Thursday August 10 2017

Follow on us:

Contact Us

ಸ್ವಚ್ಛ ಭಾರತದ ಹಣದಲ್ಲಿ ಮೊಬೈಲ್ ಕೊಂಡ ಪತಿ: ಮೊಬೈಲ್ ಪುಡಿಗಟ್ಟಿ ಶೌಚಾಲಯ ಕಟ್ಟಿಸಿದ ಪತ್ನಿ!

ನ್ಯೂಸ್ ಕನ್ನಡ ವರದಿ-(10.08.17): ಸರಕಾರವು ಸ್ವಚ್ಛ ಭಾರತ್ ಅಭಿಯಾನದ ಮೂಲಕ ದೇಶವನ್ನು ಸ್ವಚ್ಛವಾಗಿಡಲು ಮತ್ತು ಬಯಲು ಶೌಚದಿಂದ ಮುಕ್ತಗೊಳಿಸುವ ಸಲುವಾಗಿ ಶೌಚಾಲಯ ವ್ಯವಸ್ಥೆ ಇಲ್ಲದವರಿಗೆ ಅನುದಾನ ನೀಡುತ್ತದೆ. ಇದೇ ಅನುದಾನವನ್ನು ಬಳಸಿದ ವ್ಯಕ್ತಿಯೋರ್ವ ಸಿಕ್ಕಿದ ಹಣದಿಂದ ಮೊಬೈಲ್ ಫೋನ್ ಕೊಂಡಿದ್ದ. ಬಳಿಕ ಈ ಕುರಿತು ಅರಿತ ಆತನ ಪತ್ನಿ ಪತಿಯ ಮೊಬೈಲ್ ಅನ್ನು ನೆಲಕ್ಕೆಸೆದು ಪುಡಿಗಟ್ಟಿ, ಉಪವಾಸ ಕೂತು ಶೌಚಾಲಯ ಕಟ್ಟಿಸಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಜಾರ್ಖಂಡ್ ನ ಧನಭಾಗ್ ಜಿಲ್ಲೆಯ ಭೂಲಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸರಕಾರವು ಶೌಚಾಲಯವಿಲ್ಲದವರಿಗೆ 12,000ರೂ. ನೀಡುತ್ತದೆ. ಮೊದಲು 6,000ರೂ. ನೀಡಿ ಕೆಲಸ ಪ್ರಾರಂಭಿಸಿದ ಬಳಿಕ ಉಳಿದ 6000ರೂ. ನೀಡಲಾಗುತ್ತದೆ. ಮೊದಲ ಕಂತು ಜೂನ್ ತಿಂಗಳಲ್ಲಿ ಪಾವತಿಯಾಗಿತ್ತು. ಈ ಹಣದಿಂದ ರಾಜೇಶ್ ಮಹತೋ ಮೊಬೈಲ್ ಕೊಂಡಿದ್ದ. ಆಗಸ್ಟ್ 5ರಂದು ಈ ಕುರಿತು ಪತ್ನಿ ದೇವಿಯು ವಿಚಾರಿಸಿದಾಗ ಆಕೆಯನ್ನು ಸಮಾಧಾನಪಡಿಸಿ ತನ್ನಲ್ಲಿದ್ದ ಮೊಬೈಲ್ ಫೋನ್ ಅನ್ನು ತೋರಿಸಿದ್ದ.

ಈ ವೇಳೆ ಕೋಪಗೊಂಡ ದೇವಿಯು ಆತನ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಪುಡಿಗಟ್ಟಿ ಉಪವಾಸ ಕೂರಲು ಪ್ರಾರಂಭಿಸಿದಳು. ಎರಡು ದಿನಗಳ ಬಳಿಕ ರಾಜೇಶ್ ಮಹತೋ ಶೌಚಾಲಯ ಕಟ್ಟಿಸಲು ಆರಂಭಿಸಿದ ಬಳಿಕವೇ ಮನೆಯೊಳಗಿನ ಪರಿಸ್ಥಿತಿ ತಹಬಂದಿಗೆ ಬಂತು. ನನ್ನ ಪತ್ನಿಯು ಶೌಚಾಲಯವಿಲ್ಲದೇ ಕಷ್ಟಪಡುತ್ತಿದ್ದಳು. ನಾನು ಮಾಡಿದ್ದು ತಪ್ಪು ಎಂದು ನನಗೆ ಅರಿವಾಗಿದ್ದು, ಕೂಡಲೇ ನಾಣು ಶೌಚಾಲಯ ಕಟ್ಟಿಸಲು ಆರಂಭಿಸಿದೆ ಎನ್ನುತ್ತಾನೆ ರಾಜೇಶ್.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗಳಿಂದ ಸಮಿತಿ ರಚನೆ – ಎಸ್‍ಎಫ್‍ಐ ಸ್ವಾಗತ

ಮುಂದಿನ ಸುದ್ದಿ »

ಐಟಿ ದಾಳಿಗೆಲ್ಲಾ ನಾವು ಹೆದರುವವರಲ್ಲ: ಸಿಎಂ ಸಿದ್ದರಾಮಯ್ಯ

ಸಿನೆಮಾ

 • ಸರಳವಾಗಿ ರಿಜಿಸ್ಟರ್ ಮದುವೆಯಾದ ಮುಸ್ತಫಾ-ಪ್ರಿಯಾಮಣಿ

  August 23, 2017

  ಬೆಂಗಳೂರು: ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದ ಬಹುಭಾಷಾ ತಾರೆ ಪ್ರಿಯಾಮಣಿ ಇಂದು ತಮ್ಮ ಹಲವು ಕಾಲದ ಗೆಳೆಯ ಮುಸ್ತಫಾರಾಜಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜಯನಗರ ರಿಜಿಸ್ಟರ್ ಆಫೀಸಿಗೆ ನಟಿ ...

  Read More
 • ಈ ಬಾರಿ ಗಣೇಶೋತ್ಸವ ಆಚರಿಸದ ಸಲ್ಮಾನ್ ಖಾನ್: ಕಾರಣವೇನು ಗೊತ್ತೇ?

  August 22, 2017

  ನ್ಯೂಸ್ ಕನ್ನಡ-(22.08.17): ಬಾಲಿವುಡ್ ನಟ ಸಲ್ಮಾನ್ ಖಾನ್ ಗಣಪತಿ ಭಕ್ತನಾಗಿದ್ದು, ಪ್ರತೀವರ್ಷವೂ ತಮ್ಮ ಮನೆಯಲ್ಲಿ ಗಣೇಶೋತ್ಸವವನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಸತತ 15ವರ್ಷಗಳಿಂದ ತಮ್ಮ ಮನೆಯಲ್ಲಿ ನಡೆಸುತ್ತಾ ಬಂದಿದ್ದ ವೈಭವದ ಗಣೇಶೋತ್ಸವವನ್ನು ಕೈಬಿಟ್ಟು ಸಲ್ಮಾನ್ ಖಾನ್ ...

  Read More
 • ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದ ತಮಿಳು ನಟ ಆರ್ಯ

  August 21, 2017

  ನ್ಯೂಸ್ ಕನ್ನಡ ವರದಿ-(21.08.17): ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ಯುವನಟ ಆರ್ಯ ಮಮ್ಮೂಟಿ ಅಭಿನಯದ ಗಾಡ್ ಫಾದರ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಕೇರಳದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಇದೀಗ ಸೂಪರ್ ಹಿಟ್ ಚಿತ್ರವಾದ ...

  Read More
 • ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿರುವ ಕ್ರಿಕೆಟಿಗ ಶ್ರೀಶಾಂತ್!

  August 16, 2017

  ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್‌ ಆರೋಪಗಳಿಂದ ಕಂಗಾಲಾಗಿದ್ದ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್‌ನ ಮಾಜಿ ಆಟಗಾರ ಶ್ರೀಶಾಂತ್ ಇತ್ತೀಚೆಗಷ್ಟೆ ನಿರಾಳರಾಗಿದ್ದಾರೆ. ಅವರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಜೀವ ನಿಷೇಧ ಹೇರಿತ್ತು. ಇತ್ತೀಚೆಗಷ್ಟೇ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×