ಬಳ್ಳಾರಿಗೆ ಬಂದಿದ್ದೀನಿ ಬಾರೋ ಸೋಮಶೇಖರರೆಡ್ಡಿ; ಎಲ್ಲಿದೆ ನಿನ್ನ ಖಡ್ಗ: ಜಮೀರ್ ಅಹ್ಮದ್

0
72

ನ್ಯೂಸ್ ಕನ್ನಡ ವರದಿ: ಉಫ್ ಅಂದ್ರೆ ಯಾರೋ ಹಾರೋಗ್ತರೆ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದ್ದರು. ಖಡ್ಗ ತಂದರೆ ಏನಾಗುತ್ತದೆ ಎಂದಿದ್ದರು. ಈಗ ಬಂದಿದ್ದೀನಿ ಬಾರೋ. ಎಲ್ಲಿದೆ ನಿನ್ನ ಖಡ್ಗ’ ಎಂದು ಶಾಸಕ ಜಮೀರ್ ಅಹ್ಮದ್ ಸವಾಲು ಹಾಕಿದರು.

ನಗರಕ್ಕೆ ಸೋಮವಾರ ಬೆಂಬಲಿಗರೊಂದಿಗೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಶಾಂತಿ ಭಂಗ ಮಾಡುವುದಿಲ್ಲ. ನಮಗೆ ಪೊಲೀಸೆಂದರೆ ಗೌರವವಿದೆ. ನಮ್ಮನ್ನು ಬಂಧಿಸುವುದಾದರೆ ಬಂಧಿಸಲಿ. ಗುಂಡು ಹೊಡೆಯುವುದಾದರೆ ಹೊಡೆಯಲಿ’ ಎಂದರು.

‘ನಾವೇನೂ ಸುಮ್ಮನೇ ನಮ್ಮಷ್ಟಕ್ಕೇ ಬಂದಿಲ್ಲ. ರೆಡ್ಡಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಬಂದಿರೋದು. ಕಾಂಗ್ರೆಸ್ ಪಕ್ಷದ ವತಿಯಿಂದ ‌ಬಂದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಇಡೀ ದೇಶದಲ್ಲೇ ಪ್ರತಿಭಟನೆ ನಡೆದಿದೆ. ಅದಕ್ಕೆ ಕಾಂಗ್ರೆಸ್ ಪಕ್ಷದ ಅನುಮತಿ ತಗೋಬೇಕಾಗಿಲ್ಲ’ ಎಂದು ಪ್ರತಿಪಾದಿಸಿದರು.

ನಗರದ ಕಂಟ್ರಿ ಕ್ಲಬ್ ಬಳಿಯೇ ಪೊಲೀಸರು ಜಮೀರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಅಹಂಬಾವಿ ಪ್ರದೇಶದಲ್ಲಿರುವ ರೆಡ್ಡಿ ಅವರ ಮನೆ ಮುಂದೆ ಧರಣಿ ನಡೆಸುವ ಜಮೀರ್ ಅಹ್ಮದ್ ಅವರ ಉದ್ದೇಶ ಈಡೇರಲಿಲ್ಲ. ಸ್ಥಳೀಯ ಕಾಂಗ್ರೆಸ್ ಮುಖಂಡರ ಬೆಂಬಲ ಇಲ್ಲದಿದ್ದುದರಿಂದ ಜಮೀರ್ ಅವರ ಬೆಂಬಲಿಗರು ಬೇರೆ ಊರುಗಳಿಂದ ಬಂದಿದ್ದರು.

LEAVE A REPLY

Please enter your comment!
Please enter your name here