Friday August 11 2017

Follow on us:

Contact Us

ಈ ಊರಿನ ನಾಯಿಗಳೆಲ್ಲಾ ನೀಲಿ ಬಣ್ಣಕ್ಕೆ ತಿರುಗುತ್ತಿರುವುದು ಏಕೆ ಗೊತ್ತೇ?

ನ್ಯೂಸ್ ಕನ್ನಡ ವರದಿ-(11.08.17): ನವಿ ಮುಂಬೈನ ಟಲೋಜಾ ಇಂಡಸ್ಟ್ರಿಯ ಬಳಿಯಲ್ಲಿ ಅಡ್ಡಾಡುತ್ತಿದ್ದ ನಾಯಿಗಳು ಒಮ್ಮೆಲೆ ನೀಲಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದವು. ನೋಡುವವರಿಗೆಲ್ಲಾ ಅಚ್ಚರಿ. ಬಿಳಿ ಮೈಬಣ್ಣದ ನಾಯಿಗಳು ನೀಲಿಯಾಗಿದ್ದು ಹೇಗೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿತು. ಕಾರ್ಖಾನೆಗಳು, ಕಂಪೆನಿಗಳು ಪರಿಸರಕ್ಕೆ, ಪ್ರಾಣಿಗಳಿಗೆ ಯಾವ ರೀತಿಯಲ್ಲಿ ಹಾನಿಯಾಗುತ್ತದೆ ಎಂಬುವುದಕ್ಕೆ ಈ ನಾಯಿಗಳೇ ತಾಜಾ ಉದಾಹರಣೆ.

ಅಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿಯೊಂದು ರಾಸಾಯನಿಕ ಬಣ್ಣಗಳನ್ನು, ವಿಷಪೂರಿತ ರಾಸಾಯನಿಕಗಳನ್ನು ಪರಿಷ್ಕರಿಸದೇ ಹಾಗೇಯೇ ಹತ್ತಿರದ ಕಸಾಡಿ ನದಿಗೆ ಬಿಡುತ್ತಿದ್ದು, ಈ ನದಿಯ ನೀರನ್ನು ಕುಡಿದ ನಾಯಿಗಳೆಲ್ಲವೂ ನೀಲಿ ಬಣ್ಣಕ್ಕೆ ತಿರುಗುತ್ತಿದೆ. ಈವರೆಗೆ ಸುಮಾರು 5 ನಾಯಿಗಳು ನೀಲಿ ಬಣ್ಣಕ್ಕೆ ತಿರುಗಿದ್ದಾಗಿ ಸಾರ್ವಜನಿಕರು ಹೇಳುತ್ತಾರೆ. ನಾಯಿಗಳೇ ಹೀಗಾದರೆ ಆ ನದಿ ನೀರನ್ನು ಕುಡಿದರೆ ಮನುಷ್ಯರಿಗೆ ಯಾವ ರಿತಿಯ ಕಾಯಿಲೆಗಳು ಬರಬಹುದು ಎಂದು ನಾಗರಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪ್ರಾಣಿಪ್ರಿಯರು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

13ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ವೆಂಕಯ್ಯನಾಯ್ಡು

ಮುಂದಿನ ಸುದ್ದಿ »

ಕೊಲ್ಲೂರ ಅನುದಾನ ರದ್ದು: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×