Thursday January 12 2017

Follow on us:

Contact Us

ಹಜ್ ಕೋಟಾವನ್ನು 1.70 ಲಕ್ಷಕ್ಕೆ ಏರಿಸಿದ ಸೌದಿ ಅರೇಬಿಯಾ

ನ್ಯೂಸ್ ಕನ್ನಡ(12-1-2017): ಭಾರತದ ಹಜ್ ಕೋಟಾವನ್ನು 1.36 ಲಕ್ಷದಿಂದ 1.70 ಲಕ್ಷದವರೆಗೆ ಸೌದಿ ಅರೇಬಿಯಾ ಹೆಚ್ಚಿಸಿದೆ. 29 ವರ್ಷಗಳಲ್ಲಿ ಇದು ಅತೀ ದೊಡ್ಡ ವಿಸ್ತರಣೆಯಾಗಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹಾಗೂ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವ ಡಾ. ಮುಹಮ್ಮದ್ ಸಾಲಿಹ್ ಬಿನ್ ತಾಹಿರ್ ಬೆಂತೆನ್ ಈ ಸಂಬಂಧ ನಡೆದ ಒಪ್ಪಂದಕ್ಕೆ ಜಿದ್ದಾದಲ್ಲಿ ಸಹಿ ಹಾಕಿದ್ದಾರೆ. ಹೊಸ ತಿದ್ದುಪಡಿಯು ಪ್ರಸಕ್ತ ವರ್ಷದಿಂದಲೇ ಚಾಲ್ತಿಗೆ ಬರಲಿದೆ.

ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ವಿದೇಶಗಳಿಂದ ಆಗಮಿಸುವವರ ಕೋಟಾವನ್ನು 5 ವರ್ಷಗಳ ಹಿಂದೆ 20 ಶೇ.ದಷ್ಟು ಸೌದಿ ಅಧಿಕಾರಿಗಳು ಕಡಿತಗೊಳಿಸಿದ್ದರು. 2012ರಲ್ಲಿ 1.70 ಲಕ್ಷದಷ್ಟಿದ್ದ ಕೋಟಾ ಇದೇ ಸಂದರ್ಭ 1.36 ಲಕ್ಷಕ್ಕಿಳಿದಿತ್ತು.

nkibk

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಎಟಿಎಂನಲ್ಲಿ ಬಂತು ಅರ್ಧ ನೋಟು!

ಮುಂದಿನ ಸುದ್ದಿ »

ಮೋದಿ ಡಿಗ್ರಿ ಮಾಹಿತಿ ನೀಡಲು ಸೂಚಿಸಿದ ಅಧಿಕಾರಿ ಎತ್ತಂಗಡಿ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×