Wednesday January 11 2017

Follow on us:

Contact Us
Turtle1

ಅಂತಾರಾಜ್ಯ ಕಳ್ಳಸಾಗಾಣಿಕಾ ಜಾಲವನ್ನು ಭೇದಿಸಿದ ಎಸ್ ಟಿಎಫ್: 6,400 ಆಮೆಗಳ ರಕ್ಷಣೆ

ನ್ಯೂಸ್ ಕನ್ನಡ(11-1-2017): ಅಂತಾರಾಜ್ಯ ಕಳ್ಳಸಾಗಾಣಿಕಾ ಜಾಲವೊಂದನ್ನು ಭೇದಿಸಿರುವ ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 6,400 ಆಮೆಗಳನ್ನು ರಕ್ಷಿಸಿದ್ದು, ಕಿಂಗ್ ಪಿನ್ ಓರ್ವನನ್ನು ಬಂಧಿಸಿದ್ದಾರೆ.

440 ಕ್ವಿಂಟಾಲ್ ತೂಗುವ ಆಮೆಗಳನ್ನು ಮೂಟೆಕಟ್ಟಿ ಆರೋಪಿಯ ಮನೆಯ ಕಾಂಪೌಂಡ್ ಒಳಗಡೆ ಅಲ್ಲಲ್ಲಿ ಇರಿಸಲಾಗಿತ್ತು ಎಂದು ಎಸ್ ಟಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಗ್ಯಾಂಗ್ ನ ಕಿಂಗ್ ಪಿನ್ ರಾಜ್ ಬಹದ್ದೂರ್ ಎಂ¨ವನನ್ನು ಬಂಧಿಸಲಾಗಿದ್ದು, ಎರಡು ಭಾರತೀಯ ಮೃದುಚಿಪ್ಪಿನ ಆಮೆಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ.

“ಈ ಭಾರೀ ಪ್ರಮಾಣದ ಆಮೆಗಳನ್ನು ಒಂದೇ ಸ್ಥಳದಿಂದ ನಾವು ವಶಪಡಿಸಿಕೊಂಡಿದ್ದೇವೆ. ಜಾಲದಲ್ಲಿ ಇನ್ನೂ ಹೆಚ್ಚಿನ ವ್ಯಕ್ತಿಗಳು ಶಾಮೀಲಾಗಿರುವ ಬಗ್ಗೆ ಸಂಶಯಗಳಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಣ್ಣಮಟ್ಟದ ಕಳ್ಳ ಬೇಟೆಗಾರರು ಆಮೆಗಳನ್ನು ಗೌರಿಜಂಗ್, ಜಗದೀಶ್ಪುರ್ ಹಾಗೂ ಸಾಲ್ವಾನ್ ಪ್ರಾಂತ್ಯಗಳಲ್ಲಿ ಹಿಡಿದು ಸ್ಮಗ್ಲರ್ ಗಳಿಗೆ ಮಾರುತ್ತಿದ್ದಾರೆ. ಅವರಿಂದ ಆಮೆಗಳನ್ನು ಸಂಗ್ರಹಿಸಿ ಕೋಲ್ಕತ್ತಾಗೆ ಸಾಗಿಸುತ್ತಿರುವುದಾಗಿ ರಾಜ್ ಬಹದ್ದೂರ್ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಕಲ್ಕತ್ತಾದಿಂದ ಬಾಂಗ್ಲಾದೇಶ, ಮಯನ್ಮಾರ್, ಚೀನಾ, ಥಾಯ್ ಲ್ಯಾಂಡ್, ಹಾಂಕಾಂಗ್ ಹಾಗೂ ಇತರ ಆಗ್ನೇಯ ಏಷಿಯಾ ರಾಷ್ಟ್ರಗಳಿಗೆ ಸಾಗಾಟ ಮಾಡಲಾಗುತ್ತಿತ್ತು. ಆಮೆಗಳು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ್ ಹಾಗೂ ಶ್ರೀಲಂಕಾಗಳಲ್ಲಿ ಮಾತ್ರ ಕಾಣಸಿಗುತ್ತದೆ.

nkibk

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

3 ವರ್ಷಗಳ ಪರಿಶ್ರಮದಿಂದ ರಸ್ತೆ ನಿರ್ಮಿಸಿದ ಪಾರ್ಶ್ವ ವಾಯು ಪೀಡಿತ: ಕೇರಳದಲ್ಲೊಬ್ಬ ದಶರಥ ಮಾಂಝಿ

ಮುಂದಿನ ಸುದ್ದಿ »

ಕ್ಷಮೆಯಾಚಿಸದಿದ್ದರೆ ವೀಸಾ ರದ್ದುಗೊಳಿಸಲಾಗುವುದು- ಅಮೆಝಾನ್ ಗೆ ಸುಷ್ಮಾ ಸ್ವರಾಜ್ ಖಡಕ್ ಎಚ್ಚರಿಕೆ!

ಸಿನೆಮಾ

 • marali

  “ಮರಳಿ ಮನೆಗೆ” ಧ್ವನಿಸುರುಳಿ ಬಿಡುಗಡೆ ಸಂಭ್ರಮ

  February 24, 2017

  ನ್ಯೂಸ್ ಕನ್ನಡ(24-2-2017): ಖ್ಯಾತ ಬರಹಗಾರ, ಚಿಂತಕ, ರಂಗಕರ್ಮಿ ಯೋಗೇಶ್ ಮಾಸ್ಟರ್ ನಿರ್ದೇಶನದ ಚೊಚ್ಚಲ ಚಲನಚಿತ್ರ “ಮರಳಿ ಮನೆಗೆ”ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಯೋಗೇಶ್ ಮಾಸ್ಟರ್ ನಾದಬ್ರಹ್ಮ ಹಂಸಲೇಖ ಅವರು “ದೇಸಿ ಸಂಗೀತದ ...

  Read More
 • bhavana

  ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

  February 18, 2017

  ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

  Read More
 • Marali Manege

  ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

  February 16, 2017

  ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×