ಪ್ರಚಾರ ಅವಧಿ ಮೊಟಕುಮಾಡಿದ ಆಯೋಗ; ಕೆಂಡಾಮಂಡಲರಾದ ದೀದಿ

0
106

ನ್ಯೂಸ್ ಕನ್ನಡ ವರದಿ (16-5-2019): ಅಮಿತ್ ಶಾ ರೋಡ್‌ ಶೋ ವೇಳೆ ಭಾರಿ ಹಿಂಸಾಚಾರ ನಡೆದ ಕಾರಣ, ಚುನಾವಣಾ ಆಯೋಗವು ಒಂದು ದಿನ ಮುಂಚಿತವಾಗಿ ಅಂದರೆ ಇಂದು (ಮೇ 16) ರಾತ್ರಿ 10 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳಿಸುವಂತೆ ಆದೇಶ ಹೊರಡಿಸಿದೆ. ಬಹಿರಂಗ ಪ್ರಚಾರದ ಅವಧಿಯನ್ನು ಒಂದು ದಿನ ಮೊಟಕು ಗೊಳಿಸಿರುವ ಚುನಾವಣಾ ಆಯೋಗದ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೆಂಡಾಮಂಡಲವಾಗಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ 9 ರ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಹಿರಂಗ ಪ್ರಚಾರ ಅವಧಿ ಮೊಟಕುಗೊಳಿಸಿರುವ ಚುನಾವಣಾ ಆಯೋಗದ ಈ ಕ್ರಮ ಅನೈತಿಕ, ಅನ್ಯಾಯ ಮತ್ತು ರಾಜಕೀಯ ಪ್ರೇರಿತ ಎಂದು ದೂರಿದ್ದಾರೆ. ಹಾಗೂ ಮಮತಾ ಬ್ಯಾನರ್ಜಿಯವರಿಗೆ ಎಸ್’ಪಿ ನಾಯಕ ಅಖಿಲೇಶ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here