ಮೋಸ ಮಾಡಿದ ಯಡಿಯೂರಪ್ಪ!: ಬಿಜೆಪಿ ಸೋಲಿಸುವುದೇ ಈಗ ನನ್ನ ಗುರಿ!: ಟಿಕೆಟ್ ವಂಚಿತೆ

0
914

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಈಗಾಗಲೇ ಬಿಜೆಪಿ ತನ್ನ ಮೊದಲ ಟಿಕೆಟ್ ಪಟ್ಟಿ ಬಿಡುಗಡೆ ಮಾಡಿದ, ಪಟ್ಟಿ ಬಿಡುಗಡೆ ಮಾಡಿದ ಕೂಡಲೇ ಬಿಜೆಪಿಯಲ್ಲಿ ಹಲವೆಡೆ ಭಿನ್ನಮತ ಸ್ಫೋಟಗೊಂಡಿದೆ.
ವಿಜಯಪುರ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಗಳಾದೇವಿಯವರು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ವಿ ಯಡಿಯೂರಪ್ಪನವರ ವಿರುದ್ಧ ತೀವ್ರ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು, ಈಗ ತಮಗೇ ಕೊಟ್ಟ ಮಾತನ್ನು ತಪ್ಪಿದ್ದಾರೆ. ಜಿಲ್ಲೆಗೆ ಒಬ್ಬ ಮಹಿಳಾ ಅಭ್ಯರ್ಥಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ತಿಳಿಸಿದ್ದರು. ಅವರ ಆಶ್ವಾಸನೆ ಮೇರೆಗೆ 2004 ರಿಂದಲೂ ಸತತವಾಗಿ ದುಡಿದು ಪಕ್ಷವನ್ನು ಬಲಪಡಿಸಿದ್ದೇವೆ ಆದರೆ ಈಗ ನಂಬಿಸಿ ಮೋಸ ಮಾಡಿದ್ದಾರೆ ಎಂದು ಮಂಗಳದೇವಿ ಆಕ್ರೋಶ ವ್ಯಕ್ತ ಪಡಿಸಿದರು.

ಕೇವಲ ಚುನಾವಣೆಯಲ್ಲಿ ಗೆಲುವಿನ ಒಂದೇ ಕಾರಣಕ್ಕಾಗಿ ಬೇರೆ ಕ್ಷೇತ್ರದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಪಕ್ಷದ ಸಿದ್ಧಾಂತಗಳೇ ಗೊತ್ತಿಲ್ಲದ ಅಭ್ಯರ್ಥಿಗೆ ಟಿಕೆಟ್ ನೀಡಿ ವಂಚನೆ ಮಾಡಿದ್ದಾರೆ. ಪಕ್ಷಕ್ಕಾಗಿ ಸರ್ಕಾರಿ ನೌಕರಿ ಹಾಗೂ ತನ್ನ ಮಗನ ಜೀವನವನ್ನು ಬಲಿ ಕೊಟ್ಟು ಪಕ್ಷದ ಬೆಳವಣಿಗೆ ಮಾಡಿದವರಿಗೆ ಮೋಸ ಮಾಡಿದ್ದಾರೆ.

ಸದ್ಯ ತಮ್ಮ ರಾಜಕೀಯ ಜೀವನ ಮುಕ್ತಾಯಗೊಳಿಸಲು ಚಿಂತನೆ ನಡೆಸಿದ ಬಿಜೆಪಿ ಅಭ್ಯರ್ಥಿ ನಡಹಳ್ಳಿ ಸೋಲಿಸುವುದು ನನ್ನ ಗುರಿಯಾಗಿದೆ. ಕ್ಷೇತ್ರದಲ್ಲಿ ನಡಹಳ್ಳಿ ಠೇವಣಿ ಕಳೆದುಕೊಳ್ಳಲಿದ್ದಾರೆ. ತಮ್ಮ ರಾಜಕೀಯ ವೃತ್ತಿ ಜೀವನದ ಮುಂದಿನ ನಡೆಯನ್ನು ತಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿ ಇನ್ನೆರಡು ದಿನದಲ್ಲಿ ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here