ಶ್ರೀಲಂಕಾ: ಮುಸ್ಲಿಮರನ್ನು ಗುರಿಯಾಗಿಸಿ ದಾಳಿ: ಓರ್ವ ಮೃತ್ಯು!

0
194

ನ್ಯೂಸ್ ಕನ್ನಡ ವರದಿ(14.5.19): ಕೊಲಂಬೊ: ಶ್ರೀಲಂಕಾದ ಚರ್ಚ್ ಹೊಟೇಲ್ಗಳಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಮುಸ್ಲಿಂ ಜನರನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿದ್ದು ಈ ನಡುವೆ ಒಬ್ಬರು ಗುಂಪು ಹಲ್ಲೆಗೆ ಬಲಿಯಾಗಿದ್ದಾರೆ. ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಕರ್ಫ್ಯೂ ಹೇರಲಾಗಿದೆ. ಪುಟ್ಟಲಾಂ ಜಿಲ್ಲೆಯಲ್ಲಿ ಗಲಭೆ ಶುರುವಾಗಿದ್ದು, ಅಂಗಡಿಗೆ ನುಗ್ಗಿ 45 ವರ್ಷದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.

“ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಅನಾಮಧೇಯ ಗುಂಪುಗಳು ಪ್ರಯತ್ನಿಸುತ್ತಿವೆ. ದೇಶದ ಸ್ಥಿರತೆಯನ್ನು ಕಾಪಾಡಲು ಕರ್ಫ್ಯೂ ಘೋಷಿಸಲಾಗಿದೆ. ದೇಶದ ವಾಯವ್ಯ ಭಾಗದ ಹಲವು ಕಡೆ ಗಲಭೆಯ ಮೂಲಕ ತೊಂದರೆ ಸೃಷ್ಟಿಸುತ್ತಿದ್ದು ಆಸ್ತಿ ಪಾಸ್ತಿ ನಷ್ಟ ಮಾಡುತ್ತಿದೆ ” ಎಂದು ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.

ಭದ್ರತಾಪಡೆಗಳು ಹಾಗೂ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರೂ ಗುಂಪುಗಳು ಗಲಭೆ ಉಂಟು ಮಾಡಲು ಪ್ರಯತ್ನಿಸಬಹುದು ಎಂದಿದ್ದಾರೆ. ಪ್ರಕರಣಗಳು ದಾಖಲಾಗಿರುವ ಪ್ರದೇಶಗಳಲ್ಲಿ ಜನರು ಮನೆಯಿಂದ ಬರೆದಂತೆ ಆದೇಶಿಸಲಾಗಿದೆ. ಸಾಮಾಜಿಕ ಮಾಧ್ಯಮದ ಬಳಕೆಗೆ ನಿರ್ಬಂಧ ಹೀರುವಂತೆ ದೂರಸಂಪರ್ಕ ಪ್ರಾಧಿಕಾರವು ಅಂತರ್ಜಾಲ ಸೇವಾದಾರರಿಗೆ ಸೂಚಿಸಿದೆ. ವಾಟ್ಸಾಪ್, ಫೇಸ್ ಬುಕ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಸರ್ಕಾರ ನಿಷೇಧಿಸಿದೆ.

LEAVE A REPLY

Please enter your comment!
Please enter your name here