ಬಿಜೆಪಿ ನಾಯಕರ ಹಾಗೂ ಸಚಿವ ಸಾ.ರಾ. ಮಹೇಶ್‌ ರವರ ಭೇಟಿಯ ರಹಸ್ಯ ಬಿಚ್ಚಿಟ್ಟ ಈಶ್ವರಪ್ಪ ! ಹೇಳಿದ್ದೇನು ?

0
377

ನ್ಯೂಸ್ ಕನ್ನಡ ವರದಿ : ಬೆಂಗಳೂರಿನಲ್ಲಿ ಈಶ್ವರಪ್ಪ, ಸಾ.ರಾ. ಮಹೇಶ್‌ ಭೇಟಿ ಮಾಡಿದ್ದು ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮತ್ತು ಈಶ್ವರಪ್ಪ ಜೊತೆ ಸಾ.ರಾ ಮಹೇಶ್ ಗುರುವಾರ ರಾತ್ರಿ ಸಭೆ ನಡೆಸಿದ್ದರು. ಸಭೆ ಬಳಿಕ ಸಾರಾ ಮಹೇಶ್ ಅವರು ಕೆಕೆ ಗೆಸ್ಟ್ ಹೌಸ್ ಬಳಿ ಬಿಜೆಪಿ ನಾಯಕರ ಜೊತೆ ಮಾಧ್ಯಮಗಳಿಗೆ ಸೆರೆ ಸಿಕ್ಕಿದ್ದರು. ಈ ಮೂಲಕ ಮೂವರು ನಾಯಕರ ರಹಸ್ಯ ಭೇಟಿ ಬಯಲಾಗಿತ್ತು. ಇದೀಗ ಈ ಭೇಟಿಗೆ ಟ್ವಿಸ್ಟ್ ಸಿಕ್ಕಿದ್ದು, ಸಾರಾ ಮಹೇಶ್ ಭೇಟಿಯಾಗಿದ್ದ ಮುರಳೀಧರ್ ರಾವ್ ವಿರುದ್ಧ ಬಿಜೆಪಿ ಹೈಕಮಾಂಡ್ ಕೆಂಡಾಮಂಡಲವಾಗಿದ್ದಲ್ಲದೆ, ಈ ಭೇಟಿಯ ಹಿಂದಿನ ರಹಸ್ಯವನ್ನು ಈಶ್ವರಪ್ಪ ಬಿಚ್ಚಿಟ್ಟಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ನಾನು, ಮುರುಳೀಧರ ರಾವ್‌ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಸಾ.ರಾ.ಮಹೇಶ್‌ ಸಿಕ್ಕರು. ಅವರು ಭಾರತೀಯ ಜನತಾಪಕ್ಷದ ಕಾರ್ಯಕರ್ತರಾಗಿದ್ದವರು. ಈಗ ಜೆಡಿಎಸ್‌ಗೆ ಹೋಗಿದ್ದಾರೆ. ಶಿವಮೊಗ್ಗ ಕಲ್ಲಹಳ್ಳಿ ದೇವಸ್ಥಾನಕ್ಕೆ ದುಡ್ಡು ನೀಡುತ್ತೇನಿ ಎಂದಿದ್ದರು. ಮೊನ್ನೆ ಆಕಸ್ಮಿಕವಾಗಿ ಸಿಕ್ಕಾಗ ದೇವಸ್ಥಾನಕ್ಕೆ ದುಡ್ಡು ಕೊಡ್ತೀನಿ ಎಂದಿದ್ದು ಕೊಡಲ್ವೇನಯ್ಯ ಎಂದು ಕೇಳಿದೆ. ಕೊಡ್ತೀನಣ್ಣ ಎಂದರು. ಮಾತಾಡಿದ್ದು ಹೌದು. ಇದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದರು. ಆದರೆ ಭೇಟಿ ವಿಚಾರ ಗೊತ್ತಾಗುತ್ತಿದ್ದಂತೆಯೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಯಡಿಯೂರಪ್ಪ ಸೇರಿ ಎಲ್ಲರೂ ಮುರುಳೀಧರ್ ರಾವ್‍ ಹಾಗೂ ಈಶ್ವರಪ್ಪಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಹುಶಃ ಈ ಕಾರಣದಿಂದ ಈಶ್ವರಪ್ಪ ಈ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here