Tuesday March 13 2018

Follow on us:

Contact Us

ಆಧಾರ್ ಲಿಂಕಿಂಗ್: ಅನಿರ್ಧಿಷ್ಟಾವಧಿಗೆ ಗಡುವು ವಿಸ್ತರಿಸಿದ ಸುಪ್ರೀಮ್ ಕೋರ್ಟ್!

ನ್ಯೂಸ್ ಕನ್ನಡ ವರದಿ-(13.3.18): ಭಾರತೀಯ ನಾಗರಿಕರು ತಾವು ಹೊಂದಿರುವ ಆಧಾರ್ ಕಾರ್ಡನ್ನು ಅವರ ಬ್ಯಾಂಕ್ ಖಾತೆಗಳಿಗೆ, ಮೊಬೈಲ್ ಸಂಖ್ಯೆಗಳಿಗೆ ಜೋಡಿಸಬೇಕೆಂದು ಹಿಂದೆಯೇ ಸರಕಾರವು ಆದೇಶ ಹೊರಡಿಸಿತ್ತು. ಹಲವು ಗಡುವುಗಳನ್ನು ನೀಡಿ ಅದನ್ನು ವಿಸ್ತರಿಸುತ್ತಲೂ ಬಂದಿತ್ತು. ಕೊನೆಗೆ ಮಾರ್ಚ್ 31 2018 ಕೊನೆಯ ಗಡುವನ್ನಾಗಿ ಮಾಡಲಾಗಿತ್ತು. ಆದರೆ ಇದೀಗ ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯ ಗಡುವನ್ನು ಸುಪ್ರೀಮ್ ಕೋರ್ಟ್ ಅನಿರ್ದಿಷ್ಟಾವಧಿಗೆ ಮುಂದೂಡಿ ಆದೇಶ ಹೊರಡಿಸಿದೆ.

ಕೋರ್ಟಿನ ಮುಂದಿನ ಆದೇಶದವರೆಗೂ ಅಂದರೆ ಅನಿರ್ದಿಷ್ಟಾವಧಿವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ. ಕೇಂದ್ರ ಸರಕಾರ ಆಧಾರ್‌ ಕಡ್ಡಾಯ ಮಾಡುವ ಗಡುವನ್ನು ಮಾರ್ಚ್‌ 31ರವರೆಗೆ ವಿಸ್ತರಿಸಿತ್ತು. ಮೊಬೈಲ್‌ ಸಿಮ್‌, ಬ್ಯಾಂಕ್ ಖಾತೆಗೆ ಮಾರ್ಚ್‌ 31ರೊಳಗೆ ಆಧಾರ್‌ ಲಿಂಕ್‌ ಮಾಡಬೇಕೆಂದು ಕೇಂದ್ರ ಸರಕಾರ ಗಡುವನ್ನು ವಿಧಿಸಿತ್ತು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ರಕ್ತದಲ್ಲೇ ಪ್ರಜಾಪ್ರಭುತ್ವವಿಲ್ಲ!: ಅನಂತ್ ಕುಮಾರ್

ಮುಂದಿನ ಸುದ್ದಿ »

“ಅಲ್ಲಾಡ್ಸು” ಡ್ಯಾನ್ಸ್ ವೀಡಿಯೋ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತೇ?

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×