Sunday February 11 2018

Follow on us:

Contact Us

ಪತನಗೊಂಡ ಸರಾಟೋವಾ ವಿಮಾನ: 71 ಮಂದಿ ಪ್ರಯಾಣಿಕರು ಮೃತ್ಯು!

ನ್ಯೂಸ್ ಕನ್ನಡ ವರದಿ-(11.2.18): ರಷ್ಯಾದಲ್ಲಿನ ಖ್ಯಾತ ವಿಮಾನಯಾನ ಸಂಸ್ಥೆಯಾಗಿರುವ ಸರಟೋವಾ ಏರ್ ಲೈನ್ಸ್ ಗೆ ಸೇರಿ ವಿಮಾನವೊಂದು ರಷ್ಯಾದ ರಾಮೆನ್ ಸ್ಕಿ ಎಂಬ ಪ್ರದೇಶದ ಹೊರವಲಯದಲ್ಲಿ ಪತನಗೊಂಡಿದ್ದು, ಒಟ್ಟು ವಿಮಾನದಲ್ಲಿದ್ದ 71 ಮಂದಿಯೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿಮಾನದಲ್ಲೊ ಒಟ್ಟು 65 ಮಂದಿ ಪ್ರಯಾಣಿಕರು ಸೇರಿದಂತೆ 6 ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ.

ದುರಂತಕ್ಕೀಡಾದ ಅನ್‌ಟೊನೋವ್ ಆನ್‌–148 ಹೆಸರಿನ ವಿಮಾನವು ಉರಲ್ಸ್‌ನ ಒರಸ್ಕ್‌ ನಗರಕ್ಕೆ ಪ್ರಯಾಣ ಬೆಳೆಸಿತ್ತು. ಈ ಅನಾಹುತದ ಬಗ್ಗೆ ಖಚಿತತೆ ನೀಡಿದ ರಷ್ಯಾ ಸಚಿವಾಲಯವು, ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಿದೆ. ಈ ವಿಮಾನ ಮಾಸ್ಕೋದ ಡುಮೆಡೆಡ್ವೋ ವಿಮಾನ ನಿಲ್ದಾಣದಿಂದ ಟೇಕ್‍ಆಫ್ ಆದ ಸ್ವಲ್ಪಹೊತ್ತಿಗೆ ಎಟಿಸಿ ಸಂಪರ್ಕ ಕಡಿದುಕೊಂಡು ಅರ್ಗನೋವ್ ಗ್ರಾಮದ ಬಳಿ ಪತನ ಆಗಿದೆ.

ಮಾಸ್ಕೋದಿಂದ 80 ಕಿ.ಮೀ ದೂರದಲ್ಲಿ ಈ ವಿಮಾನ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು, ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬಾಬರಿ ಮಸ್ಜಿದ್ ಮತ್ತು ತಲಾಖ್ ಪ್ರಕರಣಗಳಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಒವೈಸಿ

ಮುಂದಿನ ಸುದ್ದಿ »

ಸಣ್ಣ ವೀಡಿಯೋ ವೈರಲಾಗಿ ಈ ಸುಂದರಿಗೆ ಒಂದೇ ದಿನದಲ್ಲಿ 2 ಲಕ್ಷ Instagram ಫಾಲೋವರ್ಸ್!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×