Monday March 12 2018

Follow on us:

Contact Us

ಮುಸ್ಲಿಮ್ ಮಹಿಳೆಯ ಕೈಬೆರಳುಗಳು ಮತ್ತು ಮಗನ ಕೈಯನ್ನೇ ಕತ್ತರಿಸಿದ ಬಜರಂಗದಳ ಕಾರ್ಯಕರ್ತರು!

ನ್ಯೂಸ್ ಕನ್ನಡ ವರದಿ-(12.3.18): ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಗಳು ವ್ಯಾಪಕವಾಗಿ ನಡೆಯುತ್ತಿದೆ. ಆರೋಪಿಗಳಿಗೆ ಕಾನೂನಿನ ರಕ್ಷಣೆಯಿರುವ ಕಾರಣ ಯಾವುದೇ ಕೃತ್ಯಗಳಿಗೂ ಕಡಿವಾಣ ಹಾಕುವವರಿಲ್ಲದಂತಾಗಿದೆ. ಇದೀಗ ಅಹ್ಮದಬಾದ್ ನ ಛತ್ರಾಲ್ ಎಂಬ ಪ್ರದೇಶದಲ್ಲಿ ಮುಸ್ಲಿಮ್ ಮಹಿಳೆಯೊಬ್ಬರ ಕೈಯ ಬೆರಳುಗಳನ್ನು ಹಾಗೂ ಅವರ ಮಗನ ಕೈಯನ್ನೇ ಬಜರಂಗದಳದ ಕಾರ್ಯಕರ್ತರು ಮುರಿದು ಹಾಕಿರುವ ಘಟನೆಯು ನಡೆದಿದೆ.

ಆ ಪ್ರದೇಶದಲ್ಲಿ ಬಜರಂಗದಳದ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೂ ಮುಂಚೆಯೇ ಅಲ್ಲಿನ ನಿವಾಸಿಗಳಿಗೆ ಮತ್ತು ಮುಸ್ಲಿಮರಿಗೆ ಕಾರ್ಯಕ್ರಮದ ನಡುವೆ ಯಾರೂ ಮನೆಯಿಂದ ಹೊರಬರಬಾರದು ಎಂದು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೆ ದನವನ್ನು ಮೇಯಿಸುವ ಸಲುವಾಗಿ ಮುಸ್ಲಿಮ್ ಮಹಿಳೆ ಮತ್ತು ಆಕೆಯ ಪುತ್ರ ಹೊರ ಬಂದಿದ್ದು, ಈ ವೇಳೆ ಆಕ್ರೋಶಿತರಾದ ಬಜರಂಗದಳ ಕಾರ್ಯಕರ್ತರು ಅವರ ಕೈ ಯ ಬೆರಳುಗಳನ್ನು ಮತ್ತು ಮಗನ ಕೈಯನ್ನೇ ಮುರಿದಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಟಿ.ಆರ್.ಪಿಗೆ ಬೇಕಾಗಿ ಟಿವಿಯವರು ತಮ್ಮ ತಾಯಿಯನ್ನೂ ಮಾರುತ್ತಾರೆ: ಅಶೋಕ್ ಖೇಣಿ

ಮುಂದಿನ ಸುದ್ದಿ »

ಬೆಳಗಾವಿಯ ಅತೀ ದೊಡ್ಡ ಧ್ವಜಸ್ತಂಭದಲ್ಲಿ ಹಾರಾಡಿತು ಭಾರತದ ಅತ್ಯಂತ ದೊಡ್ಡ ತ್ರಿವರ್ಣ ಧ್ವಜ!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×