Monday March 12 2018

Follow on us:

Contact Us

ರೈತರ ಬೇಡಿಕೆಗಳಿಗೆ ಒಪ್ಪಿದ ಮಹಾರಾಷ್ಟ್ರ ಸರಕಾರ: ಪ್ರತಿಭಟನೆ ವಾಪಸ್!

ನ್ಯೂಸ್ ಕನ್ನಡ ವರದಿ-(12.3.18): ತಮ್ಮ ಹಕ್ಕುಗಳನ್ನು ನೀಡಬೇಕೆಂದು ಹಾಗೂ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಮಹಾರಾಷ್ಟ್ರದ ರೈತರು ಬರೋಬ್ಬರಿ 180ಕಿ.ಮೀ ಪಾದಯಾತ್ರೆ ಮಾಡುವ ಮೂಲಕ ಮಹಾನಗರಿ ಮುಂಬೈಗೆ ಆಗಮಿಸಿದ್ದರು. ಮಹಾರಾಷ್ಟ್ರದಲ್ಲಿ ದೇವೆಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರಕಾರವಿದ್ದು, ಈ ಸರಕಾರವು ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾದ ಕಾರಣ ಸುಮಾರು 50,000ಕ್ಕೂ ಮಿಕ್ಕಿದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೀಗ ಅವರ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಮುಖ್ಯಮಂತ್ರಿ ಲಿಖಿತ ಭರವಸೆ ನೀಡಿದ ಕಾರಣ ಪ್ರತಿಭಟನೆ ಹಿಂಪಡೆಯಲಾಗಿದೆ.

ಈ ಕುರಿತಾದಂತೆ ಇಂದು ಮಧ್ಯಾಹ್ನದಿಂದಲೆ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಲಾಗುತ್ತಿತ್ತು. ಕೊನೆಗೂ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ. ಬಳಿಕ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶಿಸ್ತಿನ ಪ್ರತಿಭಟನೆಗೆ ನಮ್ಮ ಮಹಾರಾಷ್ಟ್ರದ ರೈತರು ಮಾದರಿ. ವಾಹನಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ರಾತ್ರಿ ಹೊತ್ತಿನಲ್ಲಿ ಪಾದಯಾತ್ರೆ ಮಾಡಿದ ರೈತರನ್ನು ನಾನು ಶ್ಲಾಘಸುತ್ತೇನೆ ಎಂದು ಹೇಳಿದ್ದಾರೆ.

ಅನ್ನದಾತರಾಗಿರುವ ರೈತರ ಬೇಡಿಕೆಗಳನ್ನು ಮನ್ನಿಸದೇ ಅವರನ್ನು ಸತಾಯಿಸಿ, ವೃದ್ಧ ರೈತರು ಸೇರಿದಂತೆ ಹಲವರ ಕೈಕಾಲುಗಳಿಗೆ ಗಾಯವಾಗಿ ಬರೋಬ್ಬರರಿ 184 ಕಿಮಿ ನಡೆಸಿದ ಬಳಿಕ ಕೊನೆಗೆ ರೈತರನ್ನು ಹೊಗಳಿ ತಮ್ಮ ಹೆಗಲು ತಪ್ಪಿಸಲು ನೋಡುತ್ತಿರುವ ಮುಖ್ಯಮಂತ್ರಿ ಫಡ್ನವೀಸ್ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮಂಗಳೂರು ಪಬ್ ದಾಳಿ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ!

ಮುಂದಿನ ಸುದ್ದಿ »

ಮಂಗಳೂರು: ವೆಸ್ಟರ್ನ್ ವಿದ್ಯಾಸಂಸ್ಥೆಯ ವಂಚನೆಯ ವಿರುದ್ಧ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×