Monday June 19 2017

Follow on us:

Contact Us

ಉತ್ತರಪ್ರದೇಶ: ಹನ್ನೆರಡು ವರ್ಷದ ಬಾಲಕಿಯ ಮುಖಕ್ಕೆ ಆಸಿಡ್ ದಾಳಿ

ನ್ಯೂಸ್ ಕನ್ನಡ ವರದಿ-(19.6.17): ಉತ್ತರಪ್ರದೇಶ ಬರೇಲಿ ಜಿಲ್ಲೆಯಲ್ಲಿ ತಡ ರಾತ್ರಿ ವೇಳೆ ನಿದ್ರಿಸುತ್ತಿದ್ದ ಹನ್ನೆರಡು ವರ್ಷದ ಎಳೆಯ ಬಾಲಕಿಯ ಮುಖಕ್ಕೆ ಯುವಕನೊಬ್ಬ ಆಸಿಡ್ ಎರಚಿದ್ದಾನೆ. ಬಾಲಕಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ಪೊಲೀಸ್ ಮೂಲಗಳು ತಿಳಿಸಿದ ಪ್ರಕಾರ ಬರೇಲಿ ಜಿಲ್ಲೆಯ ಶಾಹಿ ಠಾಣಾ ವ್ಯಾಪ್ತಿಯ ಕಲ್ಯಾಣಪುರ ಗ್ರಾಮದ ನಿವಾಸಿ ರೈತ ರೋಶನ್ ಲಾಲ್ ಪತ್ನಿಯ ಜೊತೆಗೆ ಯಾವುದೋ ಮದುವೆ ಹೋಗಿದ್ದರು. ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಮತ್ತು ಚಿಕ್ಕ ಮಗ ಮಾತ್ರ ಇದ್ದರು.

ತಡ ರಾತ್ರಿ ಎಲ್ಲರೂ ನಿದ್ರಿಸುತ್ತಿದ್ದ ವೇಳೇ ಮನೆಗೆ ನುಗ್ಗಿದ ಒಬ್ಬ ಯುವಕ ಚಿಕ್ಕ ಮಗಳು ಸೋಮಾವತಿಯ(12) ಮುಖಕ್ಕೆ ಆಸಿಡ್ ಸುರಿದಿದ್ದಾನೆ. ಉರಿಯನ್ನು ತಡೆಯಲಾಗದೆ ಸೋಮಾವತಿ ಬೊಬ್ಬೆಹೊಡೆದಾಗ ಅವಳ ಅಕ್ಕ ಮತ್ತು ಚಿಕ್ಕಪ್ಪ ಓಮ್‍ಕಾರ್ ಅವಳ ಹತ್ತಿರ ಹೋಗಿ ನೋಡಿದಾಗ ಮುಖದಲ್ಲಿ ಆಸಿಡ್ ಇತ್ತು. ಓಮ್‍ಕಾರ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲವು ಸಮಯದ ನಂತರ ಪೊಲೀಸ್ ಅಲ್ಲಿಗೆ ತಲುಪಿದ್ದು ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಬಾಲಕಿಯ ಆರೋಗ್ಯಸ್ಥಿತಿ ಗಂಭೀರವಾಗಿದೆ. ಬಾಲಕಿಗೆ ಯಾರು ಆಸಿಡ್ ಎರಚಿದ್ದಾರೆ ಎನ್ನುವುದು ಸದ್ಯ ಗೊತ್ತಾಗಿಲ್ಲ. ಅಜ್ಞಾತ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಅಪರ ಪೊಲೀಸ್ ಅಧೀಕ್ಷಕ ಖ್ಯಾತಿ ಗಾರ್ಗ್ ತಿಳಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದಿಲ್ಲಿಯಲ್ಲಿ ಭೀಮ್ ಆರ್ಮಿಯ ಬೃಹತ್ ಪ್ರತಿಭಟನೆ

ಮುಂದಿನ ಸುದ್ದಿ »

ಡಾರ್ಜಿಲಿಂಗ್‍: ಇತ್ತ ತೀವ್ರಗೊಂಡ ಪ್ರತಿಭಟನೆ, ಅತ್ತ ನೆದರ್ಲೆಂಡ್‍ಗೆ ಹೊರಟ ಮಮತಾ ಬ್ಯಾನರ್ಜಿ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×