Monday June 19 2017

Follow on us:

Contact Us

ಪಾಕ್‌ಗೆ ಹೋಗಿ ಜಯವನ್ನು ಸಂಭ್ರಮಿಸಿ: ಹುರಿಯತ್ ನಾಯಕನ ವಿರುದ್ಧ ಗಂಭೀರ್ ಆಕ್ರೋಶ

ನ್ಯೂಸ್ ಕನ್ನಡ ವರದಿ (19.06.2017): ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತವನ್ನು ಮಣಿಸಿ ಚಾಂಪಿಯನ್‌ ಪಟ್ಟ ತಮ್ಮದಾಗಿಸಿಕೊಂಡಿರುವ ಪಾಕಿಸ್ತಾನವನ್ನು ಹುರಿಯತ್‌ ಸಂಘಟನೆಯ ನಾಯಕ ಪ್ರಶಂಸಿಸಿದ್ದು, ಈತನ ವಿರುದ್ಧ ಕ್ರಿಕೆಟ್‌ ಆಟಗಾರ ಗಂಭೀರ್‌ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕಾಶ್ಮೀರ ಪ್ರತ್ಯೇಕಾವಾದಿ ಹುರಿಯತ್‌ ಸಂಘಟನೆ ನಾಯಕ ಮಿರ್ವಾಜ್‌ ಉಮರ್‌ ಫಾರೂಕ್‌ ತಂಡವನ್ನು ಪ್ರಶಂಸಿಸಿ,’ ಕಾಶ್ಮೀರದಾದ್ಯಂತ ಪಟಾಕಿ ಸಿಡಿದು ಸಂಭ್ರಮಿಸುತ್ತಿದ್ದೇವೆ, ಈದ್‌ ಹಬ್ಬದಷ್ಟೇ ಸಂತಸವಾಗಿದೆ. ಪಾಕ್‌ ತಂಡಕ್ಕೆ ಶುಭಾಶಯಗಳು’ ಎಂದು ಟ್ವೀಟ್‌ ಮಾಡಿದ್ದಾನೆ.

ಇದರಿಂದ ಆಕ್ರೋಶಗೊಂಡ ಗಂಭೀರ್‌, ವ್ಯಂಗ್ಯವಾಗಿಯೇ ಉಮರ್‌ ಫಾರೂಕ್‌ಗೆ ತಿರುಗೇಟು ನೀಡಿದ್ದು ‘ಉಮರ್‌ ಫಾರೂಕ್‌ ನೀವೇತಕೆ ಗಡಿ ದಾಟಿ ನಿಮ್ಮ ಸಂಭ್ರಮವನ್ನು ಹಂಚಿಕೊಳ್ಳಬಾರದು. ಹೇಗಿದ್ದರೂ ನಿಮ್ಮ ಬಳಿ ಬೇಕಾದಷ್ಟು ಪಟಾಕಿ( ಚೀನಿಯರ!)ಯಿದೆ. ಈದ್‌ ಹಬ್ಬವನ್ನು ಅಲ್ಲೇ ಸಂಭ್ರಮಿಸಿ, ನಾನು ಪಟಾಕಿಗಳನ್ನು ಪ್ಯಾಕ್‌ ಮಾಡಲು ಸಹಕರಿಸುತ್ತೇನೆ’ ಎಂದು ಬಿಟ್ಟಿ ಸಲಹೆ ಟ್ವೀಟ್‌ ಮಾಡಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ರಾಷ್ಟ್ರಪತಿ ಚುನಾವಣೆ: ಮುಲಾಯಂ ಬಿಜೆಪಿಗೆ ಬೆಂಬಲ- ಅಖಿಲೇಶ್ ಕಾಂಗ್ರೆಸ್ ಗೆ ಬೆಂಬಲ !!

ಮುಂದಿನ ಸುದ್ದಿ »

ಹುಲಿ ವಂಶದಲ್ಲಿ ಹುಟ್ಟಿದ ನಾನು ಯಾರಿಗೂ ಹೆದರಲ್ಲ, ಪ್ರಭಾಕರ್ ಭಟ್ ಪುಕ್ಕಲ: ರಮಾನಾಥ ರೈ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×