Sunday March 11 2018

Follow on us:

Contact Us

ಮುಷ್ಫಿಕರ್ ರಹೀಂ ಸ್ಫೋಟಕ ಬ್ಯಾಟಿಂಗ್: ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶಕ್ಕೆ ದಾಖಲೆಯ ಜಯ!

ನ್ಯೂಸ್ ಕನ್ನಡ ವರದಿ: ನಿಡಹಾಸ್ ಟಿ20 ತ್ರಿಕೋನ ಏಕದಿನ ಸರಣಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ದಾಖಲೆಯ ರನ್ ಚೇಸ್ ಮಾಡುವ ಮೂಲಕ ಜಯಭೇರಿ ಬಾರಿಸಿದೆ.

ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಲಂಕಾ ನೀಡಿದ 215 ರನ್ ಗಳ ಗುರಿಯನ್ನು ಬಾಂಗ್ಲಾದೇಶ ತಂಡ ಇನ್ನು ಎರಡು ಎಸೆತಗಳು ಬಾಕಿ ಇರುವಂತೆಯೇ ಕೇವಲ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಬಾಂಗ್ಲಾದೇಶ ಮಧ್ಯಮ ಕ್ರಮಾಂಕದ ಆಟಗಾರ ಮುಷ್ಫಿಕರ್ ರಹೀಂ ಸ್ಫೋಟಕ ಬ್ಯಾಟಿಂಗ್ (ಅಜೇಯ 72 ರನ್) ನೆರವನಿಂದಾಗಿ ಬಾಂಗ್ಲಾದೇಶ ತಂಡ ಇನ್ನೂ 2 ಎಸೆತಗಳು ಬಾಕಿ ಇರುವಂತೆಯೇ ಗೆಲುವು ತನ್ನದಾಗಿಸಿಕೊಂಡಿತು.

ಶ್ರೀಲಂಕಾದ 215 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶ, ಮುಷ್ಫಿಕರ್ ರಹೀಂ (72 ಅಜೇಯ), ಲಿಟನ್ ದಾಸ್ (43) ಹಾಗೂ ತಮೀಮ್ ಇಕ್ಬಾಲ್ (47) ಅವರ ಬಿರುಸಿನ ಆಟದ ನೆರವಿನೊಂದಿಗೆ ಇನ್ನು 2 ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ದಾಖಲೆ ಬರೆದ ಬಾಂಗ್ಲಾ ಹುಲಿಗಳು:
ಇನ್ನು ಇಂದು ಬಾಂಗ್ಲಾದೇಶ ದಾಖಲೆಯ ರನ್ ಚೇಸ್ ಮಾಡಿದ್ದು, ಇದು ಟಿ-20 ಕ್ರಿಕೆಟ್ ಇತಿಹಾಸದಲ್ಲೇ ನಾಲ್ಕನೇ ಅತಿ ದೊಡ್ಡ ರನ್ ಚೇಸ್ ಆಗಿದೆ. ಈ ಮೂಲಕ ಬಾಂಗ್ಲಾ ಹುಲಿಗಳು ಇತಿಹಾಸದ ಪುಟ ಸೇರಿದ್ದಾರೆ. ಅಂತೆಯೇ ಇದರೊಂದಿಗೆ ಅಂಕಪಟ್ಟಿಯಲ್ಲಿ ಖಾತೆ ತೆರೆದುಕೊಂಡಿದೆ. ಇದೀಗ ಮೊದಲ ಸುತ್ತಿನ ಪಂದ್ಯಗಳ ಬಳಿಕ ಎಲ್ಲ ಮೂರು ತಂಡಗಳು ಸಮಾನ ಅಂಕಗಳನ್ನು ಹಂಚಿಕೊಂಡಂತಾಗಿದೆ.

ಕೃಪೆ: ಕನ್ನಡಪ್ರಭ

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ರಜನಿ ಜೊತೆ ಅಭಿನಯಿಸಿದ್ದ ನಾಯಿಯ ಮಾಲಕನಿಗೆ ಜಾಕ್’ಪಾಟ್! ಈಗ ನಾಯಿಯ ಬೆಲೆ ಎಷ್ಟು ಗೊತ್ತೇ?

ಮುಂದಿನ ಸುದ್ದಿ »

ಮುಟ್ಟಿದರೆ ಮುನಿ ಗಿಡದಲ್ಲೂ ಇದೆ ಬಹಳಷ್ಟು ಔಷಧೀಯ ಗುಣಗಳು! ಮುಂದೆ ಓದಿ..

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×