Wednesday January 11 2017

Follow on us:

Contact Us

ಹೊಳೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರ ದಾರುಣ ಸಾವು

ನ್ಯೂಸ್ ಕನ್ನಡ ವರದಿ(11.01.2017)-ಬೆಳ್ತಂಗಡಿ: ಹೊಳೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ತಾಲೂಕಿನ ನಡ ಗ್ರಾಮದ ಅಂತ್ರಾಯಿಪಲ್ಕೆಯಲ್ಲಿ ನಡೆದಿದೆ.

ರಹೀಮ್(30), ಇವರ ಪತ್ನಿ  ರುಬೀನಾ(25), ಯಾಸ್ಮಿನ್(23),  ಸುಬಾನ್(15) ಮೃತಪಟ್ಟವರಾಗಿದ್ದಾರೆ. ಇವರು ಉಡುಪಿ ಜಿಲ್ಲೆಯ ಕಾಪು ಪಕೀರನಕಟ್ಟೆ  ನಿವಾಸಿಗಳಾಗಿದ್ದಾರೆ.

ರಹೀಮ್ ಮತ್ತು ರುಬೀನಾ

ರಹೀಮ್ ಮತ್ತು ರುಬೀನಾ

Belthangady 4 daeth1

Belthangady 4 daeth2

suban

ಸುಬಾನ್

ಯಾಸ್ಮಿನ್

ಯಾಸ್ಮಿನ್

ಇಂದು ಬೆಳಗ್ಗೆ ಕಾಜೂರು ದರ್ಗಾಕ್ಕೆ ಭೇಟಿ ನೀಡಿದ್ದ ಈ ಕುಟುಂಬವು  ಬಳಿಕ ಹೊಳೆಗೆ ಸ್ನಾನ ಮಾಡಲು ಇಳಿದಿದ್ದು, ಈ ವೇಳೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆನ್ನಲಾಗಿದೆ. ಇದೇ ಸಂದರ್ಭದಲ್ಲಿ ಮೈಮೂನಾ ಎಂಬವರೂ ನೀರಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದು, ಅವರನ್ನು ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.

nksbdgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಉಮೇಶ್ ಶೆಟ್ಟಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ- ಕಮಿಷನರ್ ಚಂದ್ರಶೇಖರ್

ಮುಂದಿನ ಸುದ್ದಿ »

ದೇಶದ ಸಾರಿಗೆ ಸಚಿವ ಎನಿಸಿಕೊಳ್ಳಲು ಮುಜುಗರವಾಗುತ್ತಿದೆ: ನಿತಿನ್ ಗಡ್ಕರಿ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×