುಂಡಿಕ್ಕಿದ ಬಿಜೆಪಿಯ ಮುಖಂಡ!

ಮುಂದಿನ ಸುದ್ದಿ »

ಗಡಿಯಲ್ಲಿ ಹೋರಾಡುವ ಹೊಸ ಸೈನ್ಯ ಸೃಷ್ಟಿಸಲು ಆರೆಸ್ಸೆಸ್ ಗೆ ಮೂರೇ ದಿನ ಸಾಕು: ಮೋಹನ್ ಭಾಗ್ವತ್

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×