Wednesday January 11 2017

Follow on us:

Contact Us

3 ವರ್ಷಗಳ ಪರಿಶ್ರಮದಿಂದ ರಸ್ತೆ ನಿರ್ಮಿಸಿದ ಪಾರ್ಶ್ವ ವಾಯು ಪೀಡಿತ: ಕೇರಳದಲ್ಲೊಬ್ಬ ದಶರಥ ಮಾಂಝಿ

ನ್ಯೂಸ್ ಕನ್ನಡ(11-1-2017): ಭಾಗಶಃ ಪಾರ್ಶ್ವ ವಾಯುಗೊಳಗಾದ ತಿರುವನಂತಪುರದ 59 ವರ್ಷದ ವ್ಯಕ್ತಿಯೋರ್ವರು ಸತತ ಮೂರು ವರ್ಷಗಳ ಪರಿಶ್ರಮದಿಂದ ಸ್ವತಃ ತಾನೇ ಗುದ್ದಲಿಯ ಸಹಾಯದಿಂದ ರಸ್ತೆಯೊಂದನ್ನು ನಿರ್ಮಿಸಿ ಇದೀಗ ಎಲ್ಲರ ಗಮನಸೆಳೆದಿದ್ದಾರೆ.

18 ವರ್ಷಗಳ ಹಿಂದೆ ತೆಂಗಿನಮರದಿಂದ ಬಿದ್ದ ಪರಿಣಾಮ ಹಾಸಿಗೆ ಹಿಡಿದಿದ್ದ ಶಶಿಯವರ ಬಲಕೈ ಹಾಗೂ ಕಾಲು ಪಾರ್ಶ್ವ ವಾಯು ಪೀಡಿತವಾಗಿತ್ತು. ಆನಂತರ ಸ್ವಲ್ಪ ಚೇತರಿಸಿಕೊಂಡ ಅವರು ನಿಧಾನವಾಗಿ ನಡೆದಾಡಲು ಆರಂಭಿಸಿದರು. ಹೊಟ್ಟೆಹೊರೆಯುವ ಸಲುವಾಗಿ ಸಣ್ಣ ವ್ಯಾಪಾರವನ್ನು ಮಾಡುವ ಉದ್ದೇಶದಿಂದ ಗ್ರಾಮ ಪಂಚಾಯತ್ ಗೆ 3 ಚಕ್ರದ ವಾಹನಕ್ಕೆ ಮನವಿ ಸಲ್ಲಿಸಿದರು. ಇದೇ ಸಂದರ್ಭ ಇವರ ಮನೆಯಿಂದ ಪಟ್ಟಣವನ್ನು ಸಂಪರ್ಕಿಸಲು ಕೇವಲ ಕಾಲುದಾರಿಯಿರುವುದು ಶಶಿಯವರನ್ನು ಚಿಂತೆಗೀಡು ಮಾಡಿತು.

ಗ್ರಾಮದಿಂದ ಪಟ್ಟಣವನ್ನು ಸಂಪರ್ಕಿಸಲು ರಸ್ತೆ ನಿರ್ಮಾಣ ಮಾಡುವ ಶಶಿಯವರ ಚಿಂತನೆಗೆ ಗ್ರಾಮಸ್ಥರ ಅಪಹಾಸ್ಯದ ನಗು ಉತ್ತರವಾಗಿ ಸಿಕ್ಕಿತ್ತು. “ನೀವು ಪಾರ್ಶ್ವ ವಾಯು ಪೀಡಿತರು ಎನ್ನುವ ಕಾರಣದಿಂದ ವಾಹನವನ್ನು ನೀಡಲು ಸಾಧ್ಯವೇ ಇಲ್ಲ. ರಸ್ತೆ ನಿರ್ಮಾಣ ಎಂದಿಗೂ ಸಾಧ್ಯವಿಲ್ಲ” ಎಂದು ಪಂಚಾಯತ್ ನವರು ಹೇಳಿದರು ಎನ್ನುತ್ತಾರೆ ಶಶಿ.

ಈ ಪ್ರತಿಕ್ರಿಯೆಗಳನ್ನು ಸವಾಲಾಗಿ ಸ್ವೀಕರಿಸಿದ ಶಶಿ, ಸ್ವತಃ ತಾವೇ ಗುದ್ದಲಿ ಹಿಡಿದು ಕೆಲಸ ಆರಂಭಿಸಿದರು. ಆರಂಭಿಸಿದ ಕೆಲಸ ನಿಲ್ಲಲೇ ಇಲ್ಲ. ದಿನವೊಂದಕ್ಕೆ ನಿರಂತರ ಆರು ಹಂಟೆಗಳ ಕಾಲ ಕೆಲಸ ಮಾಡುತ್ತಿದ್ದ ಇವರು ಗ್ರಾಮಸ್ಥರು ತ್ರಾಸಪಟ್ಟು ಏರುತ್ತಿದ್ದ ಎತ್ತರದ ಜಾಗವನ್ನು ಅಗೆದು ಸಮತಟ್ಟು ಮಾಡತೊಡಗಿದರು. ಶಶಿಯವರ ನಿರಂತರ ಪ್ರಯತ್ನದ ಫಲವಾಗಿ 200 ಮೀಟರ್ ಉದ್ದದ ರಸ್ತೆಯೊಂದು ನಿರ್ಮಾಣವಾಗಿದೆ.

“ಗ್ರಾಮಸ್ಥರು ನನ್ನಿಂದ ಈ ಕಾರ್ಯ ಸಾಧ್ಯವಿಲ್ಲ ಎಂದುಕೊಳ್ಳುತ್ತಿದ್ದರಾದರೂ ನಾನು ಕೆಲಸವನ್ನು ಮುಂದುವರಿಸಿದ್ದೆ. ಈ ಕೆಲಸದಿಂದ ನಾನು ಫಿಸಿಯೋಥೆರಪಿ ಮಾಡಿದಂತೆಯೂ ಆಗುತ್ತದೆ ಎಂದುಕೊಂಡಿದ್ದೆ. ಪಂಚಾಯತ್ ವಾಹನ ನೀಡಲು ನಿರಾಕರಿಸಿತ್ತು. ಆದರೆ ಭವಿಷ್ಯದಲ್ಲಿ ಗ್ರಾಮಸ್ಥರಿಗೆ ರಸ್ತೆಯೊಂದು ಲಭಿಸುತ್ತದೆ ಅಂದುಕೊಂಡೆ” ಎನ್ನುತ್ತಾರೆ ಶಶಿ.

ಶಶಿಯವರ ಸಾಧನೆಯ ಬಗ್ಗೆ ಹೆಮ್ಮೆಪಡುವ ನೆರೆಮನೆಯ 52ರ ಹರೆಯದ ಸುಧಾ, ಅವರ ಕಾರ್ಯದಿಂದ ನಮಗೆಲ್ಲಾ ಉಪಕಾರವಾಗಿದೆ. ಎತ್ತರದ ಜಾಗವನ್ನು ಕಷ್ಟಪಟ್ಟು ಹತ್ತಬೇಕಾದ ಅಗತ್ಯ ಈಗಿಲ್ಲ” ಎನ್ನುತ್ತಾರೆ.

ಮಾತುಕತೆಯ ನಡುವೆ ಶಶಿ ಹಾಗೂ ಅವರ ಪತ್ನಿ ತಮ್ಮ ಭವಿಷ್ಯದ ಬಗ್ಗೆ ನೆನೆದು ಕಣ್ಣೀರು ಹಾಕುತ್ತಾರೆ. “ರಸ್ತೆ ನಿರ್ಮಿಸುವ ಕೆಲಸ ಮಾಡಬೇಡಿ ಎಂದು ನಾನು ಇವರಲ್ಲಿ ಹಲವು ಬಾರಿ ಕೇಳಿಕೊಂಡಿದ್ದೆ. ಮತ್ತೊಮ್ಮೆ ನನ್ನ ಗಂಡನಿಗೇನಾದರೂ ಸಂಭವಿಸಿದರೆ ಚಿಕಿತ್ಸೆ ನೀಡುವಷ್ಟು ಹಣ ನಮ್ಮಲ್ಲಿಲ್ಲ. ಈಗಾಗಲೇ ಸಾಕಷ್ಟು ಸಾಲ ಇದೆ. ಇದೀಗ ಎಲ್ಲರೂ ರಸ್ತೆಯ ಬಗ್ಗೆಯೇ ಮಾತನಾಡುತ್ತಿದ್ದಾರೆ. ಆದರೆ ನಮ್ಮ ಗತಿಯೇನು? ಎಂದು ಶಶಿಯವರ ಪತ್ನಿ ಪ್ರಶ್ನಿಸುತ್ತಾರೆ.

nkibk

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದೇಶದ ಸಾರಿಗೆ ಸಚಿವ ಎನಿಸಿಕೊಳ್ಳಲು ಮುಜುಗರವಾಗುತ್ತಿದೆ: ನಿತಿನ್ ಗಡ್ಕರಿ

ಮುಂದಿನ ಸುದ್ದಿ »

ಅಂತಾರಾಜ್ಯ ಕಳ್ಳಸಾಗಾಣಿಕಾ ಜಾಲವನ್ನು ಭೇದಿಸಿದ ಎಸ್ ಟಿಎಫ್: 6,400 ಆಮೆಗಳ ರಕ್ಷಣೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×