Friday August 11 2017

Follow on us:

Contact Us

ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳಲು ಸಾವಿರಕ್ಕೂ ಹೆಚ್ಚು ಮೌಲ್ವಿಗಳಿಂದ ಮನವಿ

ಮುಂಬೈ: ಮುಂಬೈ ಬಾಂಬ್‌ ಸ್ಫೋಟ ಪ್ರಕರಣದ ರೂವಾರಿ ಮತ್ತು ಜಮಾತ್‌–ಉದ್‌–ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒಂದು ಸಾವಿರಕ್ಕೂ ಹೆಚ್ಚು ಮೌಲ್ವಿಗಳು ಮತ್ತು ಇಮಾಮ್‌ಗಳು ವಿಶ್ವಸಂಸ್ಥೆಯನ್ನು ಆಗ್ರಹಿಸಿದ್ದಾರೆ.

ಮದರಸಾವೊಂದರಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಜತೆಗೆ ಜೆಯುಡಿ ಸೇರಿದಂತೆ ಪಾಕಿಸ್ತಾನ ಮೂಲದ ಹಲವು ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳನ್ನು ಖಂಡಿಸಿ ನಿರ್ಣಯ ಕೈಗೊಂಡಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿ ಸಭೆಯ ಮುಖ್ಯಸ್ಥ ಅಮರ್ ಅಬ್ದೆಲ್ಲತಿಫ್ ಅಬೌಲಟ್ಟಾ ಅವರಿಗೆ ನಿರ್ಣಯದ ಪತ್ರ ರವಾನಿಸಲಾಗಿದೆ. ಇದರ ಪ್ರತಿಯನ್ನು ಪ್ರಧಾನಿ ಕಚೇರಿಗೆ ಸಹ ಕಳುಹಿಸಲಾಗಿದೆ ಎಂದು ಇಲ್ಲಿನ ಇಸ್ಲಾಮಿಕ್‌ ರಕ್ಷಣಾ ಸೈಬರ್‌ ಘಟಕದ ಮುಖ್ಯಸ್ಥ ಅಬ್ದುರ್‌ ರೆಹಮಾನ್‌ ಅಂಜಾರಿಯಾ ತಿಳಿಸಿದ್ದಾರೆ.

‘ಹಫೀಜ್‌ ಸಯೀದ್‌ ಹಾಗೂ ಆತನ ನೇತೃತ್ವದ ಭಯೋತ್ಪಾದಕ ಸಂಘಟನೆಗಳಿಂದ ಜಾಗತಿಕ ಶಾಂತಿಗೆ ಧಕ್ಕೆಯಾಗಿದೆ. ಆತ ಭಾರತವನ್ನು ಮೊದಲ ಶತ್ರು ಎಂದು ಕರೆಯುತ್ತಾನೆ. ಆದರೆ, ಆತ ಮುಸ್ಲಿಂ ಮತ್ತು ಮಾನವೀಯತೆಗೆ ಶತ್ರುವಾಗಿದ್ದಾನೆ’ ಎಂದು ಅಂಜಾರಿಯಾ ಹೇಳಿದ್ದಾರೆ.‌

‘ಕಾಶ್ಮೀರ ಸಮಸ್ಯೆ ಭಾರತದ ಆಂತರಿಕ ವಿಷಯ. ಈ ವಿಷಯದಲ್ಲಿ ಇನ್ನೊಂದು ದೇಶದ ಹಸ್ತಕ್ಷೇಪ ಸಲ್ಲದು’ ಎಂದು ಅವರು ತಿಳಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಐಟಿ ದಾಳಿಗೆಲ್ಲಾ ನಾವು ಹೆದರುವವರಲ್ಲ: ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ »

ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಆಗ್ರಹಿಸಿ ಟ್ವಿಟರ್ ಅಭಿಯಾನ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×