ಕೇಂದ್ರ ಸರ್ಕಾರವನ್ನು ಮುಕ್ತವಾಗಿ ಟೀಕಿಸದಂತಹ ವಾತಾವರಣವಿದೆ: ರಾಹುಲ್ ಬಜಾಜ್

0
228

ನ್ಯೂಸ್ ಕನ್ನಡ ವರದಿ: ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಶನಿವಾರ ಭಾರತದಲ್ಲಿ ಜನರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾತನಾಡಲು ಭಯಭೀತರಾಗಿದ್ದಾರೆ ಮತ್ತು ಸರ್ಕಾರವು ಸರಿಯಾದ ಮನೋಭಾವದಿಂದ ಟೀಕೆಗಳನ್ನು ಸ್ವೀಕರಿಸಬಹುದೇ ಎಂದು ಖಚಿತವಾಗಿಲ್ಲ ಎಂದು ಹೇಳಿದರು.

ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿದ್ದ ವೇದಿಕೆಯಲ್ಲಿ ಸಭಿಕರಾಗಿ ಮಾತನಾಡಿದ ರಾಹುಲ್ ಬಜಾಜ್ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಸರ್ಕಾರವನ್ನು ಯಾರೂ ಕೂಡ ಟೀಕಿಸಬಹುದಾಗಿತ್ತು, ಆದರೆ ಪ್ರಸ್ತುತ ಸಮಯದಲ್ಲಿ, ಕೈಗಾರಿಕೋದ್ಯಮಿಗಳು ಮೋದಿ ಸರ್ಕಾರವನ್ನು ಬಹಿರಂಗವಾಗಿ ಟೀಕಿಸಲು ಸಾಧ್ಯವಿಲ್ಲದಂತಹ ವಾತಾವರಣವಿದೆ ಎಂದರು.

LEAVE A REPLY

Please enter your comment!
Please enter your name here