Saturday August 12 2017

Follow on us:

Contact Us

ಬಾಲಿವುಡ್ ಗೆ ದುಲ್ಕರ್ ಸಲ್ಮಾನ್: ಇವರೊಂದಿಗೆ ನಟಿಸುತ್ತಿರುವ ಬಾಲಿವುಡ್ ತಾರೆ ಯಾರು ಗೊತ್ತೇ?

ನ್ಯೂಸ್ ಕನ್ನಡ ವರದಿ-(12.08.17): ದಕ್ಷಿಣ ಭಾರತದಲ್ಲಿ ದುಲ್ಕರ್ ಸಲ್ಮಾನ್ ರ ಹೆಸರು ಕೇಳದವರು ತುಂಬಾ ವಿರಳ. ಕೇವಲ ಕೇರಳದಲ್ಲಿ ಮಾತ್ರವಲ್ಲದೇ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶದಲ್ಲೂ ತಮ್ಮ ಛಾಪು ಮೂಡಿಸಿದವರು ದುಲ್ಕರ್ ಸಲ್ಮಾನ್. ಈ ಮೂರು ರಾಜ್ಯಗಳಲ್ಲದೇ ಇನ್ನೂ ಹಲವೆಡೆ ಇವರಿಗೆ ಅಭಿಮಾನಿಗಳಿದ್ದಾರೆ. ಮಲಯಾಳಂ ಸುಪರ್ ಸ್ಟಾರ್ ಮಮ್ಮೂಟಿಯ ಪುತ್ರರಾಗಿರುವ ಇವರು ತಂದೆಯ ಹೆಸರನ್ನು ಬಳಸದೇ ಸ್ವಂತ ಇಮೇಜ್ ಹೊಂದಿದ್ದಾರೆ. ಇದೀಗ ದುಲ್ಕರ್ ದಲ್ಮಾನ್ ಬಾಲಿವುಡ್ ಪ್ರವೇಶಿಸಲಿದ್ದಾರೆ ಎಂದು ತಿಳಿದು ಬಂದಿದೆ.

ದುಲ್ಕರ್ ಸಲ್ಮಾನ್ ಮತ್ತು ಬಾಲಿವುಡ್ ಮತ್ತು ಹಾಲಿವುಡ್ ನ ಪ್ರಖ್ಯಾತ ತಾರೆ ಇರ್ಫಾನ್ ಖಾನ್ ಒಂದೇ ಚಿತ್ರದಲ್ಲಿ ಒಂದಾಗಿ ನಟಿಸಲಿದ್ದಾರೆ. ಇದು ಅಧಿಕೃತವಾಗಿ ಹೊರಬಿದ್ದೂ ಆಗಿದೆ. ಚಿತ್ರಕ್ಕೆ ಇನ್ನೂ ಹೆಸರಿಡದಿದ್ದು, ಚಿತ್ರವು ಶೀಘ್ರವೇ ಸೆಟ್ಟೇರಲಿದೆ ಎಂದು ತಿಳಿದು ಬಂದಿದೆ. ಈ ಕುರಿತು ಅಧಿಕೃತವಾಗಿ ಈ ಚಿತ್ರದ ಇನ್ನೋರ್ವ ಪ್ರಮುಖ ನಟಿ ಮಿಥಿಲಾ ಪಾಳ್ಕರ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದಾರೆ. ಹುಸೈನ್ ದಲಾಲ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆಂದು ತಿಳಿದು ಬಂದಿದೆ,

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬಿಜೆಪಿ ಭ್ರಷ್ಟಾಚಾರ-ಬಂಡವಾಳಶಾಹಿಗಳ ಪರವಾಗಿದೆ; ಸೊರಕೆ

ಮುಂದಿನ ಸುದ್ದಿ »

ಆಸ್ಪತ್ರೆಯಲ್ಲಿ ಮಕ್ಕಳು ಮೃತಪಟ್ಟಿದ್ದು ದುರಂತವಲ್ಲ, ಅದೊಂದು ಸಾಮೂಹಿಕ ಹತ್ಯಾಕಾಂಡ: ಕೈಲಾಶ್ ಸತ್ಯಾರ್ಥಿ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ರಾಜಕೀಯ ಪ್ರವೇಶದ ಕುರಿತು ನಟ ಯಶ್ ಹೇಳಿದ್ದೇನು ಗೊತ್ತೇ?

    October 9, 2017

    ನ್ಯೂಸ್ ಕನ್ನಡ ವರದಿ-(09.10.17): ಸದ್ಯ ಚಿತ್ರರಂಗದೊಂದಿಗೇ ನಟರು ರಾಜಕೀಯದತ್ತ ಒಲವು ತೋರಿಸುತ್ತಿದ್ದು, ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಉಪೇಂದ್ರ ಪ್ರಜಾಕೀಯ ಎಂಬ ಪಕ್ಷವನ್ನೇ ಕಟ್ಟಿದ್ದರು. ಇನ್ನು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ಕಮಲ್ ಹಾಸನ್ ಕೂಡಾ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×