ಬೆಂಗಳೂರು ದಕ್ಷಿಣ; ಕಾಂಗ್ರೆಸ್ ಅಭ್ಯರ್ಥಿ ಬಿಕೆ ಹರಿಪ್ರಸಾದ್ ಅವರನ್ನು ಬೆಂಬಲಿಸಲು ನಿರ್ಧರಿಸಿದ ಬ್ರಾಹ್ಮಣ ಸಭಾ

0
301

ನ್ಯೂಸ್ ಕನ್ನಡ ವರದಿ (16-4-2019): ರಾಜಕೀಯವಾಗಿ ಎಲ್ಲರ ಗಮನವನ್ನು ಒಮ್ಮೆ ತನ್ನತ್ತ ಸೆಳೆದಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ‘ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್ ನೀಡುವಲ್ಲಿ ಆದ ಗೊಂದಲದ ಮೂಲಕ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿರುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಅವರಿಗೆ ಪರ ಒಲವು ಹೊಂದುವ ನಿರ್ಧಾರವನ್ನು ತಗೆದುಕೊಂಡಿದ್ದೇವೆ’ ಬ್ರಾಹ್ಮಣ ಸಭಾದ ಮುಖಂಡ ಸುದರ್ಶನ್ ಹೇಳಿದ್ದಾರೆ.

ನಗರದ ಪದ್ಮನಾಭನಗರದಲ್ಲಿ ಇಂದು ಆಯೋಜಿಸಿದ್ದ ಬ್ರಾಹ್ಮಣರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು. ನಂತರ ಮಾತನಾಡಿದ ಮುಖಂಡ ಮುರಳಿ ಅವರು, ಮೋದಿ ಅವರಿಗಿಂತಲೂ ಮುಂಚಿನಿಂದ ಬಿಜೆಪಿಯಲ್ಲಿ ಇದ್ದವರು ಅನಂತಕುಮಾರ್. ಅವರ ಪತ್ನಿ ಹಾಗೂ ಬ್ರಾಹ್ಮಣ ಮಹಿಳೆಗೆ ತುಂಬಾ ಅವಮಾನ ಮಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದರು. ಹೀಗಾಗಿ ನಾವು ಕಾಂಗ್ರೆಸ್ ಅಭ್ಯರ್ಥಿ ಬಿಕೆ ಹರಿಪ್ರಸಾದ್ ಅವರಿಗೆ ಬೆಂಬಲ ನೀಡಲಿದ್ದೇವೆ ಎಂದು ತಿಳಿಸಿರುವ ಬಗ್ಗೆ ವರದಿಯಾಗಿದೆ. ತೇಜಸ್ವಿನಿ ಅನಂತ್ ಕುಮಾರ್ ಮಾತ್ರ ಬಿಜೆಪಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

LEAVE A REPLY

Please enter your comment!
Please enter your name here