ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ದುಬೈ ಘಟಕದ ಉದ್ಘಾಟನೆ

0
45386

ನ್ಯೂಸ್ ಕನ್ನಡ ವರದಿ: (21.10.18): ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಮಂಗಳೂರು ಇದರ ಯುಎಐ ಘಟಕದ ಉದ್ಘಾಟನಾ ಸಮಾರಂಭ ದುಬೈ ಜೆ.ಡಬ್ಲ್ಯು ಮೆರೆಟ್ ಹೋಟೆಲಿನಲ್ಲಿ ಅದ್ದೂರಿಯಿಂದ ನಡೆಯಿತು. ಬ್ಯಾರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಬನಾದಿಯಾಗಬೇಕು ಎಂಬ ಉದ್ದೇಶದಿಂದ ಎಸ್.ಎಂ ರಶೀದ್ ಹಾಜಿ ಅವರ ನೇತೃತ್ವದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸ್ಥಾಪನೆಗೊಂಡ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ತಮ್ಮ ಕಾರ್ಯವ್ತಾಪ್ತಿಯನ್ನು ವಿಸ್ತರಿಸಿ ಯುಎಐ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಸಿ ಚಾಲನೆ ನೀಡಿತು.

ಈ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಮಂಗಳೂರು ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಸುಮಾರು 15 ಲಕ್ಷದಷ್ಟು ಇರುವ ಬ್ಯಾರಿ ಸಮುದಾಯ ಇದೀಗ ಎದುರಿಸುತ್ತಿರುವ ಸವಾಲುಗಳು ಮತ್ತು ಮೂಲತಃ ವ್ಯಾಪಾರಿಗಳಾದ ಬ್ಯಾರಿಗಳು ಭವಿಷ್ಯದಲ್ಲಿ ಉಳಿದ ವ್ಯಾಪಾರಿ ಸಮುದಾಯಗಳಂತೆ ಬಲಿಷ್ಠವಾಗಳು ಬೇಕಾದ ಪೂರ್ವ ತಯಾರಿಯ ಕುರಿತು ಅಂಕಿ ಅಂಶಗಳೊಂದಿಗೆ ವಿವರಿಸಿದರು.

ನಮ್ಮ ನಡುವೆ ಇಂದು ವೇದಿಕೆಯಲ್ಲಿರುವ ತುಂಬೆ ಗ್ರೂಪಿನ ಸ್ಥಾಪಕ ಡಾ. ತುಂಬೆ ಮುಹಿದ್ದೀನ್ ಉದ್ಯಮಿಯಾಗಿ ಬೆಳೆದಿರುವ ರೀತಿ ನಮಗೆ ಮಾದರಿ, ಇಂತಹ ಉದ್ಯಮಿಗಳು ಸಮುದಾಯದಿಂದ ಮತ್ತಷ್ಟು ಬರಬೇಕು, ಆರ್ಥಿಕ ಸಾಮರ್ಥ್ಯ ಹಾಗೂ ವ್ಯಾಪಾರದ ಕೌಶಲ್ಯ ಹೊಂದಿರುವ ಸಮುದಾಯದ ಸಮರ್ಥ ಯುವ ಹಾಗೂ ಅನುಭವಿ ನಾಯಕರ ಭವಿಷ್ಯದ ಯೋಜನೆಗಳಿಗೆ ಬಿಸಿಸಿಐ ವೇದಿಕೆಯಾಗಲಿದೆ. ನಮ್ಮ ಯೋಜನೆಗಳು ಸಮರ್ಪಕವಾಗಿ ಜಾರಿಗೆ ತಂದಲ್ಲಿ ಬ್ಯಾರಿ ಸಮುದಾಯವನ್ನು ಭಾರತದ ಬಲಿಷ್ಠ ಸಮುದಾಯದಲ್ಲಿ ಒಂದಾಗಿ ಇತಿಹಾಸ ರಚಿಸಲಿದೆ ಎಂದು ಆಶಿಸಿದರು.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಯುಎಈ ಘಟಕವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದ ಬಿಸಿಸಿಐ ಯುಎಈ ಘಟಕದ ಪೋಷಕರಾದ, ತುಂಬೆ ಗ್ರೂಪಿನ ಸ್ಥಾಪಕರಾದ ಡಾ.ತುಂಬೆ ಮುಹಿದ್ದೀನ್, ಪ್ರಾಮಾಣಿಕತೆ ನೈತಿಕ ಮೌಲ್ಯಾಧಾರಿತವಾಗಿ ನಿರಂತರ ಶ್ರಮದಿಂದ ನಡೆಸಿದ ಯಾವುದೇ ಕೆಲಸ, ಉದ್ಯಮ ಖಂಡಿತ ಯಶಸ್ಸನ್ನು ನೀಡುತ್ತದೆ.

ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಇಲ್ಲ, ಸುಮ್ಮನೆ ಕುಳಿತುಕೊಂಡು ಅದೃಷ್ಟ ಹುಡುಕಿಕೊಂಡು ಬಂದು ಯಶಸ್ಸು ತಂದು ಕೊಡುತ್ತೆ ಎಂದು ಆಶಿಸುವುದು ಮೂರ್ಖತನ. ಬಿಸಿಸಿಐ ಜಾಗೃತಿ ಮೂಡಿಸಲು ಯೋಜಿಸಿರುವ ಕಾರ್ಯಕ್ರಮಗಳು ಶ್ಲಾಘನೀಯ, ನಮ್ಮ ಬೆಂಬಲ ಸದಾ ಇದೆ, ಸಮುದಾಯದ ಸಬಲೀಕರಣಕ್ಕೆ ಇದು ನಾಂದಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮಾತನಾಡಿ, ಬಿಸಿಸಿಐ ಯುಎಈ ಘಟಕ ಚಾಲನೆ ನೀಡಿದ್ದು ಖುಷಿಯ ವಿಚಾರ, ಇದೇ ರೀತಿ ಗಲ್ಫ್ ದೇಶದೆಲ್ಲೆಡೆ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಲಿ ಯಶಸ್ಸು ನಿಮ್ಮದಾಗಲಿ ಎಂದರು. ಉಮರ್ ಟಿಕೆ ದಿಕ್ಸೂಚಿ ಭಾಷಣ ಮಾಡಿದರು. ಸಮಾರಂಭದ ವಿಶೇಷ ಅತಿಥಿಯಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಬಿ.ಎಮ್ ಫಾರೂಕ್, ಬಿಕೆಎಫ್ ಅಧ್ಯಕ್ಷರಾದ ಡಾ.ಬಿ.ಕೆ ಯೂಸುಫ್, ಬಿಡಬ್ಲ್ಯೂಎಫ್ ಅಧ್ಯಕ್ಷರಾದ ಮಹಮ್ಮದ್ ಆಲಿ ಉಚ್ಚಿಲ್, ಮಮ್ತಾಜ್ ಆಲಿ, ಎಸ್ ಎಮ್ ಬಶೀರ್, ಕೆ.ಎಸ್ ಶೇಕ್ ಕರ್ನಿರೆ ಮಾತನಾಡಿದರು. ತನ್ವೀರ್ ಅಹ್ಮದ್ ಮತ್ತು ಡಾ. ಕಾಪು ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಬಿಸಿಸಿಐ ಮಂಗಳೂರಿನ ಉಪಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಕಾರ್ಯದರ್ಶಿ ಮಹಮ್ಮದ್ ನಿಸಾರ್, ಖಜಾಂಚಿ ಮನ್ಸೂರ್ ಅಹಮದ್, ಬಿಸಿಸಿಐ ಟ್ರಸ್ಟಿಗಳಾದ ರಿಯಾಜ್ ಬಾವ, ಶೌಕತ್, ಮಹಮ್ಮದ್ ಹಾರಿಸ್, ಆಸಿಫ್ ಹೋಮ್ ಪ್ಲಸ್, ನಾಸಿರ್ ಲಕ್ಕೀ ಸ್ಟಾರ್, ಅಸ್ಗರ್ ಅಲಿ ಡೆಕ್ಕನ್ , ಶರೀಫ್ ಜೋಕಟ್ಟೆ, ಅಬ್ದುಲ್ ರಝಾಕ್,ಆಸಿಫ್ ಅಮೇಕೋ, ಬಶೀರ್ ರಿಯಾದ್, ಅಬ್ದುಲ್ಲಾ ಮೋನು ಕತಾರ್, ಯು.ಟಿ ಇಫ್ತಿಕಾರ್, ಹಿದಾಯ ಫೌಂಡೇಶನ್ ನ ಚೇರ್ಮೆನ್ ಕಾಸಿಮ್ ಅಹಮದ್ ಎಚ್ಕೆ, ನಂಡೆ ಪೆಂಙಲ್ ಅಧ್ಯಕ್ಷ ನೌಷದ್ ಸೂರಲ್ಪಾಡಿ, ಮನ್ಸೂರ್ ಬಹ್ರೈನ್, ಮುಸ್ತಫಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here