Wednesday January 11 2017

Follow on us:

Contact Us
gadkariii

ದೇಶದ ಸಾರಿಗೆ ಸಚಿವ ಎನಿಸಿಕೊಳ್ಳಲು ಮುಜುಗರವಾಗುತ್ತಿದೆ: ನಿತಿನ್ ಗಡ್ಕರಿ

ನ್ಯೂಸ್ ಕನ್ನಡ(11-1-2017): ದೇಶದಲ್ಲಿ 30 ಶೇ.ದಷ್ಟು ಡ್ರೈವಿಂಗ್ ಲೈಸೆನ್ಸ್ ಗಳು ನಕಲಿಯಾಗಿದ್ದು, ದೇಶದ ಸಾರಿಗೆ ಸಚಿವ ಎನಿಸಿಕೊಳ್ಳುವುದಕ್ಕೆ ಮುಜುಗರವಾಗುತ್ತಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ರಸ್ತೆ ಸುರಕ್ಷತಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಕ್ಷಣ ಟ್ರ್ಯಾಕ್ ಮಾಡಲು ಸಹಾಯಕವಾಗುವಂತಹ, ಟ್ರಾಫಿಕ್ ಸಮಸ್ಯೆಗಳು ಎದುರಾದಾಗ ತಕ್ಷಣ ಸ್ಪಂದಿಸುವಂತಹ ವಿಶಿಷ್ಟ ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ರಸ್ತೆ ಸುರಕ್ಷತೆಯ ಕ್ರಮಗಳಲ್ಲಿ ಅನೇಕ ಸಮಸ್ಯೆಗಳಿವೆ. ಈ ತಪ್ಪುಗಳನ್ನು ನಾವು ಕಂಡುಹಿಡಿಯಬೇಕು. ರಸ್ತೆ ವಿನ್ಯಾಸವನ್ನು ಉತ್ತಮಗೊಳಿಸಬೇಕು. ಇದು ನಮ್ಮ ಕರ್ತವ್ಯ ಎಂದವರು ನುಡಿದರು.

ಧನಾತ್ಮಕ ಪರಿಣಾಮಕ್ಕಾಗಿ ದಂಡದ ಪ್ರಮಾಣಗಳು ಹೆಚ್ಚುತ್ತಿವೆ. ರಸ್ತೆ ಸುರಕ್ಷತಾ ನಿಯಮಗಳನ್ನು ಜನರು ಗಂಭೀರವಾಗಿ ಪಾಲಿಸುವುದು ಇದರಿಂದ ಸಾಧ್ಯವಾಗಲಿದೆ. ಇತ್ತೀಚಿನ ತಂತ್ರಜ್ಞಾನಗಳ ಮೂಲಕ ನಮ್ಮ ವ್ಯವಸ್ಥೆಯನ್ನು ಆಧುನಿಕ ಹಾಗೂ ಕಂಪ್ಯೂಟರೀಕರಣ ಮಾಡಲು ಸಾಧ್ಯವಿದೆ. ಇದನ್ನು ಕಾರ್ಯಗತಗೊಳಿಸಲು ನಾವು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತೇವೆ ಎಂದರು.

nkibk

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಹೊಳೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರ ದಾರುಣ ಸಾವು

ಮುಂದಿನ ಸುದ್ದಿ »

3 ವರ್ಷಗಳ ಪರಿಶ್ರಮದಿಂದ ರಸ್ತೆ ನಿರ್ಮಿಸಿದ ಪಾರ್ಶ್ವ ವಾಯು ಪೀಡಿತ: ಕೇರಳದಲ್ಲೊಬ್ಬ ದಶರಥ ಮಾಂಝಿ

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×