Monday December 4 2017

Follow on us:

Contact Us

ನೂರಾರು ಕನಸಿನೊಂದಿಗೆ ಮೊದಲ ರಾತ್ರಿಗೆ ತಯಾರಾಗಿದ್ದ ಯುವತಿ.. ಆದರೆ ಗಂಡ ಮಾಡಿದ್ದೇನು ಗೊತ್ತೇ..?

ನ್ಯೂಸ್ ಕನ್ನಡ ವರದಿ: ಪ್ರತಿಯೊಬ್ಬರಿಗೂ ಮದುವೆಯೆಂಬುವುದು ಜೀವನದ ಹೊಸ ಅಧ್ಯಾಯದ ಆರಂಭ. ಅದರಲ್ಲೂ ಒಂದು ಹೆಣ್ಣು ತನ್ನ ತವರು ಮನೆಯನ್ನು ಬಿಟ್ಟು ಹೊಸ ಜವಾಬ್ದಾರಿ ಹೊಸ ಬಾಂಧವ್ಯ ಮತ್ತು ಪತಿಯನ್ನು ಪ್ರೀತಿ, ಸುರಕ್ಷೆಯ ನೀಡುವ ಜೀವನಸಂಗಾತಿ ಎಂಬ ಭಾವನೆಯೊಂದಿಗೆ ಸ್ವೀಕರಿಸಲು ತಯಾರಾಗುವ ದಿನ. ಮದುವೆಯ ಮೊದಲ ರಾತ್ರಿ ನೂರಾರು ಕನಸಿನೊಂದಿಗೆ ಕಾತರದಿಂದ ಕಾಯುವುದು ಸಹಜ. ಆದರೆ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಮದುವೆಯ ಮೊದಲ ರಾತ್ರಿಯೇ ಗಂಡನೋರ್ವ ಪತ್ನಿಯ ಜತೆ ವಿಕೃತವಾಗಿ ನಡೆದುಕೊಂಡಿರುವ ಘಟನೆ ನಡೆದಿದೆ.

ವೃತ್ತಿಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂಬಿಎ ಪದವೀಧರೆಯ ಜೊತೆ ವಿವಾಹವಾಗಿದ್ದ. ವಿವಾಹದ ವೇಳೆ ಯುವತಿಯ ಕುಟುಂಬಸ್ಥರು 1 ಕೋಟಿ ರೂಪಾಯಿ ವರದಕ್ಷಿಣೆಯನ್ನೂ ನೀಡಿದ್ದಾರೆ, ಆದರೆ ಮೊದಲ ರಾತ್ರಿಗೆ ರೂಮಿಗೆ ಬಂದ ಗಂಡ ಮಾತ್ರ ಯುವತಿಯ ದೇಹದ ಕಂಡಕಂಡ ಭಾಗಗಳನ್ನೆಲ್ಲ ಕಚ್ಚಿ, ಮುಖದ ಮೇಲೆ ಗುದ್ದಿ, ಆಕೆಯ ಸೂಕ್ಷ್ಮ ಭಾಗಗಳಿಗೆ ಗಾಯಗೊಳಿಸಿದ್ದಾನೆ. ಚೂರಿಯಿಂದಲೂ ಯುವತಿಯ ದೇಹದ ಹಲವು ಭಾಗಗಳಿಗೆ ಇರಿದಿದ್ದಾನೆ. ಆತನಿಂದ ತಪ್ಪಿಸಿಕೊಂಡು ಹೊರಬಂದಿರುವ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಚಿತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಅಪೋಲೊ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ಘಟನೆ ಗಂಗಾದರ ನೆಲ್ಲೂರು ತಾಲೂಕಿನ ಮೋತರಂಗನಪಲ್ಲಿ ನಡೆದಿದ್ದು. ಯುವತಿಯ ಸ್ಥಿತಿ ತೀರಾ ಗಂಭೀರವಾಗಿದ್ದು, ಇತ್ತ ಪತಿಯನ್ನ ಬಂಧನ ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬುಲೆಟ್ ಟ್ರೈನ್ ಅನ್ನು ವಿರೋಧಿಸುವವರೇ, ನೀವು ಎತ್ತಿನಗಾಡಿಯಲ್ಲಿ ಹೋಗಿ: ಪ್ರಧಾನಿ ಮೋದಿ

ಮುಂದಿನ ಸುದ್ದಿ »

ಎಸ್‌ಪಿ ರವಿ ಚನ್ನಣ್ಣವರ್‌ ನೀವು ಖಡಕ್ ಅಧಿಕಾರಿಗಳಲ್ಲ, ಗುಲಾಮರು ಎಂದು ಒಪ್ಪಿಕೊಳ್ಳಿ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×