ಆರೆಸ್ಸೆಸ್ ನಿಂದ ಅಯೋಧ್ಯೆಯಲ್ಲಿ ಬೃಹತ್ ನಮಾಜ್ ಹಾಗೂ ಕುರಾನ್ ಪಠಣ ಆಯೋಜನೆ!

0
6343

ನ್ಯೂಸ್ ಕನ್ನಡ ವರದಿ-(11.07.18): ಇದೇನಿದು ಹೊಸ ಸುದ್ದಿ ಎಂದು ಆಶ್ಚರ್ಯಚಕಿತರಾಗಬೇಡಿ. ಹೌದು! ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಸಾಮೂಹಿಕ ನಮಾಝ್ ಕಾರ್ಯಕ್ರಮ ಹಾಗೂ ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಪಠಣವು ನಡೆಯಲಿದೆ. ಇಷ್ಟೊಂದು ಬೃಹತ್ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಯಾಗುತ್ತಿದ್ದು, ಇದರ ನೇತೃತ್ವವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ವಹಿಸಿಕೊಂಡಿದೆ. ತನ್ನ ಮುಸ್ಲಿಮ್ ವಿರೋಧಿ ಹಣೆಪಟ್ಟಿಯಿಂದ ಹೊರ ಬರಲು ಪ್ರಯತ್ನಿಸುತ್ತಿರುವ ಆರೆಸ್ಸೆಸ್ ಈ ಯೋಜನೆಯನ್ನು ರೂಪಿಸಿದೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಸವಯಂಸೇವಕ ಸಂಘದ ಅಂಗಸಂಸ್ಥೆಯಾಗಿರುವ ಮುಸ್ಲಿಮ್ ರಾಷ್ಟ್ರೀಯ ಮಂಚ್ ಈ ಸಭೆಯನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಹಿಂದೂಗಳು ಸೇರಿದಂತೆ 1,500 ಮುಸ್ಲಿಮ್ ಉಲಮಾಗಳು (ಧಾರ್ಮಿಕ ವಿದ್ವಾಂಸರು) ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಕಾರ್ಯಕ್ರಮದಲ್ಲಿ ಮೊದಲಿಗೆ ಅಂಗಶುದ್ಧಿ ನಡೆಸಿದ ಬಲಿಕ ಸಾಮೂಹಿಕ ನಮಾಝ್ ನೆರವೇರಿಸಲಾಗುವುದು. ಬಳಿಕ ಕುರಾನ್ ವಚನವನ್ನು 5 ಲಕ್ಷ ಬಾರಿ ಪಠಿಸಿ, ಸೂಫಿ ಸಂತರುಗಳ ಸಮಾಧಿಯನ್ನು ಸಂದರ್ಶಿಸಲಾಗುವುದು ಎಂದು ತಿಳಿದು ಬಂದಿದೆ. ಕಾರ್ಯಕ್ರಮವು ನಾಳೆ ನಡೆಯಲಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here