ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ‌ದ 3ನೇ ವಾರ್ಷಿಕೋತ್ಸವ ಪ್ರಯುಕ್ತ ಬ್ಲಡ್ ಡೊನೇಶನ್ ಎಕ್ಸ್ಪೋ-2019

0
503

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ‌ದ 3ನೇ ವಾರ್ಷಿಕೋತ್ಸವದ ಪ್ರಯುಕ್ತ ಸರ್ವ ಧರ್ಮೀಯ ಧಾರ್ಮಿಕ ಗುರುಗಳಿಂದ ಉದ್ಘಾಟನೆಗೊಂಡು ಯಶಸ್ವಿಯಾಗಿ ಸಮಾರೋಪ ಗೊಂಡ ಎರಡು ದಿನದ ಬ್ಲಡ್ ಡೊನೇಶನ್ ಎಕ್ಸ್ಪೋ-2019.

Day 1
ಮಂಗಳೂರು,ಆಗಸ್ಟ್ 03 : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಮೂರನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಎರಡು ದಿನದ ಬ್ಲಡ್ ಡೊನೇಷನ್ ಎಕ್ಸ್ಪೋ”-2019ರ ಉದ್ಘಾಟನಾ ಸಮಾರಂಭ ನಗರದ ಫಿಝಾ ಮಾಲ್ ನಲ್ಲಿ ನಡೆಯಿತು.

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಲ್ ಸುಫಿಯಾನ್ ಸಖಾಫಿ, ಮಿಲಾಗ್ರಿಸ್ ಚಚ್೯ನ ಧರ್ಮಗುರು ಫಾ.ಅನಿಲ್ ಫ್ರಾನ್ಸಿಸ್ ಪಿಂಟೋ ಹಾಗೂ ಪೊಳಲಿ ರಾಮಕೃಷ್ಣ ತಪೋವನದ ವಿವೇಕ್ ಚೈತನ್ಯಾನಂದ ಸ್ವಾಮಿ ಮೂರು ಧರ್ಮಗುರುಗಳು ಜೊತೆ ಸೇರಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯ ಪ್ರಾಧ್ಯಾಪಕ ಅನೀಸ್ ಕೌಸರಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಸಂಪೂರ್ಣ ಮಾಹಿತಿ ಇರುವ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.

ವೆನ್ಲಾಕ್ ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ. ಶರತ್ ಕುಮಾರ್ ರಾವ್.ಜಿ, ತೇಜಸ್ವಿನಿ ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ಶಿಲ್ಪ ಪ್ರೇಮ್ ಕುಮಾರ್, ಶ್ರೀನಿವಾಸ್ ಅಸ್ಪತ್ರೆಯ ಡಾ.ಸುಕೇಶ್ ಕೊಟ್ಟಾರಿ, ಕಚಚೂರು ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ವೆಂಕಟೆಸ್ ರಾಜ್ ರೈ, ರೆಡ್ ಕ್ರಾಸ್ ಸೊಸೈಟಿಯ ಪ್ರವಿಣ್ ಕುಮಾರ್, ಎ.ಜೆ ಅಸ್ಪತ್ರೆಯ ಪಿ.ಆರ್ ಗೋಪಾಲಕೃಷ್ಣ ರಕ್ತದಾನ ಕುರಿತು ಮಾಹಿತಿ ನೀಡಿದರು.

ಯೇನೆಪೋಯ ಅಸ್ಪತ್ರೆಯ ಶಿಬಿರ ಸಂಯೋಜಕ ಅಬ್ದುಲ್ ರಝಾಕ್, ಸಾಮಾಜಿಕ ಕಾರ್ಯಕರ್ತ ಮುನೀರ್ ಬಾವ ಮುಂತಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಈ ಸಂದರ್ಭ ಸಾರ್ವಜನಿಕರಿಗೆ ರಕ್ತ ಮತ್ತು ಆರೋಗ್ಯ ಎಂಬ ವಿಷಯದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ತನ್ಸಿಫ್ ಬಿ.ಎಂ ಕಿಲ್ಲೂರು ಅವರು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿ ಕೊಟ್ಟರು.

ಇದೆ ಮೊದಲ ಬಾರಿಗೆ ಏರ್ಪಡಿಸಲಾಗಿದ್ದಾ “ರಕ್ತ, ರಕ್ತದ ವರ್ಗಾವಣೆ ಹೇಗಾಯಿತು, ಮೊಟ್ಟ ಮೊದಲು ರಕ್ತವನ್ನು ಯಾರಿಂದ ಮತ್ತು ಹೇಗೆ ವರ್ಗಾಯಿಸಿದರು ಮತ್ತು ರಕ್ತದ ಗ್ರೂಪ್ ಗಳ ವರ್ಗಿಕರಣ ಹೇಗಾಯಿತು ಎಂಬ ಇತಿಹಾಸವುಳ್ಳ ಬ್ಲಡ್ ಎಕ್ಸ್ಪೋ -2019 ರ ಮಾಹಿತಿಯನ್ನು BHLನ ರಾಯಚೂರು ಜಿಲ್ಲೆಯ ಅಡ್ಮಿನ್ರಾದ ಮುನವ್ವರ್ ಅಲಿ ಯವರು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ರಕ್ತದಾನದ ಮಹತ್ವ ವನ್ನು ಸಾರುವ ನೌಷಾದ್ ಕ್ಲಾಸಿಕ್ ನಿರ್ದೇಶನದ “ಬದಲಾವಣೆ ನಮ್ಮಿಂದಲೇ” ಕಿರುಚಿತ್ರ ಬಿಡುಗಡೆ ಹಾಗೂ ಪ್ರದರ್ಶನ ಕಾರ್ಯಕ್ರಮ ನಡೆಯಿತು.

ವಿಜಯ ಕುಮಾರ್ ಕೊಡಿಯಾಲ್ ಬೈಲ್ ಬದಲಾವಣೆ ನಮ್ಮಿಂದಲೇ” ಕಿರುಚಿತ್ರ ಬಿಡುಗಡೆಗೊಳಿಸಿದರು.

ನವರಸ ರಾಜೆ ಭೋಜರಾಜ್ ವಾಮಂಜೂರು, ಕೋಸ್ಟಲ್ ವುಡ್ ನಿರ್ಮಾಪಕರಾದ ಕಿಶೋರ್ ಡಿ.ಶೆಟ್ಟಿ, ರಾಜೇಶ್ ಕುಡ್ಲ ಮುಂತಾದ ಹಲವಾರು ಕೋಸ್ಟಲ್ ವುಡ್ ದಿಗ್ಗಜರು ಕಿರು ಚಿತ್ರ ವಿಕ್ಷೀಸಿ ಪ್ರಶಂಸೆ ವ್ಯಕ್ತ ಪಡಿಸಿದಿದರು.

ಬಾಲ ಪ್ರತಿಭೆಗಳಾದ ವಂಶಿ ರತ್ನಕುಮಾರ್, ಮೊಹಮ್ಮದ್ ಶಯಾನ್ ವಾಮಂಜೂರು, ಸಾನ್ವಿತ್ ಕುಲಾಲ್ ಮೂಡಬಿದ್ರೆ ರವರನ್ನು ಸನ್ಮಾನಿಸಲಾಯಿತು.

ವಾರ್ಷಿಕೊತ್ಸವದ ಪ್ರಯುಕ್ತ ಪುಟಾಣಿಗಳಿಗೆ ಕಾರ್ಯಗಾರ, ಚಿತ್ರಕಲಾ ಸ್ಪರ್ಧೆ, ಸಾರ್ವಜನಿಕರಿಗೆ ರಕ್ತ ದಾನ ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿ ನಿಡಲಾಯಿತು.

ಮೊದಲನೇ ದಿನದ ಶಿಬಿರದಲ್ಲಿ 35 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ವೆನ್ಲಾಕ್ ಆಸ್ಪತ್ರೆ ವೈಧ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಇಮ್ರಾನ್ ಅಡ್ಡೂರು ಸ್ವಾಗತಿಸಿ ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

day-2

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಮೂರನೇ ವಾರ್ಷಿಕೋತ್ಸವ ಪ್ರಯುಕ್ತ ಬ್ಲಡ್ ಡೊನೇಶನ್ ಎಕ್ಸ್ಪೋ – 2019 ರ ಎರಡನೇ ದಿನವಾದ ಬಾನುವಾರ ಆಗಸ್ಟ್ 4 ರಂದು ಸಮಾರೋಪ ಸಮಾರಂಭ ಯಶಸ್ವಿಯಾಗಿ ಮಂಗಳೂರಿನ ಫಾರಂ ಫಿಝಾ ಮಾಲ್ ನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

ಬೆಳಗ್ಗೆ ಮಹಿಳೆಯರಿಗೆ ರಕ್ತದಾನದ ಜಾಗೃತಿ ಮೂಡಿಸುವ ಸಲುವಾಗಿ ಮಹಿಳಾ ಅಧಿಕಾರಿಯಾದ ಮಂಗಳೂರಿನ ಹೆಲ್ತ್ ಇನ್ಸ್ಪೆಕ್ಟರ್ ಆಗಿರುವ ಕು.ಆಯಿಷಾ ಪಿ ಮತ್ತು ಕೆ ಎಸ್ ಹೆಗ್ಡೆ ಆಸ್ಪತ್ರೆಯ ಸಹಾಯಕ ವೈದ್ಯೆಯಾಗಿರುವ ಡಾ.ಲಕ್ಷ್ಮಿ ಎಸ್ ದಾಸ್ ಅವರಿಂದ ಸಮಾಲೋಚನೆ ಮತ್ತು ಮಾಹಿತಿ ಶಿಬಿರ ನಡೆಯಿತು.ಮತ್ತು ಪುಟಾಣಿಗಳಿಗೆ ವಿದ್ಯಾರ್ಥಿಗಳಿಗೆ ಯುವಕ ಯುವತಿಯರಿಗೆ 3 ವಿಭಾಗದಲ್ಲಿ ಚಿತ್ರ ಕಲಾ ಸ್ಪರ್ಧೆ ನಡೆಯಿತು.ನಂತರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿಗಳಿಂದ ‘ಡ್ರಗ್, ದ ಕಿಲ್ಲರ್’ ನಾಟಕ ಮತ್ತು ಕಿರು ಚಿತ್ರ ಪ್ರದರ್ಶನ ನಡೆಯಿತು.

ನಂತರ ಸಾಯಂಕಾಲ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಜನಾಬ್ ಬಿ ಎಂ ಫಾರೂಕ್ ರವರು ಉದ್ಘಾಟನೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಬ್ಲಡ್ ಡೊನೇಶನ್ ಎಕ್ಸ್ಪೋ. ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಆಯೋಜಿಸಿರುವ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಕಾರ್ಯ ಶ್ಲ್ಯಾಘನೀಯ.ಇಂತಹ ಕಾರ್ಯಕ್ರಮಗಳು ಜನರಿಗೆ ರಕ್ತದಾನ ಮಾಡಲು ಸ್ಪೂರ್ತಿಯನ್ನು ನೀಡುತ್ತದೆ.ರಕ್ತದಾನದಿಂದ ಪ್ರೀತಿ ಸಂಬಂಧ ಇನ್ನಷ್ಟು ಹೆಚ್ಚಿಸಬಹುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕರಾದ ಮೊಯಿದಿನ್ ಬಾವಾರವರು ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಈ ಭಾರತದಲ್ಲಿ ಎಲ್ಲಾ ಜಾತಿ ಧರ್ಮದವರನ್ನು ಒಂದು ಗೂಡಿಸಿ ಸೃಷ್ಟಿ ಕರ್ತನು ಕೊಟ್ಟ ಜೀವಿತಾವಧಿಯಲ್ಲಿ ಏನಾದರೂ ಒಂದು ಉತ್ತಮ ಕಾರ್ಯವನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಯುವಕರು ತಂಡವನ್ನು ಕಟ್ಟಿ ಕೊಂಡು ಮಾಡುತ್ತಿರುವ ಇಂತಹ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಶ್ಲಾಘನೀಯ ಎಂದರು.

ಪಾಪ್ಯುಲರ್ ಫ್ರಂಟ್ ಒಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯರಾದ ಜನಾಬ್ ಶಾಫಿ ಬೆಳ್ಳಾರೆ ಮಾತನಾಡಿ ಪ್ರಸ್ತಕ ಸನ್ನಿವೇಶದಲ್ಲಿ ಸಾಮಾಜಿಕ ತಾಣಗಳು ದುರ್ಬಳಕೆ ಆಗುವ ಈ ಕಾಲ ಘಟ್ಟದಲ್ಲಿ ಸುಮಾರು 3 ವರ್ಷಗಳಿಂದ ಮನುಷ್ಯ ಜೀವನ್ನು ಉಳಿಸುವ ಕಾರ್ಯವನ್ನು ಮಾಡುತ್ತಿರುವ ಬ್ಲಡ್ ಹೆಲ್ಪ್ ಕಾರ್ಯವನ್ನು ಅಭಿನಂದಿಸುತ್ತೇನೆ. ಸಮಾಜದಲ್ಲಿ ಪರಸ್ಪರ ಜನರಿಗೆ ಉಪಕಾರ ವಾಗುವಂತ ಕೆಲಸ ಹೆಚ್ಚು ಹೆಚ್ಚು ನಡೆಸುವುದರ ಮೂಲಕ ಮನುಷ್ಯರ ಸಂಬಂಧಗಳು ಬೆಳೆಯಲು ಅನೋನ್ಯತೆ ಸೌಹಾರ್ದತೆಯನ್ನು ಬೆಳೆಸಲು ಸಾಧ್ಯವಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ ಮಿಸ್ಬಾ ವುಮೆನ್ಸ್ ಕಾಲೇಜು ಚೆಯರ್ಮೆನ್ ಮುಮ್ತಾಜ್ ಅಲಿ,ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಾಪಕರಾದ ಅಬ್ದುಲ್ ರವೂಫ್ ಪುತ್ತಿಗೆ,ಬ್ಯಾರೀಸ್ ಕಾಲೇಜು ಪ್ರಾದ್ಯಾಪಕರಾದ ಡಾ.ಮುಸ್ತಫಾ ಬಸ್ತಿಕೋಡಿ ,ಬಹು ಎಸ್ ಬಿ ದಾರಿಮಿ ಉಪ್ಪಿನಂಗಡಿ,ನೌಶಾದ್ ಹಾಜಿ ಸೂರಲ್ಪಾಡಿ ,ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಲಹೆಗಾರರಾದ ಮುಸ್ತಫಾ ಅಡ್ಡೂರು ದೆಮ್ಮೆಲೆ, ತಬೂಕ್ ದಾರಿಮಿ ಇನ್ನೂ ಹಲವಾರು ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಸಿದ್ದರು.ಇದೆ ವೇದಿಕೆಯಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದ ಮತ್ತು ರಕ್ತ ಪೂರೈಕೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಜಿಲ್ಲೆಯ ಇಲ್ಯಾಸ್ ಬಜ್ಪೆ ,ಸುಧಾಕರ್ ರೈ ಸುಳ್ಯ ಮತ್ತು ಸತೀಶ್ ಸಾಲ್ಯಾನ್ ಅವರನ್ನು ಅತಿಥಿಗಳಿಂದ ಸನ್ಮಾನಿಸಲಾಯಿತು.

ನಂತರ ಎರಡು ದಿನಗಳ ಕಾಲ ನಡೆದ ಚಿತ್ರಕಲಾ ಸ್ಪರ್ಧೆ ಮತ್ತು ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅತಿಥಿಗಳಾದ ಜನಾಬ್ ಬಿ.ಎಂ ಫಾರೂಕ್,ಮೊಯಿದಿನ್ ಬಾವಾ,ಮುಮ್ತಾಜ್ ಅಲಿ ಮತ್ತು ಶಾಫಿ ಬೆಳ್ಳಾರೆ ಯವರಿಂದ ಪ್ರಮಾಣ ಪತ್ರ ಮತ್ತು ಟ್ರೋಫಿಯನ್ನು ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ವ್ಯವಸ್ಥಾಪಕರಾದ ಸಿರಾಜುದ್ದೀನ್ ಪರ್ಲಡ್ಕ ರವರು ವಹಿಸಿದ್ದರು ಕಾರ್ಯಕ್ರಮದ ಕೊನೆಯಲ್ಲಿ ಕೊನೆಯ ಹಂತದ ರಸ ಪ್ರಶ್ನೆ ಸಾರ್ವಜನಿಕರಿಗಾಗಿ ನಡೆಯಿತು.ರಸಪ್ರಶ್ನೆ ಸ್ಪರ್ಧೆಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭೆ ತನ್ಸೀಫ್ ಬಿ ಎಂ ನೆರವೇರಿಸಿದರು.

ಎರಡನೇ ದಿನದ ರಕ್ತದಾನ ಶಿಬಿರದಲ್ಲಿ 42 ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ತೇಜಶ್ವಿನಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಎರಡು ದಿನದ ಕಾರ್ಯಕ್ರಮದುದ್ದಕ್ಕೂ ಬ್ಲಡ್ ಹೆಲ್ಪ್ ಲೈನ್ ಸಮವಸ್ತ್ರಧಾರಿ ಮ್ಯಾಸ್ಕಾಟ್ ಗೊಂಬೆಯು ಸಾರ್ವಜನಿಕರ ವಿಶೇಷ ಆಕರ್ಷಣೆಗೆ ಮತ್ತು ಪ್ರಶಂಸೆಗೆ ಪಾತ್ರವಾಯಿತು .

ಕಾರ್ಯಕ್ರವನ್ನು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಕರಾದ ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರೆ,ಇಮ್ರಾನ್ ಮದಕ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯನಿರ್ವಾಹಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here