Wednesday January 10 2018

Follow on us:

Contact Us

ನಾವು ಹಿಂದೂ, ಮುಸ್ಲಿಮ್ ಸಂಘಟನೆ ಅಂಥ ನೋಡುವುದಿಲ್ಲ, ನನಗೆಲ್ಲರೂ ಒಂದೇ: ಎಸ್ಪಿ ಅಣ್ಣಾಮಲೈ

ನ್ಯೂಸ್ ಕನ್ನಡ ವರದಿ-(10.01.18): ಚಿಕ್ಕಮಗಳೂರು: ಮೂಡಿಗೆರೆ ಬಿಕಾಂ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಬಿಜೆಪಿ ಯುವಮೋರ್ಚಾ ನಾಯಕನನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಕೆಲವರ ವಿರುದ್ಧ ದೂರು ದಾಖಲು ಮಾಡಲಾಗುವುದು ಎಂದು ಚಿಕ್ಕಮಗಳೂರು ಎಸ್.ಪಿ ಅಣ್ಣಾಮಲೈ ಹೇಳಿದರು.

ಇಂದು ಎಸ್.ಪಿ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಡಿದ ಅವರು, ನಾವು ಹಿಂದೂ ,ಮುಸ್ಲಿಂ ಸಂಘಟನೆಗಳು ಎಂದು ನೋಡುವುದಿಲ್ಲ. ನಮಗೆ ಎಲ್ಲರೂ ಒಂದೇ ಎಂದು ಸ್ಪಷ್ಟಪಡಿಸಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಧನ್ಯಶ್ರೀ ತಂದೆ ಯಾದವ್ ಸುವರ್ಣ ಅವರನ್ನು ಹಾದಿ ತಪ್ಪಿಸಿ ದೂರು ನೀಡುವಂತೆ ಮಾಡಿದ ಆರೋಪಿಗಳ ವಿರುದ್ಧ ಎರಡನೇ ಎಫ್ ಐಆರ್ ದಾಖಲು ಮಾಡಲಾಗುವುದು.

ಮಾಧ್ಯಮಗಳ ಮೂಲಕ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಸಂಘಟನೆಯ ಕಾರ್ಯಕರ್ತರ ವಿರುದ್ಧ ಮೂರನೇ ಎಫ್ ಐಆರ್ ದಾಖಲು ಮಾಡಲಾಗುವುದು. ಇನ್ನು ವಾಟ್ಸಾಪ್ ನಲ್ಲಿ ಬೆದರಿಕೆ ನೀಡಿ ಹಾಕಿರುವ ಸಂದೇಶ ರವಾನೆ ಮಾಡಿರುವ ನಾಲ್ಕು ಮಂದಿಯ ವಿರುದ್ಧವೂ ಎಫ್ ಐಆರ್ ದಾಖಲು ಮಾಡುತ್ತೇವೆ. ಮತ್ತು ಈ ಪ್ರಕರಣದಲ್ಲಿ ಒಟ್ಟು ನಾಲ್ಕು ಎಫ್ ಐಆರ್ ದಾಖಲು ಮಾಡಲಾಗುವುದು ಎಂದು ತಿಳಿಸಿದರು.

ಇನ್ನು ಧನ್ಯಶ್ರೀ ತಾಯಿಯಲ್ಲಿ ಪೋನ್ ಕರೆಮಾಡಿ ಮಾತನಾಡಿಸಿದ ಪ್ರಕರಣದಲ್ಲಿ ನಯನ ಎಂಬವರಿಗೆ ನೋಟೀಸ್ ನೀಡಲಾಗುವುದು. ನಾವು ಯಾರೊಂದಿಗಾದರೂ ಮಾತನಾಡುವಾಗ ಅವರ ಅನುಮತಿ ಇಲ್ಲದೆ ಅದನ್ನು ರೆಕಾರ್ಡ್ ಮಾಡುವುದು ಅಪರಾಧವಾಗಿದೆ ಎಂದ ಅವರು ಧನ್ಯ ಶ್ರೀ ಜೊತೆ ಚಾಟ್ ಮಾಡಿದ್ದು ಸಂತೋಷ ಅಲ್ಲ. ಅದು ಬೇರೆ ಹೆಸರು ಬಳಸಿ ಚಾಟ್ ಮಾಡಲಾಗಿದೆ. ಯಾರು ಎಂಬುದು ನಮಗೆ ಈಗಾಗಲೇ ತಿಳಿದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಧನ್ಯಶ್ರೀಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆಕೆ ಆತ್ಮಹತ್ಯೆ ಮಾಡುವ ಎರಡು ದಿನ ಮುನ್ನ ಊಟ ಮಾಡಿರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದಾಗಿ ತಿಳಿದು ಬಂದಿದೆ ಎಂದು ತಿಳಿಸಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಹಸಿವು ತಾಳಲಾರದೆ ನಾಯಿಮರಿಯನ್ನು ನುಂಗಿದ ನಾಗರಹಾವು!

ಮುಂದಿನ ಸುದ್ದಿ »

ಕೋಡಿಜಾಲ್ ಮಸೀದಿಗೆ ಭೇಟಿ ನೀಡಿ ಸಾಮರಸ್ಯ ಮೆರೆದ ಅಯ್ಯಪ್ಪ ಭಕ್ತರು!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×