ಮದ್ರಸಾಗಳು ನಾಥೂರಾಮ್ ಗೋಡ್ಸೆ, ಪ್ರಜ್ಞ ಸಿಂಗ್ ರಂತಹ ಭಯೋತ್ಪಾದಕರನ್ನು ಸೃಷ್ಟಿಸುವುದಿಲ್ಲ: ಅಜಂ ಖಾನ್

0
993

ನ್ಯೂಸ್ ಕನ್ನಡ ವರದಿ: (12.06.19): ಬಿಜೆಪಿ ಮತ್ತು ಕೇಂದ್ರ ಸರಕಾರ ಪ್ರಾಯೋಜಿತ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುತ್ತಲೇ ಸುದ್ದಿಯಾಗುವ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಇದೀಗ ಕೇಂದ್ರ ಸರಕಾರಕ್ಕೆ ಟಾಂಗ್ ನೀಡಿದ್ದಾರೆ. ಮದ್ರಸಾಗಳನ್ನು ಮುಖ್ಯವಾಹಿನಿ ಶಿಕ್ಷಣ ವ್ಯವಸ್ಥೆಯೊಂದಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸರಕಾರದ ನೂತನ ಯೋಜನೆಯ ಕುರಿತಾದಂತೆ ಮಾತನಾಡಿದ ಅಜಂ ಖಾನ್, ಮದ್ರಸಾಗಳು ಯಾವತ್ತೂ ನಾಥೂರಾಮ ಗೋಡ್ಸೆ, ಪ್ರಜ್ಞಾ ಸಿಂಗ್ ರಂತಹ ಭಯೋತ್ಪಾದಕರನ್ನು ಸೃಷ್ಟಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ನಾಥೂರಾಮ್​ ಗೋಡ್ಸೆಯ ಚಿಂತನೆಗಳನ್ನು ಪ್ರಚಾರ ಮಾಡುವವರು ಪ್ರಜಾಪ್ರಭುತ್ವಕ್ಕೆ ಶತ್ರುಗಳು ಹಾಗೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಶಿಕ್ಷೆಗೊಳಗಾದವರನ್ನು ಗೌರವಿಸಲಾಗುವುದಿಲ್ಲ ಎಂದು ಮೊದಲು ಘೋಷಣೆ ಮಾಡಬೇಕು. ನಾಥೂರಾಮ್ ಗೋಡ್ಸೆಯಂತವರು ಹಾಗೂ ಪ್ರಜ್ಞಾ ಸಿಂಗ್​ರಂತಹ ವ್ಯಕ್ತಿತ್ವದವರನ್ನು ಮದರಸಾಗಳು ರೂಪಿಸುವುದಿಲ್ಲ . ಮದರಸಾಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಬಯಸುವುದೇ ಆದರೆ ಮೊದಲು ಅದರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಮದರಸಾಗಳಲ್ಲಿ ಧಾರ್ಮಿಕ ವಿಚಾರಗಳನ್ನು ಬೋಧಿಸಲಾಗುತ್ತದೆ. ಹಾಗೇ ಇಂಗ್ಲಿಷ್​, ಹಿಂದಿ, ಗಣಿತವನ್ನೂ ಕಲಿಸಲಾಗುತ್ತದೆ. ಮದರಸಾಗಳಿಗೆ ಕಟ್ಟಡ ಕಟ್ಟಿಕೊಡಿ. ಆ ಕಟ್ಟಡಗಳಿಗೆ ಪೀಠೋಪಕರಣಗಳನ್ನು ಪೂರೈಸಿ. ಅಲ್ಲದೆ, ಮಧ್ಯಾಹ್ನದ ಊಟ ನೀಡಲು ಕ್ರಮ ಕೈಗೊಳ್ಳಿ ಎಂದು ರಾಂಪುರ ಸಂಸದ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here