ದೇಶದಾದ್ಯಂತ ಜನವರಿ 31, ಫೆಬ್ರವರಿ 1 ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ

0
13

ನ್ಯೂಸ್ ಕನ್ನಡ ವರದಿ: ಭಾರತೀಯ ಬ್ಯಾಂಕುಗಳ ಸಂಘದೊಂದಿಗೆ ಬ್ಯಾಂಕುಗಳ ವೇತನ ಪರಿಷ್ಕರಣೆ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಜನವರಿ 31 ಮತ್ತು ಫೆಬ್ರವರಿ 1 ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಯಲಿದೆ. ಈ ಬಗ್ಗೆ ಜನವರಿ 15 ರ ಮಂಗಳವಾರ ಬ್ಯಾಂಕ್ ಯೂನಿಯನ್ಸ್ ಘೋಷಣೆ ಮಾಡಿದೆ.

ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಯೊಂದಿಗಿನ ವೇತನ ಪರಿಷ್ಕರಣೆ ಮಾತುಕತೆ ವಿಫಲವಾದ ನಂತರ, ಬ್ಯಾಂಕ್ ನೌಕರರ ಸಂಘಗಳು ಇಂದು ಜನವರಿ 31 ಮತ್ತು ಫೆಬ್ರವರಿ 1 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ. ಇನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಮ್ಮ ಎರಡನೇ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡನೆ ಮಾಡಲಿದ್ದು, ಅಂದೇ ಬ್ಯಾಂಕ್‌ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರಕ್ಕೆ ಮುಜುಗರ ಉಂಟು ಮಾಡಲಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here