Saturday October 21 2017

Follow on us:

Contact Us

ನನ್ನ ಹೆಸರು ಮುದ್ರಿಸಿದರೆ ವೇದಿಕೆಯಲ್ಲೆ ಟಿಪ್ಪುವಿಗೆ ಧಿಕ್ಕಾರ ಕೂಗುತ್ತೇನೆ: ಅನಂತಕುಮಾರ್ ಹೆಗ್ಡೆ

ನ್ಯೂಸ್ ಕನ್ನಡ ವರದಿ-(21.10.17): ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಹಾಗೂ ಕಟ್ಟರ್ ಹಿಂದುತ್ವವಾದಿಯಾಗಿರುವ ಅನಂತ್ ಕುಮಾರ ಹೆಗ್ಡೆ, ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ ಸರಕಾರವು ಆಚರಿಸುವ ಸಂದರ್ಭದಲ್ಲಿ, ನೋಟಿಸ್ ನಲ್ಲಿ ನನ್ನ ಹೆಸರನ್ನು ನಮೂದಿಸಬೇಡಿ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಇದಕ್ಕುತ್ತರವಾಗಿ ಸಿದ್ದರಾಮಯ್ಯ, ನಾವು ಹೆಸರನ್ನು ಶಿಷ್ಟಾಚಾರದಂತೆ ನಮೂದಿಸುತ್ತೇವೆ ಆದರೆ, ಬರುವುದು ಇರುವುದು ಅವರಿಷ್ಟ ಎಂದಿದ್ದರು.  ಇದೀಗ ಈ ವಿಚಾರವಾಗಿ ಮತ್ತೆ ಅನಂತಕುಮಾರ್ ಹೆಗ್ಡೆ ಹೇಳಿಕೆ ನೀಡಿದ್ದು, ಒಂದು ವೇಳೆ ನನ್ನ ಹೆಸರೇನಾದರೂ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದರೆ ಕಾರ್ಯಕ್ರಮಕ್ಕೆ ಬಂದು ವೇದಿಕೆಯಲ್ಲಿ ಟಿಪ್ಪುವಿಗೆ ಧಿಕ್ಕಾರ ಕೂಗುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ.

ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಸೇರಿಸುವುದು ಬೇಡ ಎಂದು ಸ್ವತಃ ನಾನೇ ಹೇಳಿರುವುದರಿಂದ ಸರ್ಕಾರಕ್ಕೆ ನನ್ನ ಹೆಸರು ಸೇರಿಸದಿರಲು ಅವಕಾಶವಿದೆ. ಆದರೆ ರಾಜ್ಯ ಸರ್ಕಾರ ಹಠಮಾರಿತನದಿಂದ ನನ್ನ ಹೆಸರನ್ನು ಮುದ್ರಿಸಿದ್ದೇ ಆದಲ್ಲಿ ಆ ಕಾರ್ಯಕ್ರಮಕ್ಕೆ ಹೋಗುತ್ತೇನೆ, ಭಾಷಣದಲ್ಲಿ ಟಿಪ್ಪು ಇತಿಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು, ಧಿಕ್ಕಾರ ಕೂಗುತ್ತೇನೆ, ತಾಕತ್ ಇದ್ದರೆ ಸಿದ್ದರಾಮಯ್ಯನವರು ನನ್ನನ್ನು ತಡೆಯಲಿ ಎಂದು ಹೆಗ್ಡೆ ಸವಾಲು ಹಾಕಿದ್ದಾರೆ.

ಇದಲ್ಲದೇ ಫೇಸ್ ಬುಕ್ ನಲ್ಲಿ ಟಿಪ್ಪು ಸುಲ್ತಾನ್ ಕುರಿತು ಅನಂತ್ ಕುಮಾರ ಹೆಗ್ಡೆ ಬಾಲಿಶವಾದ ಕೀಳು ಮಟ್ಟದ ಹೇಳಿಕೆಗಳನ್ನು ಫೇಸ್ ಬುಕ್ ಮುಖಾಂತರ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅವರು ಫೇಸ್ ಬುಕ್ ನಲ್ಲಿ, ಒಬ್ಬ ಕ್ರೂರ ನರಹಂತಕ, ಧರಿದ್ರ ಮತಾಂಧ, ಅತ್ಯಾಚಾರಿ ಎಂದು ಚಾರತ್ರಿಕವಾಗಿ ದಾಖಲಾಗಿರುವ ವ್ಯಕ್ತಿಪೂಜೆಗೆ ನನ್ನನ್ನು ಆಹ್ವಾನಿಸಬೇಡಿ” ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ. ಈ ಹಿಂದಿನ ವರ್ಷದ ಸಮಾರಂಭಕ್ಕೆ ಸಹ ತಮ್ಮ ನಿಲುವನ್ನು ಸರ್ಕಾರಕ್ಕೆ ಸಚಿವರು ಸ್ಪಷ್ಟ ಪಡಿಸಿದ್ದರು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ರಕ್ತದಾನ ಮನುಷ್ಯ ಸಂಬಂಧವನ್ನು ಹೆಚ್ಚಿಸುತ್ತದೆ: ನಾಗರಾಜ ಹರಪನಹಳ್ಳಿ

ಮುಂದಿನ ಸುದ್ದಿ »

ಸರಕಾರಿ ಶಾಲೆಗೋಸ್ಕರ 8ಕೋಟಿ ರೂ. ಮೌಲ್ಯದ ಜಮೀನು, ಕಟ್ಟಡ ದಾನ ಮಾಡಿದ ದಂಪತಿ!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×