Thursday August 10 2017

Follow on us:

Contact Us

ಯೋಗಿಗಳು ಮುಖ್ಯಮಂತ್ರಿಯಾಗುತ್ತಾರೆ, ಉಸ್ತಾದರುಗಳು ಯಾಕೆ ರಾಜಕೀಯ ಪ್ರವೇಶಿಸುತ್ತಿಲ್ಲ?: ಫಝಲ್ ಅಸೈಗೋಳಿ

ನ್ಯೂಸ್ ಕನ್ನಡ ವರದಿ-(10.08.17): ಬಹುಸಂಖ್ಯಾತರಲ್ಲಿರುವಂತಹ ಸ್ವಾಮೀಜಿಗಳು, ಯೋಗಿಗಳು ಮುಖ್ಯಮಂತ್ರಿ ಸ್ಥಾನದವರೆಗೆ ತಲುಪುತ್ತಾರೆ ಆದರೆ ಮುಸ್ಲಿಮರಲ್ಲಿರುವ ಉಸ್ತಾದರುಗಳು, ಧಾರ್ಮಿಕ ಮುಂದಾಳುಗಳು ಕನಿಷ್ಠ ಗ್ರಾಮ ಪಂಚಾಯತ್ ಹಂತಕ್ಕೆ ಕೂಡಾ ತಲುಪುತ್ತಿಲ್ಲ. ಇದು ನಿಜಕ್ಕೂ ವಿಷಾದನೀಯವಾಗಿದ್ದು, ನಿಮಗೆ ಭಾರತೀಯ ಜನತಾ ಪಾರ್ಟಿಯು ವೇದಿಕೆ ಒದಗಿಸಿಕೊಡುತ್ತದೆ ಎಂದು ಫಝಲ್ ಅಸೈಗೋಳಿ ಹೇಳಿದರು. ಅವರು ಬೋಳಿಯಾರಿನಲ್ಲಿ ನಡೆದ ಮುಸ್ಲಿಮ್ ಧಾರ್ಮಿಕ ಗುರುಗಳ ಸಭೆಯಲ್ಲಿ ಮಾತನಾಡುತ್ತಿದ್ದರು.

ಮುಸ್ಲಿಮರಿಗೆ ಬಿಜೆಪಿ ಎಂದರೆ ಆಗುವುದಿಲ್ಲ. ಕಾಂಗ್ರೆಸ್ ಅಂಥಹಾ ಒಂದು ಮನೋಭಾವವನ್ನು ಮುಸ್ಲಿಮರಲ್ಲಿ ತಂದಿಟ್ಟಿದೆ. ಯಡಿಯೂರಪ್ಪ ಸರಕಾರವಿರುವ ಸಂದರ್ಭದಲ್ಲಿ ಪ್ರತೀ ಮುಸ್ಲಿಮ್ ಧರ್ಮಗುರುಗಳಿಗೆ ಸುಮಾರು 25,000ರೂ.ಯಂತೆ ಅನುದಾನ ನೀಡಲಾಗಿತ್ತು. ಇದಲ್ಲದೇ ಹಲವು ಮದ್ರಸ ಮಸೀದಿಗಳಿಗೆ ತಡೆಗೋಡೆ ನಿರ್ಮಾಣ, ಕಾರು ವಿತರಣೆ ಮುಂತಾದ ಕಾರ್ಯಗಳನ್ನು ಮಾಡಲಾಗಿತ್ತು. ಮೊತ್ತಮೊದಲು ಹಜ್ಘರ್ ನಿರ್ಮಾಣಕ್ಕೆ ಅನುದಾನ ನೀಡಿದ್ದು ಬಿಜೆಪಿ ಸರಕಾರವಾಗಿದೆ. ಆದರೆ ಮುಸ್ಲಿಮ್ ಉದ್ಧಾರಕರೆಂದು ಘೋಷಿಸುವ ಕಾಂಗ್ರೆಸ್ ಏನೂ ಮಾಡಿಲ್ಲ ಎಂದರು.

ಕುರಾನ್ ನಲ್ಲಿ ಉಪಕಾರ ಮಾಡಿದವ ಯಾವ ಜಾತಿಯಾದರೂ, ಯಾವ ಪಕ್ಷವಾದರೂ, ಯಾವ ಧರ್ಮದವನಾದರೂ, ಆತನಿಗೆ ಕೃತಜ್ಞತೆ ಸಲ್ಲಿಸಬೇಕು ಎಂದಿದೆ. ನಾವು ಈಗ ನಿಮಗೆ ಮಾಡುತ್ತಿರುವ ಉಪಕಾರಗಳಿಗೆ ನೀವು ಕೃತಜ್ಞತೆ ತೋರಬೇಕು. ಬಿಜೆಪಿಯನ್ನು ಸದಾ ತೆಗಳುವ ವಾರ್ತಾಭಾರತಿ ಪತ್ರಿಕೆಯನ್ನು ಓದುವುದು ಬಿಟ್ಟು ಹೊಸದಿಗಂತ, ಉದಯವಾಣಿಯಂತಹ ಸದಭೀರುಚಿಯ ಪತ್ರಿಕೆಗಳನ್ನು ಓದಬೇಕು ಎಂದು ಅವರು ಹೇಳಿದರು.

ಬಳಿಕ ಮಾತನಾಡಿದ ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್, ನೀವು ಯಾವುದಕ್ಕೂ ಹೆದರಬೇಕಾಗಿಲ್ಲ. ನಿಮಗೆ ಯಾವುದೇ ತೊಂದರೆ ಇದ್ದರೂ ಅದನ್ನು ನಿವಾರಿಸಲು ಬಿಜೆಪಿ ಪಕ್ಷವು ಸಿದ್ಧವಿದೆ. ನಾವು ಈಗಾಗಲೇ ಹಲವು ಪ್ರದೇಶಗಳಲ್ಲಿ ಜಾತಿಧರ್ಮ ನೋಡದೇ ಸಹಾಯ ಮಾಡಿದ್ದೇವೆ. ಸಹಾಯ ಮಾಡುವಾಗ ಆತ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಂದು ನೋಡಬಾರದು ಎಂದು ಹೇಳಿದರು.

ನಂತರ ಮಾತನಾಡಿದ ಸಿದ್ದೀಖ್ ಹಿಮಮಿ, ನಾವು ಇಲ್ಲಿ ಬಿಜೆಪಿಗೆ ಮತ ಹಾಕುವ ಸಲುವಾಗಿಯೋ ಅಥವಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಸಲುವಾಗಿಯೋ ಬಂದಿಲ್ಲ. ಸರಕಾರದಿಂದ ಮುಸ್ಲಿಮ್ ಧರ್ಮಗುರುಗಳಿಗೆ ನೀಡುವ ಸವಲತ್ತುಗಳ ಕುರಿತಾದಂತೆ ಮಾಹಿತಿ ನೀಡುತ್ತೇವೆ. ಹಾಗೂ ಎಲ್ಲಾ ಸೌಲಭ್ಯಗಳನ್ನು ನಿಮಗೆ ಒದಗಿಸುತ್ತೇವೆ ಎಂಬ ಸಲುವಾಗಿ ಬಂದಿದ್ದೇವೆ. ನಮಗೆ ಸಹಾಯ ಮಾಡುವವರ ಜೊತೆ ನಾವಿರುತ್ತೇವೆ ಎಂದರು.

ಉಸ್ತಾದರ ಸ್ಪಷ್ಟೀಕರಣ: ಬಿಜೆಪಿ ಪಕ್ಷ ಆಯೋಜಿಸಿದ ಕಾರ್ಯಕ್ರಮಕ್ಕೆ ಮುಸ್ಲಿಮ್ ಧರ್ಮಗುರುಗಳು ಬೃತ್ ಸಂಖ್ಯೆಯಲ್ಲಿ ಹಾಜರಾಗಿದ್ದು ಸಹಜವಾಗಿಯೇ ಹಲವರ ಕಣ್ನು ಕೆಂಪಾಗಿಸಿದೆ. ಈ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಸಭೆಯಲ್ಲಿ ಭಾಗವಹಿಸಿದ ಉಸ್ತಾದರೊಬ್ಬರು ಪ್ರತಿಕ್ರಿಯೆ ನೀಡಿದ್ದು, ನಾವು ಬಿಜೆಪಿಯ ಕಾರ್ಯಕ್ರಮ ಎಂದು ತಿಳಿದೇ ಹೋದವರಲ್ಲ. ಕೇಂದ್ರ ಅಲ್ಪಸಂಖ್ಯಾತ ಇಲಾಖೆಯಿಂದ ಮದ್ರಸಾಗಳಲ್ಲಿ ನಿರಂತರ ಮೂರು ವರ್ಷಗಳಿಂದ ಪಾಠ ಹೇಳಿಕೊಡುತ್ತಿರುವ ಉಸ್ತಾದರುಗಳಿಗೆ 50ಸಾವಿರ ರೂ. ಅನುದಾನ ನೀಡಲಾಗುತ್ತದೆ. ಈ ಕುರಿತು ಮಾಹಿತಿ ನೀಡುತ್ತೇವೆ ಎಂದ ಕಾರಣ ನಾವು ತೆರಳಿದ್ದೇವೆ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ನೂರಾರು ಧರ್ಮಗುರುಗಳು ಭಾಗವಹಿಸಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕುಂಬ್ಳೆ: ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಯಶಸ್ವಿಯಾಗಿ ನಡೆದ ಬೃಹತ್  ರಕ್ತದಾನ ಶಿಬಿರ

ಮುಂದಿನ ಸುದ್ದಿ »

ಆಗಸ್ಟ್ 15: ಬಿ.ಎಸ್. ಇಸ್ಮಾಯಿಲ್ ರವರ ಮಳೆಹನಿ ಪುಸ್ತಕ ಬಿಡುಗಡೆ

ಸಿನೆಮಾ

 • ನಟಿ ಅಪಹರಣ ಪ್ರಕರಣ: 4ನೇ ಬಾರಿಯೂ ದಿಲೀಪ್ ಜಾಮೀನು ಅರ್ಜಿ ವಜಾ!

  September 18, 2017

  ನ್ಯೂಸ್ ಕನ್ನಡ ವರದಿ-(18.9.17): ನಟಿಯೊಬ್ಬಳ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಮತ್ತೆ ತಿರಸ್ಕರಿಸಿದೆ. ಜುಲೈ 10ರಂದು ಬಂಧಿತರಾಗಿದ್ದ ದಿಲೀಪ್ ಈ ಹಿಂದೆ ಜುಲೈ 24ರಂದು ಜಾಮೀನಿಗೆ ಅರ್ಜಿ ...

  Read More
 • ಅ.6: ಗಲ್ಫ್ ನಲ್ಲಿ ಮಾರ್ಚ್ 22 ಸಿನಿಮಾ ಬಿಡುಗಡೆ

  September 17, 2017

  ನ್ಯೂಸ್ ಕನ್ನಡ ವರದಿ-(17.9.17): ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ ಹಾಗು ಮಾಧ್ಯಮಗಳ ಪ್ರಶಂಶೆಯ ಸುರಿಮಳೆಗೆ ಭಾಜನವಾಗಿರುವ  ‘ಮಾರ್ಚ್ 22’  ಸಿನೆಮಾ  ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಯುಎಇ(ಗಲ್ಫ್) ಯಾದ್ಯಂತ ಅಕ್ಟೊಬರ್ 6 ರಂದು ಬಿಡುಗಡೆಯಾಗುತ್ತಿದೆ. ಸಿನೆಮಾದ ಪ್ರಥಮ ಪ್ರದರ್ಶನದಲ್ಲಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×