Monday June 12 2017

Follow on us:

Contact Us

ಇಫ್ತಾರ್ ಕೂಟ ಆಯೋಜಿಸಿದ ಮಂಗಳೂರಿನ ಹಿಂದೂ ಕುಟುಂಬ: ವೈರಲ್ ಆದ ಫೋಟೊ

ನ್ಯೂಸ್ ಕನ್ನಡ ವರದಿ-(12.6.17) ಒಂದೆಡೆ ಕೋಮು ವೈಷಮ್ಯ ಹೆಚ್ಚುತ್ತಿದೆ ಎಂದು ಗಾಬರಿಗೊಳ್ಳುವಾಗ ಇನ್ನೊಂದೆಡೆ ಮತ ಸೌಹಾರ್ದತೆ ಮಾನವೀಯತೆ ಪರಸ್ಪರ ಕೊಡುಕೊಳ್ಳುವಿಕೆ ಈಗಲೂ ಜೀವಂತ ಇದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಮಂಗಳೂರಿನ ಹಿಂದೂ ಧರ್ಮದ ಅನುಯಾಯಿಯೊಬ್ಬರು ತಮ್ಮ ಮುಸ್ಲಿಂ ಪರಿಚಯಸ್ಥರನ್ನು ಕರೆದು ತಮ್ಮ ಮನೆಯಲ್ಲಿ ಇಫ್ತಾರ್ ಆಯೋಜಿಸಿದ ಫೋಟೋ ವೈರಲ್ ಆಗಿದೆ.

“ನಿನ್ನೆ ನಮ್ಮ ಊರಿನ ಬಂಧುವೊಬ್ಬರ ಮನೆಯಲ್ಲಿ ನಮಗೆ ಇಫ್ತಾರ್ ಔತಣ ನಮಗೆ ಏರ್ಪಡಿಸಿದ್ದರು. ನಮ್ಮ ಧರ್ಮ, ವಿಶ್ವಾಸ ಬೇರೆ ಬೇರೆಯಾಗಿದ್ದರೂ, ನಮ್ಮತನದೊಂದಿಗೆ ಇತರರಿಗೆ ಗೌರವ ಕೊಡುವುದನ್ನು ನಾವು ಕಲಿಯಬೇಕು. ಅವರ ಈ ಸೌಹಾರ್ದ, ಮಾನವೀಯತೆ ಮತ್ತು ಬಾಂಧವ್ಯಕ್ಕೆ ಋಣಿಯಾಗಿದ್ದೇನೆ.” ಎಂದು ಶೌಕತ್ ಅಲಿ ತಮ್ಮ ಫೇಸ್‌ಬುಕ್‌ ಸ್ಟೇಟಸ್ ಹಾಕಿದ್ದರು.

ನಾವು ಬಹಳ ವರ್ಷಗಳಿಂದ ಅನ್ಯೋನ್ಯವಾಗಿದ್ದೇವೆ. ಆದ್ದರಿಂದ ಕುಟುಂಬದ ಜೊತೆ ಪರಸ್ಪರ ಮನೆಗಳಿಗೆ ಭೇಟಿ ಕೊಡುತ್ತೇವೆ. ನಮ್ಮ ಆತ್ಮೀಯತೆಗೆ ಧರ್ಮ ಎಂದೂ ಅಡ್ಡಿಯಾಗಿಲ್ಲ. ಧರ್ಮ ಕಲಿಸುವುದೇ ಪರಸ್ಪರರ ವಿಶ್ವಾಸವನ್ನು ಗೌರವಿಸಬೇಕು ಎಂದು. ಆಗ ನಮ್ಮ ಮಧ್ಯೆ ಇರುವ ಅನುಮಾನ ಅಪನಂಬಿಕೆ ದೂರವಾಗಿ ಸುಂದರ ಸಮಾಜವನ್ನು ರೂಪಿಸಲು ಸಾಧ್ಯವಾಗುತ್ತದೆ. ಒಂದು ಸುಂದರ ಉದ್ಯಾನವನದಲ್ಲಿ ಎಲ್ಲಾ ರೀತಿಯಾದ ಮರ ಪುಷ್ಪಗಳು ಇರುವಂತೆ ಬಹುಸಂಸ್ಕೃತಿ ದೇಶದಲ್ಲಿ ನಾವು ಅನ್ಯೋನ್ಯವಾಗಿ ಬಾಳಬೇಕು ಎಂದು ಅವರು ನ್ಯೂಸ್ ಕನ್ನಡದೊಂದಿಗೆ ಮಾತನಾಡುತ್ತಾ ಹೇಳಿದರು.

https://m.facebook.com/story.php?story_fbid=1465024390228973&id=100001642789409

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

15 ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗಳಿಸಿ ದಾಖಲೆ ನಿರ್ಮಿಸಿದ ರಫೆಲ್ ನಡಾಲ್!

ಮುಂದಿನ ಸುದ್ದಿ »

ರೈತರ ಸಾಲಮನ್ನಾ ವೆಚ್ಚವನ್ನು ಆಯಾ ರಾಜ್ಯಗಳೇ ಭರಿಸಬೇಕು, ಕೇಂದ್ರಕ್ಕೆ ಏನೂ ಮಾಡಲು ಸಾಧ್ಯವಿಲ್ಲ: ಅರುಣ್ ಜೇಟ್ಲಿ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×