ರೆಡ್ ವಿಂಗ್ಸ್ ಪಿ.ಕೆ ನಗರ ಮತ್ತು ಸಲ್ಸಬೀಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಯಶಸ್ವೀ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ.

0
172

ನ್ಯೂಸ್ ಕನ್ನಡ ವರದಿ ಕಾಸರಗೋಡು, ಬಂಬ್ರಾಣ ನವೆಂಬರ್ 17 : ರೆಡ್ ವಿಂಗ್ಸ್ ಪಿ.ಕೆ ನಗರ ಮತ್ತು ಸಲ್ಸಬೀಲ್ ಚಾರಿಟೇಬಲ್ ಟ್ರಸ್ಟ್ ಬಂಬ್ರಾಣ ಮತ್ತು ಜನರಕ್ಷಾ ಬ್ಲಡ್ ಡೋನರ್ಸ್ ಕಾಸರಗೋಡು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)( HDFC ಬ್ಯಾಂಕ್ ಮಂಗಳೂರು,ಅಧಿಕೃತ ಪ್ರಾಯೋಜಕರು )ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವು ದಿನಾಂಕ 16 ನವೆಂಬರ್ 2019 ನೇ ಶನಿವಾರದಂದು ಕಾಸರಗೋಡಿನ ಬಂಬ್ರಾಣ ಜಂಕ್ಷನ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 275 ಮಂದಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.38 ಮಂದಿ ರಕ್ತ ನೀಡಿ ಜೀವದಾನಿಗಳಾದರು.ದಾನಿಗಳಿಂದ ರಕ್ತ ಸಂಗ್ರಹ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಯೇನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಶಿಬಿರಕ್ಕೆ ತ್ರಿಕರಿಪುರ ಶಾಸಕರಾದ ಚಂದ್ರಶೇಖರ್ ರವರು ಆಗಮಿಸಿ ಶುಭ ಕೋರಿದರು.

ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ, ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಹಾಗೂ ಕಾರ್ಯಕ್ರಮದ ಯಶಸ್ವಿಯಾಗಿ ಹಗಳಿರುಲು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.

ಪ್ರಕಟಣೆ:
ಮಾಧ್ಯಮ ವಿಭಾಗ:
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)

LEAVE A REPLY

Please enter your comment!
Please enter your name here